ಭಾರತದ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

England vs India: ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಜುಲೈ 1 ರಿಂದ ಶುರುವಾಗಲಿದೆ. ಇಂಗ್ಲೆಂಡ್​ನಲ್ಲಿ ಜರುಗಲಿರುವ ಐದು ಪಂದ್ಯಗಳ ಈ ಸರಣಿಯ ಬಳಿಕ ಟೀಮ್ ಇಂಡಿಯಾ ಮೂರು ಮ್ಯಾಚ್​ಗಳ ಏಕದಿನ ಸರಣಿಯನ್ನೂ ಸಹ ಆಡಲಿದೆ. ಈ ಸರಣಿಗಾಗಿ ಆಯ್ಕೆಯಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಭಾರತದ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ
England
Image Credit source: GettyImages

Updated on: Jun 23, 2026 | 8:02 AM

ಭಾರತದ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಜುಲೈ 1 ರಿಂದ ಶುರುವಾಗಲಿರುವ ಈ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್​ 17 ಸದಸ್ಯರುಗಳನ್ನು ಆಯ್ಕೆ ಮಾಡಿದ್ದಾರೆ. ಇನ್ನು ಈ ತಂಡದ ನಾಯಕನಾಗಿ ಯುವ ಸ್ಫೋಟಕ ದಾಂಡಿಗ ಹ್ಯಾರಿ ಬ್ರೂಕ್ ಕಾಣಿಸಿಕೊಳ್ಳಲಿದ್ದಾರೆ.

ಚೊಚ್ಚಲ ಅವಕಾಶ:

17 ಸದಸ್ಯರುಗಳ ತಂಡದಲ್ಲಿ ಸಸೆಕ್ಸ್ ತಂಡದ 22 ವರ್ಷದ ಯುವ ಆಲ್ ರೌಂಡರ್ ಜೇಮ್ಸ್ ಕೋಲ್ಸ್ ಕೂಡ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಲಯನ್ಸ್ ಪರ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಯಾರು ಇನ್? ಯಾರು ಔಟ್?

ಟಿ20 ವಿಶ್ವಕಪ್‌ ವೇಳೆ ಹೊರಗುಳಿದಿದ್ದ ಜೋರ್ಡನ್ ಕಾಕ್ಸ್, ಸೋನಿ ಬೇಕರ್ ಮತ್ತು ಸಾಕಿಬ್ ಮಹಮೂದ್ ಈ ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ. ಹಾಗೆಯೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಬ್ರೈಡನ್ ಕಾರ್ಸ್ ಮತ್ತು ಆಲ್ ರೌಂಡರ್ ಜೇಮಿ ಓವರ್ಟನ್ ಈ ಸರಣಿಯಿಂದ ಹೊರಗುಳಿದಿದ್ದಾರೆ.

ಇನ್ನುಳಿದಂತೆ ಅನುಭವಿ ಆಟಗಾರರಾದ ಜೋಸ್ ಬಟ್ಲರ್, ಫಿಲ್ ಸಾಲ್ಟ್, ಜೋಫ್ರಾ ಆರ್ಚರ್ ಮತ್ತು ಆದಿಲ್ ರಶೀದ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅದರಂತೆ ಇಂಗ್ಲೆಂಡ್ ಟಿ20 ತಂಡ ಈ ಕೆಳಗಿನಂತಿದೆ…

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್),  ಫಿಲ್ ಸಾಲ್ಟ್, ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್,  ಜೋಫ್ರಾ ಆರ್ಚರ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್,  ಆದಿಲ್ ರಶೀದ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ಲ್ಯೂಕ್ ವುಡ್, ಸೋನಿ ಬೇಕರ್.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ,  ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ.

ಭಾರತ vs ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿ

ಪಂದ್ಯ  ದಿನಾಂಕ (2026) ಕ್ರೀಡಾಂಗಣ  ಸ್ಥಳ ಸಮಯ (IST)
1ನೇ ಟಿ20 ಜುಲೈ 1, ಬುಧವಾರ ರಿವರ್‌ಸೈಡ್ ಗ್ರೌಂಡ್ ಚೆಸ್ಟರ್-ಲೆ-ಸ್ಟ್ರೀಟ್ ರಾತ್ರಿ 10:00 ಗಂಟೆಗೆ
2ನೇ ಟಿ20 ಜುಲೈ 4, ಶನಿವಾರ ಓಲ್ಡ್ ಟ್ರಾಫೋರ್ಡ್ ಮ್ಯಾಂಚೆಸ್ಟರ್ ಸಂಜೆ 7:00 ಗಂಟೆಗೆ
3ನೇ ಟಿ20 ಜುಲೈ 7, ಮಂಗಳವಾರ ಟ್ರೆಂಟ್ ಬ್ರಿಡ್ಜ್ ನಾಟಿಂಗ್ಹ್ಯಾಮ್ ರಾತ್ರಿ 10:00 ಗಂಟೆಗೆ
4ನೇ ಟಿ20 ಜುಲೈ 9, ಗುರುವಾರ ಸೀಟ್ ಯುನಿಕ್ ಸ್ಟೇಡಿಯಂ ಬ್ರಿಸ್ಟಲ್ ರಾತ್ರಿ 10:00 ಗಂಟೆಗೆ
5ನೇ ಟಿ20 ಜುಲೈ 11, ಶನಿವಾರ ದಿ ರೋಸ್ ಬೌಲ್ ಸೌತಾಂಪ್ಟನ್ ಸಂಜೆ 7:00 ಗಂಟೆಗೆ

ಈ ಐದು ಪಂದ್ಯಗಳ ಟಿ20 ಸರಣಿ ಮುಗಿದ ಬಳಿಕ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರು ಮ್ಯಾಚ್​ಗಳ ಏಕದಿನ ಸರಣಿ ಶುರುವಾಗಲಿದೆ.

 

Follow Us