AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್:​ 12 ಅಂಕಗಳು ಕಡಿತ..!

England vs New Zealand: ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹೀನಾಯವಾಗಿ ಸೋತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್​ನಲ್ಲಿ 391 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕಲೆಹಾಕಿದ್ದು ಕೇವಲ 291 ರನ್​ಗಳು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಝಿಲೆಂಡ್ 362 ರನ್​ಗಳಿಸಿದ್ದರು. ಅದರಂತೆ ಕೊನೆಯ ಇನಿಂಗ್ಸ್​ನಲ್ಲಿ 463 ರನ್​ಗಳ ಗುರಿ ಪಡೆದ ಇಂಗ್ಲೆಂಡ್ 209 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ 253 ರನ್​ಗಳ ಭರ್ಜರಿ ಜಯ ಸಾಧಿಸಿದೆ.

 ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್:​ 12 ಅಂಕಗಳು ಕಡಿತ..!
England Image Credit source: GettyImages
ಝಾಹಿರ್ ಯೂಸುಫ್
|

Updated on: Jun 22, 2026 | 11:40 AM

Share

ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನಿಗದಿತ ಸಮಯಕ್ಕೆ ಓವರ್‌ಗಳನ್ನು ಪೂರ್ಣಗೊಳಿಸದ (ಸ್ಲೋ ಓವರ್ ರೇಟ್) ಕಾರಣಕ್ಕಾಗಿ ಇಂಗ್ಲೆಂಡ್‌ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC)  ಸರಣಿಯ 12 ಅಂಕಗಳನ್ನು ಕಡಿತಗೊಳಿಸಲಾಗಿದೆ. ಹಾಗೆಯೇ ಆಟಗಾರರಿಗೆ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಿದ್ದಾರೆ.

12 ಅಂಕಗಳು ಕಡಿತವೇಕೆ?

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ನಿಯಮಗಳ ಪ್ರಕಾರ, ಪಂದ್ಯದಲ್ಲಿ ನಿಗದಿತ ಸಮಯಕ್ಕಿಂತ ಕಡಿಮೆ ಬೌಲಿಂಗ್ ಮಾಡಿದ ಪ್ರತಿ ಓವರ್‌ಗೆ ತಂಡವು ಒಂದು ಚಾಂಪಿಯನ್‌ಶಿಪ್ ಅಂಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಂತೆ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನಿಗದಿತ ಸಮಯದಲ್ಲಿ ಓವರ್​ಗಳನ್ನು ಪೂರ್ಣಗೊಳಿಸಿರಲಿಲ್ಲ. ಅಲ್ಲದೆ 12 ಓವರ್​ಗಳು ಹಿಂದಿದ್ದ ಕಾರಣ 12 ಅಂಕಗಳನ್ನು ಕಡಿತಗೊಳಿಸಲಾಗಿದೆ.

ಹಾಗೆಯೇ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಪ್ರತಿ ಓವರ್ ತಡವಾದರೆ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ. 5 ರಷ್ಟು ದಂಡ ವಿಧಿಸಲಾಗುತ್ತದೆ. ಇಲ್ಲಿ ಗರಿಷ್ಠ ಮಿತಿ ಪ್ರಮಾಣದಂತೆ ಇಂಗ್ಲೆಂಡ್ ತಂಡಕ್ಕೆ ಶೇ. 50 ರಷ್ಟು ದಂಡ ವಿಧಿಸಲಾಗಿದೆ.

ಇಂಗ್ಲೆಂಡ್‌ಗೆ ಭಾರಿ ಹಿನ್ನಡೆ:

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ಅಂಕಗಳ ಕಡಿತವು ಇಂಗ್ಲೆಂಡ್ ತಂಡದ WTC ಫೈನಲ್ ತಲುಪುವ ಕನಸಿಗೆ ಭಾರಿ ಹೊಡೆತ ನೀಡಿದೆ. ಏಕೆಂದರೆ 12 ಅಂಕಗಳ ಕಡಿತದೊಂದಿಗೆ ಇದೀಗ ಪಾಯಿಂಟ್ಸ್ ಪರ್ಸೆಂಟೇಜ್ 26.38 ಕ್ಕೆ ಕುಸಿದಿದೆ.

  • ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ WTC ಪಾಯಿಂಟ್ಸ್ ಪರ್ಸೆಂಟೇಜ್ (PCT) ಶೇ. 34.72 ರಷ್ಟಿತ್ತು.
  • ಸ್ಲೋ ಓವರ್​ ರೇಟ್ ತಪ್ಪಿನ ಶಿಕ್ಷೆಯಿಂದಾಗಿ 12 ಅಂಕಗಳನ್ನು ಕಳೆದುಕೊಂಡಿರುವ ಇಂಗ್ಲೆಂಡ್ ತಂಡದ ಪ್ರಸ್ತುತ  WTC ಪಾಯಿಂಟ್ಸ್ ಪರ್ಸೆಂಟೇಜ್ (PCT)  26.38 ಕ್ಕೆ ಕುಸಿದಿದೆ.

ಈ ಅಂಕಗಳ ಕಡಿತದೊಂದಿಗೆ ಸದ್ಯ ಇಂಗ್ಲೆಂಡ್ WTC ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಮುಂದುವರಿದಿದ್ದರೂ, ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳೊಂದಿಗಿನ ಅಂತರ ಮತ್ತಷ್ಟು ಹೆಚ್ಚಾಗಿದೆ.

ಹಾಗೆಯೇ ಕೇವಲ 38 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ರೇಸ್​ನಿಂದ ಹೊರಬಿದ್ದಿದೆ ಎಂದೇ ಹೇಳಬಹುದು. ಏಕೆಂದರೆ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ವಿರುದ್ಧದ ಸರಣಿಗಳನ್ನು ಗೆದ್ದರೂ ಇಂಗ್ಲೆಂಡ್ ತಂಡ ಫೈನಲ್​ಗೇರುವುದಿಲ್ಲ.

ಇದನ್ನೂ ಓದಿ: ಗೋಲುಗಳ ಸುರಿಮಳೆ… ಫಿಫಾ ವಿಶ್ವಕಪ್​ನಲ್ಲಿ ಹೊಸ ಇತಿಹಾಸ

ಬದಲಾಗಿ ಟಾಪ್-4 ನಲ್ಲಿರುವ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಶ್ರೀಲಂಕಾ ತಂಡಗಳ ಸರಣಿ ಸೋಲುಗಳನ್ನು ಕೂಡ ಇಂಗ್ಲೆಂಡ್ ಎದುರು ನೋಡಬೇಕಾಗುತ್ತದೆ. ಹೀಗೆ ನಾಲ್ಕೈದು ತಂಡಗಳ ಫಲಿತಾಂಶದ ಆಧಾರದ ಮೇಲೆ ಆಂಗ್ಲರ ಪಡೆ ಫೈನಲ್​ಗೇರುವುದು ಅಸಾಧ್ಯದ ಮಾತು. ಹೀಗಾಗಿಯೇ ಅಂಕಗಳ ಕಡಿತದೊಂದಿಗೆ ಇಂಗ್ಲೆಂಡ್ ತಂಡದ ಫೈನಲ್ ಕನಸು ಕೂಡ ಕಮರಿದೆ ಎಂದೇ ಹೇಳಬಹುದು.

Follow Us