ಕೊರೊನಾ ಮಹಾಮಾರಿ ಭಾರತದ ಹಣೆ ಬರಹವನ್ನೇ ಬದಲಾಯಿಸಿದೆ. ಪ್ರತಿದಿನ ಹೊಸ ಪ್ರಕರಣಗಳಲ್ಲಿ ದಾಖಲೆ ಹೆಚ್ಚುತ್ತಿದೆ. ಜನರು ಈ ಮಹಾಮಾರಿಯ ದಾಳಿಗೆ ಸಿಲುಕಿ ಇನ್ನಿಲ್ಲದಂತೆ ಬಳಲುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ವೈದ್ಯಕೀಯ ವ್ಯವಸ್ಥೆಯು ತೀರ ತಲೆಕಡೆಸಿಕೊಂಡಿದೆ. ಸರ್ಕಾರ ಈ ಸೋಂಕನ್ನು ತಡೆಕಟ್ಟಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಸೋಂಕಿತರ ಜೀವನವು ಆಮ್ಲಜನಕದ ಮೇಲೆ ನಿಂತಿದೆ. ಭಾರತದಲ್ಲಿ ಈಗಿರುವ ಸಂದರ್ಭಗಳು ಭಯ ಹುಟ್ಟಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಜೀವವನ್ನು ಉಳಿಸುವುದು ಸರ್ಕಾರಕ್ಕೆ ದೊಡ್ಡ ಪ್ರಶ್ನೆಯಾಗಿದೆ.
ನೆರೆಹೊರೆಯ ರಾಷ್ಟ್ರಗಳಿಗೂ ಸಹಾಯ ಮಾಡಿದೆ
ಈ ಕಠಿಣ ಪರಿಸ್ಥಿತಿಯನ್ನು ಎದುರಿಸುವುದರೊಂದಿಗೆ ಭಾರತವು ತನ್ನ ನೆರೆಹೊರೆಯ ರಾಷ್ಟ್ರಗಳಿಗೂ ಸಹಾಯ ಮಾಡಿದೆ. ಔಷಧಿ ಮತ್ತು ಆಮ್ಲಜನಕದ ನೆರವಿಗೆ ರಷ್ಯಾ ಕೆಲವು ಉಪಕ್ರಮಗಳನ್ನು ಕೈಗೊಳ್ಳಲಿದೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಭಾರತದ ಸದ್ಯದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲೂ ಭಾರತಕ್ಕಾಗಿ ಪ್ರಾರ್ಥನೆಗಳು
ಹೌದು, ಅದು ರಾಜಕೀಯದ ಹಂತವಾಗಲಿ ಅಥವಾ ಕ್ರಿಕೆಟ್ ಕ್ಷೇತ್ರವಾಗಲಿ, ಭಾರತ-ಪಾಕಿಸ್ತಾನವು ಪ್ರಸ್ತುತ ಪರಿಸ್ಥಿತಿಯಲ್ಲಿ ನದಿಯ ಎರಡು ದಂಡೆಗಳಂತೆ. ಆದರೆ, ಕೊರೊನಾದಿಂದ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪಾಕಿಸ್ತಾನದಲ್ಲೂ ಭಾರತದ ಸುಧಾರಣೆಗಾಗಿ ಪ್ರಾರ್ಥನೆ ನಡೆಸಲಾಗುತ್ತಿದೆ. ಮಾಜಿ ಕ್ರಿಕೆಟಿಗ ಬೌಲರ್ ಶೋಯೆಬ್ ಅಖ್ತರ್ ಕೂಡ ಭಾರತದ ಒಳಿತಿಗಾಗಿ ಪ್ರಾರ್ಥನೆ ಪ್ರಾರಂಭಿಸಿದ್ದಾರೆ.
ಶೋಯೆಬ್ ಅಖ್ತರ್ ಟ್ವೀಟ್ – ಒಟ್ಟಾಗಿ ನಾವು ತೊಂದರೆಯಲ್ಲಿದ್ದೇವೆ
ನಾನು ಭಾರತದ ಜನರಿಗಾಗಿ ಪ್ರಾರ್ಥಿಸುತ್ತೇನೆ. ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುತ್ತದೆ ಮತ್ತು ಭಾರತ ಸರ್ಕಾರ ಶೀಘ್ರದಲ್ಲೇ ಅದನ್ನು ನಿಭಾಯಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಕಷ್ಟದ ಕ್ಷಣದಲ್ಲಿ ನಾವೆಲ್ಲರೂ ಒಟ್ಟಾಗಿರುತ್ತೇವೆ ಎಂದು ಶೋಯೆಬ್ ಟ್ವೀಟ್ ಮಾಡಿದ್ದಾರೆ.
Prayers with people of India. I hope things come in control soon & their government is able to handle the crisis better. We are all in it together. #IndiaNeedsOxygen #IndiaFightsCOVID19 #oneworld
— Shoaib Akhtar (@shoaib100mph) April 23, 2021
ಪಾಕಿಸ್ತಾನದಲ್ಲಿ ಟ್ರೆಂಡ್ ಆಗ್ತಿದೆ ಇಂಡಿಯಾನೀಡ್ಆಕ್ಸಿಜನ್
ಕೊರೊನಾದಿಂದ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನಿಸಿದರೆ, ಭಾರತದಲ್ಲಿ ಆಮ್ಲಜನಕದ ಕೊರತೆಯಿದೆ. ದೇಶದ ಪ್ರತಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸೋಂಕಿತರು ಬಳಲುತ್ತಿದ್ದಾರೆ. ಕೊರೊನಾ ಸೋಂಕಿತ ಅನೇಕ ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾಯುತ್ತಿದ್ದಾರೆ. #Indianeedsoxygen ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಟ್ರೆಂಡ್ ಆಗಲು ಇದು ಕಾರಣವಾಗಿದೆ.