ಕ್ರಿಕೆಟ್ ಜಗತ್ತಿನಲ್ಲಿ ಏನಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇನ್ನೇನು ಈ ತಂಡ ಗೆಲ್ಲುತ್ತದೆ ಅಂದುಕೊಂಡಾಗ ಹಠಾತ್ತನೆ ಸೋಲುತ್ತದೆ. ಸೋಲುತ್ತದೆ ಎಂದ ತಂಡವು ಇದ್ದಕ್ಕಿದ್ದಂತೆ ಗೆಲ್ಲುತ್ತದೆ. ಈ ರೀತಿಯ ಘಟನೆಗಳು ಸಂಭವಿಸುವುದು ಅಪರೂಪ. ಇತ್ತೀಚೆಗಷ್ಟೇ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ದ್ವಿಶತಕ ಬಾರಿಸಿ ವಿಶ್ವಕಪ್ನಲ್ಲಿ ಆಸ್ಟ್ರೇಲಿಯ ತಂಡವನ್ನು ಅಫ್ಘಾನಿಸ್ತಾನ ವಿರುದ್ಧ ಯಾರೂ ಊಹಿಸಲಾಗದ ರೀತಿಯಲ್ಲಿ ಗೆಲ್ಲಿಸಿದ್ದರು. ಮ್ಯಾಕ್ಸ್‌ವೆಲ್ ಅವರ ಅದ್ಭುತ ಇನ್ನಿಂಗ್ಸ್‌ನ ನಂತರ, ಇದೀಗ ಅವರದೇ ದೇಶದ ಆಟಗಾರ ಯಾರೂ ನಂಬಲಾಗದ ರೀತಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಮೂರನೇ ಡಿವಿಷನ್ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಒಬ್ಬ ಬೌಲರ್ 6 ಎಸೆತಗಳಲ್ಲಿ 6 ವಿಕೆಟ್ ಪಡೆದು ಮಿಂಚಿದ್ದಾರೆ.
ಮುಗೀರಬ ನೆರಂಗ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ಮತ್ತು ಸರ್ಫರ್ಸ್ ಪ್ಯಾರಡೈಸ್ ನಡುವೆ ಈ ಪಂದ್ಯ ನಡೆದಿದೆ. ಇದರಲ್ಲಿ ಸರ್ಫರ್ಸ್ ಪ್ಯಾರಡೈಸ್ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ ಕೇವಲ ಐದು ರನ್‌ಗಳ ಅವಶ್ಯಕತೆಯಿತ್ತು. 4 ವಿಕೆಟ್ ಕಳೆದುಕೊಂಡಿತ್ತಷ್ಟೆ. ಈ ತಂಡವು ಸುಲಭವಾಗಿ ಪಂದ್ಯವನ್ನು ಗೆಲ್ಲುತ್ತದೆ ಎಂದು ನಂಬಲಾಗಿತ್ತು. ಆದರೆ ಕೊನೆಯ ಓವರ್‌ನಲ್ಲಿ ನಡೆದಿದ್ದು ಪವಾಡ.
ಸೆಮಿಫೈನಲ್ನಲ್ಲೂ ಬೌಲಿಂಗ್ ಮಾಡಲಿದ್ದಾರೆ ವಿರಾಟ್ ಕೊಹ್ಲಿ..!
ಮುಗೀರಬ ನೆರಂಗ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ನಾಯಕ ಗರೆತ್ ಮಾರ್ಗನ್ ಕೊನೆಯ ಓವರ್ ಬೌಲ್ ಮಾಡಿದರು. ಇವರು ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಆ ಬಳಿಕ ಎರಡನೇ ಎಸೆತ ಹಾಗೂ ಮೂರನೇ ಎಸೆತದಲ್ಲೂ ವಿಕೆಟ್ ಕಿತ್ತು ಹ್ಯಾಟ್ರಿಕ್ ಸಾಧನೆ ಮಾಡಿದರು. ಪಂದ್ಯ ರೋಚಕತೆ ಸೃಷ್ಟಿಸಿತು. ಸರ್ಫರ್ಸ್ ಪ್ಯಾರಡೈಸ್ ಗೆಲುವಿಗೆ ಇನ್ನೂ 3 ಎಸೆತಗಳಲ್ಲಿ 5 ರನ್‌ಗಳ ಅಗತ್ಯವಿತ್ತು. ನಂತರ ಮಾರ್ಗನ್ ಮುಂದಿನ ಮೂರು ಎಸೆತಗಳಲ್ಲೂ ಮೂರು ವಿಕೆಟ್ ಪಡೆದರು. ಈ ಮೂಲಕ 6 ಎಸೆತಗಳಲ್ಲಿ 6 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಗರೆಥ್ ಮಾರ್ಗನ್ ಎಸೆದ ಕೊನೆಯ ಓವರ್ ಮೊದಲ ನಾಲ್ಕು ಎಸೆತಗಳಲ್ಲಿ ಬ್ಯಾಟರ್ ಕ್ಯಾಚ್ ನೀಡಿ ನಿರ್ಗಮಿಸಿದರೆ, ಕೊನೆಯ ಇಬ್ಬರು ಬ್ಯಾಟ್ಸ್‌ಮನ್‌ಗಳು ಬೌಲ್ಡ್ ಆದರು. ಈ ಪಂದ್ಯದಲ್ಲಿ ಮಾರ್ಗನ್ 7 ಓವರ್ ಗಳಲ್ಲಿ 16 ರನ್ ನೀಡಿ 7 ವಿಕೆಟ್ ಪಡೆದರು. ಆಟಗಾರನೊಬ್ಬ ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದದ್ದು ಇದೇ ಮೊದಲು. ವೃತ್ತಿಪರ ಕ್ರಿಕೆಟ್‌ನಲ್ಲಿ, ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್, ಬಾಂಗ್ಲಾದೇಶದ ಅಲ್ ಅಮೀನ್ ಹುಸೇನ್ ಮತ್ತು ಭಾರತದ ಅಭಿಮನ್ಯು ಮಿಥುನ್ ಅವರು ಓವರಿನಲ್ಲಿ ಅತಿ ಹೆಚ್ಚು ಐದು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ