AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಶರ್ಮಾ ಆಕ್ರಮಣಕಾರಿ ಆಟಕ್ಕೆ ಬ್ರೇಕ್: ಇದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್

Rohit Sharma: ಲೀಗ್ ಹಂತದಲ್ಲಿ ನ್ಯೂಝಿಲೆಂಡ್ ವಿರುದ್ಧ ಹಿಟ್​ಮ್ಯಾನ್ ಅಬ್ಬರಿಸಿರಲಿಲ್ಲ. ಅಂದರೆ ಆ ಪಂದ್ಯದಲ್ಲಿ ರೋಹಿತ್ ಶರ್ಮಾ 40 ಎಸೆತಗಳಲ್ಲಿ ಕೇವಲ 46 ರನ್ ಬಾರಿಸಿ ಔಟಾಗಿದ್ದರು. ಹೀಗಾಗಿ ಈ ಬಾರಿ ಕೂಡ ಆರಂಭದಲ್ಲಿ ನ್ಯೂಝಿಲೆಂಡ್ ಬೌಲರ್​ಗಳನ್ನು ಎಚ್ಚರಿಕೆಯಿಂದ ಎದುರಿಸಬೇಕಾದ ಅನಿವಾರ್ಯತೆ ಹಿಟ್​ಮ್ಯಾನ್ ಮುಂದಿದೆ.

ರೋಹಿತ್ ಶರ್ಮಾ ಆಕ್ರಮಣಕಾರಿ ಆಟಕ್ಕೆ ಬ್ರೇಕ್: ಇದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್
Rohit Sharma
TV9 Web
| Edited By: |

Updated on: Nov 14, 2023 | 3:58 PM

Share

ಈ ಬಾರಿಯ ವಿಶ್ವಕಪ್​ನಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಲೀಗ್ ಹಂತದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿರುವ ಹಿಟ್​ಮ್ಯಾನ್ 9 ಪಂದ್ಯಗಳಿಂದ ಕಲೆಹಾಕಿದ್ದು ಬರೋಬ್ಬರಿ 503 ರನ್​ಗಳು. ರೋಹಿತ್ ಶರ್ಮಾ ಅವರ ಈ ಸಿಡಿಲಬ್ಬರದ ಆರಂಭದಿಂದಾಗಿ ನಂತರ ಬಂದ ಬ್ಯಾಟ್ಸ್​ಮನ್​ಗಳು ಒತ್ತಡಕ್ಕೆ ಸಿಲುಕಿರಲಿಲ್ಲ ಎಂದರೆ ತಪ್ಪಾಗಲಾರದು.

ಆದರೆ ಈ ಸಿಡಿಲಬ್ಬರ ಸೆಮಿಫೈನಲ್​ನಲ್ಲಿ ಕಂಡು ಬರುವುದು ಡೌಟ್. ಏಕೆಂದರೆ ಮುಂಬೈನ ವಾಂಖೆಡೆ ಪಿಚ್​ನಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಅವರ ಪ್ರದರ್ಶನ ಎಉತ್ತಮವಾಗಿಲ್ಲ. ಅಲ್ಲದೆ, ಮುಂಬೈನ ಪಿಚ್ ಮೊದಲ 20 ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಖಂಡಿತವಾಗಿಯೂ ಸಹಕಾರಿ. ಇಂತಹ ಪರಿಸ್ಥಿತಿಯಲ್ಲಿ ಹಿಟ್​ಮ್ಯಾನ್ ತಮ್ಮ ಆಕ್ರಮಣಶೀಲತೆಯನ್ನು ಸಮತೋಲನದಲ್ಲಿರಿಸಬೇಕಾಗಿರುವುದು ಅನಿವಾರ್ಯ.

ಏಕೆಂದರೆ, ಈ ಬಾರಿಯ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ನಂತರ ಯಾವುದೇ ತಂಡ ಅತ್ಯುತ್ತಮ ವೇಗದ ದಾಳಿಯನ್ನು ಹೊಂದಿದ್ದರೆ ಅದು ನ್ಯೂಝಿಲೆಂಡ್ ಮಾತ್ರ. ನ್ಯೂಝಿಲೆಂಡ್ ತಂಡದ ಎಡಗೈ ಸ್ವಿಂಗ್ ಬೌಲರ್ ಟ್ರೆಂಟ್ ಬೌಲ್ಟ್ ಅತ್ಯುತ್ತಮ ಆರಂಭ ಒದಗಿಸಿಕೊಡಬಲ್ಲ ಬೌಲರ್. ಇನ್ನು ಟಿಮ್ ಸೌಥಿ ಔಟ್ ಸ್ವಿಂಗರ್ ಎಸೆತಗಳ ಮೂಲಕ ಮೋಡಿ ಮಾಡಿದರೆ, ವೇಗದೊಂದಿಗೆ ವಿಕೆಟ್ ಎಗರಿಸುವಲ್ಲಿ ಲಾಕಿ ಫರ್ಗುಸನ್ ನಿಸ್ಸೀಮರು.

ಇದೇ ಕಾರಣದಿಂದಾಗಿ ಲೀಗ್ ಹಂತದಲ್ಲಿ ನ್ಯೂಝಿಲೆಂಡ್ ವಿರುದ್ಧ ಹಿಟ್​ಮ್ಯಾನ್ ಅಬ್ಬರಿಸಿರಲಿಲ್ಲ. ಅಂದರೆ ಆ ಪಂದ್ಯದಲ್ಲಿ ರೋಹಿತ್ ಶರ್ಮಾ 40 ಎಸೆತಗಳಲ್ಲಿ ಕೇವಲ 46 ರನ್ ಬಾರಿಸಿ ಔಟಾಗಿದ್ದರು. ಹೀಗಾಗಿ ಈ ಬಾರಿ ಕೂಡ ಆರಂಭದಲ್ಲಿ ನ್ಯೂಝಿಲೆಂಡ್ ಬೌಲರ್​ಗಳನ್ನು ಎಚ್ಚರಿಕೆಯಿಂದ ಎದುರಿಸಬೇಕಾದ ಅನಿವಾರ್ಯತೆ ಹಿಟ್​ಮ್ಯಾನ್ ಮುಂದಿದೆ.

ಅಷ್ಟೇ ಅಲ್ಲದೆ ಮುಂಬೈ ಪಿಚ್​ನಲ್ಲಿ ಬೃಹತ್ ಮೊತ್ತ ಪೇರಿಸಲು ಇದೊಂದೇ ಅತ್ಯುತ್ತಮ ಮಾರ್ಗ. ಹೀಗಾಗಿ ರೋಹಿತ್ ಶರ್ಮಾ ಮೊದಲ 20 ಓವರ್​ಗಳ ಕಾಲ ಎಚ್ಚರಿಕೆಯಿಂದ ಕ್ರೀಸ್ ಕಚ್ಚಿ ನಿಂತರೆ ಅತ್ತ ರನ್ ಕೂಡ ಹರಿದು ಬರುತ್ತದೆ. ಇತ್ತ ನಂತರ ಬರುವ ಬ್ಯಾಟ್ಸ್​ಮನ್​ಗಳು ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತದೆ.

ಈ ಕಾರಣದಿಂದಲೇ ರೋಹಿತ್ ಶರ್ಮಾ ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ತಯಾರಿ ನಡೆಸಿದ್ದರು. ಏಕೆಂದರೆ ಬೆಂಗಳೂರಿನಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ 54 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ಅಂದರೆ ಇಲ್ಲಿ ಹಿಟ್​ಮ್ಯಾನ್ ತಮ್ಮ ಅರ್ಧಶತಕಕ್ಕಾಗಿ 44 ಎಸೆತಗಳನ್ನು ಆಡಿದ್ದರು. ಇದು ಅವರ ಹಿಂದಿನ ಎಲ್ಲಾ ಪಂದ್ಯಗಳಿಗೆ ಹೋಲಿಸಿದರೆ ನಿಧಾನಗತಿಯ ಬ್ಯಾಟಿಂಗ್‌ ಆಗಿತ್ತು.

ಇದನ್ನೂ ಓದಿ: ಹಳೆಯ ದಾಖಲೆಗಳು ಧೂಳೀಪಟ: ಹಿಟ್​ಮ್ಯಾನ್ ಹೊಸ ಸಿಕ್ಸರ್ ಕಿಂಗ್

ಹೀಗಾಗಿಯೇ ನ್ಯೂಝಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಂದ ಆಕ್ರಮಣಕಾರಿ ಆರಂಭವನ್ನು ನಿರೀಕ್ಷಿಸುವಂತಿಲ್ಲ. ಒಂದು ವೇಳೆ ಹಿಟ್​ಮ್ಯಾನ್ ಕ್ರೀಸ್ ಕಚ್ಚಿ ನಿಂತರೆ ಈ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮೊತ್ತ ಪೇರಿಸುವುದಂತು ನಿಶ್ಚಿತ.

Follow Us
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ