Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಕ್ ಆದ ಕ್ರಿಕೆಟ್ ಜಗತ್ತು: 6 ಎಸೆತಗಳಲ್ಲಿ 6 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಬೌಲರ್

six wickets in six ball: ಮುಗೀರಬ ನೆರಂಗ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ಮತ್ತು ಸರ್ಫರ್ಸ್ ಪ್ಯಾರಡೈಸ್ ನಡುವೆ ಈ ಪಂದ್ಯ ನಡೆದಿದೆ. ಇದರಲ್ಲಿ ಮುಗೀರಬ ನೆರಂಗ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ನಾಯಕ ಗರೆತ್ ಮಾರ್ಗನ್ 6 ಎಸೆತಗಳಲ್ಲಿ 6 ವಿಕೆಟ್ ಪಡೆದು ಮಿಂಚಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಮೂರನೇ ಡಿವಿಷನ್ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಇದು ಸಂಭವಿಸಿದೆ.

ಶಾಕ್ ಆದ ಕ್ರಿಕೆಟ್ ಜಗತ್ತು: 6 ಎಸೆತಗಳಲ್ಲಿ 6 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಬೌಲರ್
Gareth Morgan and Mudgeeraba Nerang team
Follow us
Vinay Bhat
|

Updated on: Nov 14, 2023 | 12:22 PM

ಕ್ರಿಕೆಟ್‌ ಜಗತ್ತಿನಲ್ಲಿ ಏನಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇನ್ನೇನು ಈ ತಂಡ ಗೆಲ್ಲುತ್ತದೆ ಅಂದುಕೊಂಡಾಗ ಹಠಾತ್ತನೆ ಸೋಲುತ್ತದೆ. ಸೋಲುತ್ತದೆ ಎಂದ ತಂಡವು ಇದ್ದಕ್ಕಿದ್ದಂತೆ ಗೆಲ್ಲುತ್ತದೆ. ಈ ರೀತಿಯ ಘಟನೆಗಳು ಸಂಭವಿಸುವುದು ಅಪರೂಪ. ಇತ್ತೀಚೆಗಷ್ಟೇ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ದ್ವಿಶತಕ ಬಾರಿಸಿ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯ ತಂಡವನ್ನು ಅಫ್ಘಾನಿಸ್ತಾನ ವಿರುದ್ಧ ಯಾರೂ ಊಹಿಸಲಾಗದ ರೀತಿಯಲ್ಲಿ ಗೆಲ್ಲಿಸಿದ್ದರು. ಮ್ಯಾಕ್ಸ್‌ವೆಲ್ ಅವರ ಅದ್ಭುತ ಇನ್ನಿಂಗ್ಸ್‌ನ ನಂತರ, ಇದೀಗ ಅವರದೇ ದೇಶದ ಆಟಗಾರ ಯಾರೂ ನಂಬಲಾಗದ ರೀತಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಮೂರನೇ ಡಿವಿಷನ್ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಒಬ್ಬ ಬೌಲರ್ 6 ಎಸೆತಗಳಲ್ಲಿ 6 ವಿಕೆಟ್ ಪಡೆದು ಮಿಂಚಿದ್ದಾರೆ.

ಮುಗೀರಬ ನೆರಂಗ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ಮತ್ತು ಸರ್ಫರ್ಸ್ ಪ್ಯಾರಡೈಸ್ ನಡುವೆ ಈ ಪಂದ್ಯ ನಡೆದಿದೆ. ಇದರಲ್ಲಿ ಸರ್ಫರ್ಸ್ ಪ್ಯಾರಡೈಸ್ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ ಕೇವಲ ಐದು ರನ್​ಗಳ ಅವಶ್ಯಕತೆಯಿತ್ತು. 4 ವಿಕೆಟ್‌ ಕಳೆದುಕೊಂಡಿತ್ತಷ್ಟೆ. ಈ ತಂಡವು ಸುಲಭವಾಗಿ ಪಂದ್ಯವನ್ನು ಗೆಲ್ಲುತ್ತದೆ ಎಂದು ನಂಬಲಾಗಿತ್ತು. ಆದರೆ ಕೊನೆಯ ಓವರ್‌ನಲ್ಲಿ ನಡೆದಿದ್ದು ಪವಾಡ.

ಸೆಮಿಫೈನಲ್​ನಲ್ಲೂ ಬೌಲಿಂಗ್ ಮಾಡಲಿದ್ದಾರೆ ವಿರಾಟ್ ಕೊಹ್ಲಿ..!

ಇದನ್ನೂ ಓದಿ
Image
ಬದಲಾವಣೆ ಖಚಿತ: ನ್ಯೂಝಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI
Image
ವಿಶ್ವಕಪ್ 2023 XIಗೆ ಕುಂಬ್ಳೆ, ಹೇಡನ್ ಆಯ್ಕೆ ಮಾಡಿದ ಪ್ಲೇಯರ್ಸ್ ಇವರೇ ನೋಡಿ
Image
ಮುಂಬೈ ಏರ್ಪೋರ್ಟ್​ನಿಂದ ನೇರವಾಗಿ ವಾಂಖೆಡೆಗೆ ತೆರಳಿದ ದ್ರಾವಿಡ್: ಕಾರಣವೇನು?
Image
ನ್ಯೂಝಿಲೆಂಡ್ ವಿರುದ್ಧ ಸೆಮಿಫೈನಲ್: ಮುಂಬೈ ತಲುಪಿದ ಟೀಮ್ ಇಂಡಿಯಾ ಆಟಗಾರರು

ಮುಗೀರಬ ನೆರಂಗ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ನಾಯಕ ಗರೆತ್ ಮಾರ್ಗನ್ ಕೊನೆಯ ಓವರ್ ಬೌಲ್ ಮಾಡಿದರು. ಇವರು ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಆ ಬಳಿಕ ಎರಡನೇ ಎಸೆತ ಹಾಗೂ ಮೂರನೇ ಎಸೆತದಲ್ಲೂ ವಿಕೆಟ್ ಕಿತ್ತು ಹ್ಯಾಟ್ರಿಕ್ ಸಾಧನೆ ಮಾಡಿದರು. ಪಂದ್ಯ ರೋಚಕತೆ ಸೃಷ್ಟಿಸಿತು. ಸರ್ಫರ್ಸ್ ಪ್ಯಾರಡೈಸ್‌ ಗೆಲುವಿಗೆ ಇನ್ನೂ 3 ಎಸೆತಗಳಲ್ಲಿ 5 ರನ್‌ಗಳ ಅಗತ್ಯವಿತ್ತು. ನಂತರ ಮಾರ್ಗನ್ ಮುಂದಿನ ಮೂರು ಎಸೆತಗಳಲ್ಲೂ ಮೂರು ವಿಕೆಟ್ ಪಡೆದರು. ಈ ಮೂಲಕ 6 ಎಸೆತಗಳಲ್ಲಿ 6 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.

ಗರೆಥ್ ಮಾರ್ಗನ್ ಎಸೆದ ಕೊನೆಯ ಓವರ್ ಮೊದಲ ನಾಲ್ಕು ಎಸೆತಗಳಲ್ಲಿ ಬ್ಯಾಟರ್ ಕ್ಯಾಚ್ ನೀಡಿ ನಿರ್ಗಮಿಸಿದರೆ, ಕೊನೆಯ ಇಬ್ಬರು ಬ್ಯಾಟ್ಸ್‌ಮನ್‌ಗಳು ಬೌಲ್ಡ್ ಆದರು. ಈ ಪಂದ್ಯದಲ್ಲಿ ಮಾರ್ಗನ್ 7 ಓವರ್ ಗಳಲ್ಲಿ 16 ರನ್ ನೀಡಿ 7 ವಿಕೆಟ್ ಪಡೆದರು. ಆಟಗಾರನೊಬ್ಬ ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದದ್ದು ಇದೇ ಮೊದಲು. ವೃತ್ತಿಪರ ಕ್ರಿಕೆಟ್‌ನಲ್ಲಿ, ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್, ಬಾಂಗ್ಲಾದೇಶದ ಅಲ್ ಅಮೀನ್ ಹುಸೇನ್ ಮತ್ತು ಭಾರತದ ಅಭಿಮನ್ಯು ಮಿಥುನ್ ಅವರು ಓವರಿನಲ್ಲಿ ಅತಿ ಹೆಚ್ಚು ಐದು ವಿಕೆಟ್‌ ಪಡೆದ ದಾಖಲೆ ಹೊಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ