AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC World Cup: ವಿಶ್ವಕಪ್ 2023 XI ನಲ್ಲಿ ಪಾಕ್ ಆಟಗಾರರಿಗಿಲ್ಲ ಸ್ಥಾನ: ಕುಂಬ್ಳೆ, ಹೇಡನ್ ಆಯ್ಕೆ ಮಾಡಿದ ಪ್ಲೇಯರ್ಸ್ ಇವರೇ ನೋಡಿ

ಸೆಮಿ ಫೈನಲ್ ಪಂದ್ಯಕ್ಕೂ ಮುನ್ನ, ಕ್ರಿಕೆಟ್ ಲೋಕದ ದಂತಕಥೆಗಳಾದ ಮ್ಯಾಥ್ಯೂ ಹೇಡನ್ ಮತ್ತು ಅನಿಲ್ ಕುಂಬ್ಳೆ 2023 ರ ವಿಶ್ವಕಪ್ ಲೀಗ್ ಹಂತದ ತಮ್ಮ ಅತ್ಯುತ್ತಮ ಪ್ಲೇಯಿಂಗ್ XI ಅನ್ನು ಹೆಸರಿಸಿದ್ದಾರೆ. ಆರಂಭಿಕರ ಸ್ಥಾನಕ್ಕಾಗಿ, ಈ ಜೋಡಿಯು ಕ್ವಿಂಟನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದೆ.

ICC World Cup: ವಿಶ್ವಕಪ್ 2023 XI ನಲ್ಲಿ ಪಾಕ್ ಆಟಗಾರರಿಗಿಲ್ಲ ಸ್ಥಾನ: ಕುಂಬ್ಳೆ, ಹೇಡನ್ ಆಯ್ಕೆ ಮಾಡಿದ ಪ್ಲೇಯರ್ಸ್ ಇವರೇ ನೋಡಿ
Anil Kumble, Hayden
Follow us
Vinay Bhat
|

Updated on: Nov 14, 2023 | 9:13 AM

ಐಸಿಸಿ ಏಕದಿನ ವಿಶ್ವಕಪ್ 2023 (ICC World Cup 2023) ಟೂರ್ನಿ ಅಂತಿಮ ಘಟ್ಟದತ್ತ ತಲುಪುತ್ತಿದೆ. 10 ತಂಡಗಳೊಂದಿಗೆ ಆರಂಭವಾದ ಟೂರ್ನಿ ಇದೀಗ ನಾಲ್ಕು ತಂಡಗಳೊಂದಿಗೆ ಸೆಮಿ ಫೈನಲ್​ಗೆ ಬಂದು ತಲುಪಿದೆ. ಅಭಿಮಾನಿಗಳು ರೋಮಾಂಚನಕಾರಿ ನಾಕೌಟ್ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಮುಂಬೈನಲ್ಲಿ ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ನ್ಯೂಝಿಲೆಂಡ್ ಅನ್ನು ಎದುರಿಸಲಿದೆ. 2019 ರ ವಿಶ್ವಕಪ್‌ ಸೆಮೀಸ್​ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ ಸೋತಿತ್ತು. ಏತನ್ಮಧ್ಯೆ, ಗುರುವಾರ ಕೋಲ್ಕತ್ತಾದಲ್ಲಿ ನಡೆಯಲಿರುವ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಸೆಮಿ ಫೈನಲ್ ಪಂದ್ಯಕ್ಕೂ ಮುನ್ನ, ಕ್ರಿಕೆಟ್ ಲೋಕದ ದಂತಕಥೆಗಳಾದ ಮ್ಯಾಥ್ಯೂ ಹೇಡನ್ ಮತ್ತು ಅನಿಲ್ ಕುಂಬ್ಳೆ 2023 ರ ವಿಶ್ವಕಪ್ ಲೀಗ್ ಹಂತದ ತಮ್ಮ ಅತ್ಯುತ್ತಮ ಪ್ಲೇಯಿಂಗ್ XI ಅನ್ನು ಹೆಸರಿಸಿದ್ದಾರೆ. ಆರಂಭಿಕರ ಸ್ಥಾನಕ್ಕಾಗಿ, ಈ ಜೋಡಿಯು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಮತ್ತು ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದೆ.

ಡಿ ಕಾಕ್ ಪ್ರಸ್ತುತ ಒಂಬತ್ತು ಪಂದ್ಯಗಳಲ್ಲಿ 591 ರನ್‌ಗಳೊಂದಿಗೆ ರನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ರೋಹಿತ್ 9 ಪಂದ್ಯಗಳಲ್ಲಿ 503 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. “ನನಗೆ ಡಿಕಾಕ್ ಹಾಗೂ ರೋಹಿತ್ ಶರ್ಮಾ ಅಸಾಧಾರಣ ಆಟಗಾರನಾಗಿದ್ದಾರೆ. ಪವರ್‌ಪ್ಲೇ ಒಳಗೆ ಈ ಇಬ್ಬರು ಆಟಗಾರರು ಕ್ರಿಯಾತ್ಮಕರಾಗಿದ್ದಾರೆ. ಹೀಗಾಗಿ ಇವರೇ ನನ್ನ ನಂಬರ್ ಒನ್ ಮತ್ತು ನಂಬರ್ ಟು,” ಎಂದು ಹೇಡನ್ ಹೇಳಿದ್ದಾರೆ.

ಇದನ್ನೂ ಓದಿ
Image
ಮುಂಬೈ ಏರ್ಪೋರ್ಟ್​ನಿಂದ ನೇರವಾಗಿ ವಾಂಖೆಡೆಗೆ ತೆರಳಿದ ದ್ರಾವಿಡ್: ಕಾರಣವೇನು?
Image
ನ್ಯೂಝಿಲೆಂಡ್ ವಿರುದ್ಧ ಸೆಮಿಫೈನಲ್: ಮುಂಬೈ ತಲುಪಿದ ಟೀಮ್ ಇಂಡಿಯಾ ಆಟಗಾರರು
Image
ಸೆಮಿಫೈನಲ್​ನಲ್ಲೂ ಬೌಲಿಂಗ್ ಮಾಡಲಿದ್ದಾರೆ ವಿರಾಟ್ ಕೊಹ್ಲಿ..!
Image
ನ್ಯೂಝಿಲೆಂಡ್ ಸೆಮಿಫೈನಲ್​ನಲ್ಲಿ ಗೆದ್ದಿದ್ದು ಕೇವಲ 3 ಬಾರಿ ಮಾತ್ರ..ಆದರೆ

ದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮುಂದಿದೆ ಮೂರು ವಿಶ್ವ ದಾಖಲೆಗಳು

ಮೂರು ಮತ್ತು ನಾಲ್ಕನೇ ಕ್ರಮಾಂಕಕ್ಕೆ ಇವರು ವಿರಾಟ್ ಕೊಹ್ಲಿ ಮತ್ತು ರಚಿನ್ ರವೀಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ. ಕೊಹ್ಲಿ ಪ್ರಸ್ತುತ ಒಂಬತ್ತು ಪಂದ್ಯಗಳಲ್ಲಿ 594 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ರವೀಂದ್ರ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಮೂರು ಶತಕಗಳನ್ನು ಗಳಿಸಿದ ಮೊದಲ ಆಟಗಾರರ.

“ರಚಿನ್ ರವೀಂದ್ರ ಅವರನ್ನು ನೀವು ನಂಬರ್ 3 ಅಥವಾ ನಂ. 4 ರಲ್ಲಿ ಆಡಿದರು ಪರವಾಗಿಲ್ಲ. ಇವರನ್ನು 2, 3, 4, ಎಲ್ಲಿ ಬೇಕಾದರೂ ಆಡಿಸಬಹುದು. ವಿರಾಟ್ ಕೊಹ್ಲಿ, ಖಚಿತವಾಗಿ ನಂ. 3ಕ್ಕೆ ಹೊಂದಿಕೊಳ್ಳುತ್ತಾರೆ. ಇಲ್ಲಿ ನಾವು ಲೆಫ್ಟ್ ಹ್ಯಾಂಡ್-ರೈಟ್ ಹ್ಯಾಂಡ್ ಕಾಂಬಿನೇಷನ್​ನಲ್ಲಿ ಇವರನ್ನು ಆಡಿಸಬಹುದು,” ಎಂದು ಕುಂಬ್ಳೆ ಹೇಳಿದರು.

ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಕೂಡ ಆಯ್ಕೆ ಮಾಡಲಾಗಿದ್ದು ಇವರು ನಂ. 5 ಮತ್ತು 6ನೇ ಕ್ರಮಾಂಕಕ್ಕೆ ಸೂಕ್ತ ಎಂದಿದ್ದಾರೆ. “ನನಗೆ ಮ್ಯಾಕ್ಸ್‌ವೆಲ್ ಮತ್ತು ಕ್ಲಾಸೆನ್ ಆಟ ಇಷ್ಟವಾಗಿದೆ. ಕಾರಣ, ನಾನು ಸ್ಟ್ರೈಕ್ ರೇಟ್‌ ನೋಡುತ್ತೇನೆ. ಯಾರು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಗಮನಿಸಬೇಕು. ಇವರು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರರು. ಮ್ಯಾಕ್ಸ್‌ವೆಲ್‌ನ ಸ್ಟ್ರೈಕ್ ರೇಟ್ ರಿಕ್ಟರ್ ಸ್ಕೇಲ್‌ನಿಂದ ಹೊರಗಿದೆ, ಅದು 180 ಸ್ಟ್ರೈಕ್​ರೇಟ್. ಕ್ಲಾಸೆನ್ ಕೂಡ ಅದೇ ಕಾರಣಕ್ಕಾಗಿ ಆಯ್ಕೆ ಮಾಡುತ್ತೇನೆ,” ಎಂದು ಹೇಳಿದ್ದಾರೆ.

ಅಂತೆಯೆ ಆಲ್‌ರೌಂಡರ್ ರವೀಂದ್ರ ಜಡೇಜಾ, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಎರಡೂ ದೈತ್ಯರಿಂದ ಆಯ್ಕೆಯಾದ ವಿಶ್ವಕಪ್ 2023 ರ ಅತ್ಯುತ್ತಮ ಪ್ಲೇಯಿಂಗ್-11 ತಂಡದಲ್ಲಿ, 5 ಆಟಗಾರರು ಭಾರತದವರು. 3 ಆಟಗಾರರು ದಕ್ಷಿಣ ಆಫ್ರಿಕಾದವರು. 2 ಆಟಗಾರರು ಆಸ್ಟ್ರೇಲಿಯಾದವರಿದ್ದಾರೆ. ಆದರೆ, ಪಾಕಿಸ್ತಾನದ ಒಬ್ಬ ಆಟಗಾರು ಕೂಡ ಇದರಲ್ಲಿಲ್ಲ.

ಕುಂಬ್ಳೆ-ಹೇಡನ್ ವಿಶ್ವಕಪ್ 2023 ಅತ್ಯುತ್ತಮ ಪ್ಲೇಯಿಂಗ್ 11

ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ವಿರಾಟ್ ಕೊಹ್ಲಿ, ರಚಿನ್ ರವೀಂದ್ರ, ಗ್ಲೆನ್ ಮ್ಯಾಕ್ಸ್‌ವೆಲ್, ಹೆನ್ರಿಚ್ ಕ್ಲಾಸೆನ್, ರವೀಂದ್ರ ಜಡೇಜಾ, ಮಾರ್ಕೊ ಜಾನ್ಸನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಆಡಮ್ ಝಂಪಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ