ಗೌತಮ್ ಗಂಭೀರ್ ಕೋಚ್ ಆಗಿ ಹೆಚ್ಚು ದಿನ ಉಳಿಯಲ್ಲ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ

|

Updated on: Aug 04, 2024 | 10:58 AM

Gautam Gambhir: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿದಿದ್ದರು. ಅವರ ಕಾರ್ಯಾವಧಿ ಮುಕ್ತಾಯದ ಕಾರಣ ಬಿಸಿಸಿಐ ಹೊಸ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಿದ್ದರು. ಇದೀಗ ಗಂಭೀರ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾದಲ್ಲಿ ಸರಣಿ ಆಡುತ್ತಿದೆ.

ಗೌತಮ್ ಗಂಭೀರ್ ಕೋಚ್ ಆಗಿ ಹೆಚ್ಚು ದಿನ ಉಳಿಯಲ್ಲ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ
Gautam Gambhir
Follow us on

ಗೌತಮ್ ಗಂಭೀರ್ ಇದೀಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾರೆ. ಶ್ರೀಲಂಕಾ ಪ್ರವಾಸದೊಂದಿಗೆ ಅವರು ಭಾರತ ತಂಡದ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದ್ದರಿಂದ ಗೌತಮ್ ಗಂಭೀರ್ ತಮ್ಮ ಕೋಚ್ ವೃತ್ತಿಜೀವನ ಗೆಲುವಿನೊಂದಿಗೆ ಆರಂಭವಾಗಿದೆ. ಆದರೆ, ಇವೆಲ್ಲದರ ನಡುವೆ ಟೀಮ್ ಇಂಡಿಯಾ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದ ಮಾಜಿ ಆಟಗಾರನೊಬ್ಬನ ಶಾಕಿಂಗ್ ಹೇಳಿಕೆ ವೈರಲ್ ಆಗುತ್ತಿದೆ. ಅವರ ಪ್ರಕಾರ, ಗೌತಮ್ ಗಂಭೀರ್ ಟೀಮ್ ಇಂಡಿಯಾವನ್ನು ನಿಭಾಯಿಸಬಲ್ಲರು. ಆದರೆ ಇಲ್ಲಿ ಕೋಚ್ ಆಗಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಹೀರೋ ಅಚ್ಚರಿಯ ಹೇಳಿಕೆ:

ಗೌತಮ್ ಗಂಭೀರ್ ಅವರ ಕೋಚಿಂಗ್ ವೃತ್ತಿಜೀವನದ ಬಗ್ಗೆ ಭವಿಷ್ಯ ನುಡಿದಿರುವುದು 2007ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ. ಅಂದು ಗಂಭೀರ್ ಅವರ ಸಹ ಆಟಗಾರನಾಗಿ ಜೋಗಿಂದರ್ ಇದೀಗ ಅಚ್ಚರಿಕೆಯ ಹೇಳಿಕೆಯೊಂದಿಗೆ ಗಮನ ಸೆಳೆದಿದ್ದಾರೆ.

ಜೋಗಿಂದರ್ ಶರ್ಮಾ ವಿಡಿಯೋ:

ಜೋಗಿಂದರ್ ನೀಡಿದ ಕಾರಣಗಳು:

ಗೌತಮ್ ಗಂಭೀರ್ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಜಾಸ್ತಿ ದಿನ ಉಳಿಯಲ್ಲ ಎನ್ನಲು ಜೋಗಿಂದರ್ ಶರ್ಮಾ ಮೂರು ಕಾರಣಗಳನ್ನು ನೀಡಿದ್ದಾರೆ. ಆ ಕಾರಣಗಳೆಂದರೆ…

  • ಗೌತಮ್ ಗಂಭೀರ್ ಅವರ ಕೆಲವು ನಿರ್ಧಾರಗಳು ಬಹುತೇಕರಿಗೆ ಇಷ್ಟವಾಗುವುದಿಲ್ಲ. ಏಕೆಂದರೆ ಅವರದ್ದು ನೇರ ನುಡಿ ಹೊಂದಿರುವ ವ್ಯಕ್ತಿತ್ವ. ನೇರವಾಗಿ ಮಾತನಾಡುವುದರಿಂದ ಸಮಸ್ಯೆಯಾಗಲಿದೆ.
  • ಗೌತಮ್ ಗಂಭೀರ್ ಯಾರ ಬಳಿಯೂ ಹೋಗುವುದಿಲ್ಲ. ಅವರಿಗೆ ಇತರೊಂದಿಗೆ ಬೆರತು ಹೋಗುವ ಅಭ್ಯಾಸವಿಲ್ಲ. ಹೀಗಾಗಿ ಇದು ಕೂಡ ಸಮಸ್ಯೆಯನ್ನು ಸೃಷ್ಟಿಸಲಿದೆ.
  • ಗೌತಮ್ ಗಂಭೀರ್ ತನ್ನ ಕೆಲಸವನ್ನು ನಂಬುತ್ತಾರೆ. ಆದರೆ ಅವರು ಅದರ ಕ್ರೆಡಿಟ್ ಪಡೆಯುವಂತಹ ವ್ಯಕ್ತಿಯಲ್ಲ. ಹೀಗಾಗಿ ಟೀಮ್ ಇಂಡಿಯಾ ಕೋಚ್ ಆಗಿ ಅವರು ಜಾಸ್ತಿ ದಿನ ಉಳಿಯುವುದಿಲ್ಲ ಎಂದು ಜೋಗಿಂದರ್ ಶರ್ಮಾ ಹೇಳಿದ್ದಾರೆ.