GT vs CSK: ಚೆನ್ನೈ ತಂಡದಲ್ಲಿ ಹೊಸಬ; ಮೊದಲ ಪಂದ್ಯಕ್ಕೆ ಉಭಯ ತಂಡಗಳು ಹೀಗಿವೆ

|

Updated on: Mar 31, 2023 | 7:53 PM

GT vs CSK: ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಲಿದೆ.

GT vs CSK: ಚೆನ್ನೈ ತಂಡದಲ್ಲಿ ಹೊಸಬ; ಮೊದಲ ಪಂದ್ಯಕ್ಕೆ ಉಭಯ ತಂಡಗಳು ಹೀಗಿವೆ
ಮೊದಲ ಪಂದ್ಯ
Follow us on

ಐಪಿಎಲ್ 16ನೇ (IPL 2023) ಸೀಸನ್​ಗೆ ಅದ್ಧೂರಿ ಆರಂಭ ಸಿಕ್ಕಿದೆ. ಮೊದಲ ಪಂದ್ಯ ಆರಂಭಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭ ಕೂಡ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ (Arijit Singh) ಮೊದಲು ಸಂಗೀತ ಕಾರ್ಯಕ್ರಮ ನೀಡಿದರು. ನಂತರ ಸೌತ್ ಇಂಡಿಯನ್ ಸಿನಿಮಾ ನಟಿಯರಾದ ತಮ್ಮನಾ ಭಾಟಿಯಾ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna and Tamannaah Bhatia) ಸೊಂಟ ಬಳುಕಿಸಿದರು. ಇದಾದ ನಂತರ ಉಭಯ ತಂಡದ ನಾಯಕರು ಸೇರಿದಂತೆ, ಬಿಸಿಸಿಐನ (BCCI) ಗಣ್ಯರು ಕೂಡ ವೇದಿಕೆ ಮೇಲೆ ಉಪಸ್ಥಿತರಿದ್ದು, ಐಪಿಎಲ್​ಗೆ ಅದ್ಧೂರಿ ಚಾಲನೆ ನೀಡಿದರು. ಆನಂತರ ಮೊದಲ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಮೊದಲ ಪಂದ್ಯಕ್ಕೆ ಉಭಯ ತಂಡಗಳು ಬಲಿಷ್ಠ ಆಡುವ ಇಲೆವೆನ್ ಪ್ರಕಟಿಸಿವೆ. ಇನ್ನು ಈ ಉಭಯ ತಂಡಗಳ ನಡುವಿನ ಮುಖಾಮುಖಿ ನೋಡಿದರೆ, ಸದ್ಯಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಪ್ರಾಬಲ್ಯ ಹೊಂದಿದೆ. ಎರಡು ತಂಡಗಳ ನಡುವೆ ಕೇವಲ 2 ಪಂದ್ಯಗಳು ಮಾತ್ರ ನಡೆದಿವೆ. ಎರಡೂ ಪಂದ್ಯಗಳ ಗೆಲುವು ಗುಜರಾತ್ ಖಾತೆಯಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆದ್ದರೆ ಗುಜರಾತ್ ಹ್ಯಾಟ್ರಿಕ್ ಗೆಲುವು ಸಾಧಿಸಿದ ದಾಖಲೆ ಬರೆಯಲಿದೆ. ಮತ್ತೊಂದೆಡೆ, ಹೆಚ್ಚಿನ ಐಪಿಎಲ್ ತಂಡಗಳ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿರುವ ಧೋನಿಯ ಚೆನ್ನೈ, ಈ ತಂಡದ ವಿರುದ್ಧ ತನ್ನ ಮೊದಲ ಗೆಲುವು ದಾಖಲಿಸಲು ಉತ್ಸುಕವಾಗಿದೆ.

IPL 2023 Opening Ceremony Live: ಚೆನ್ನೈ ಬ್ಯಾಟಿಂಗ್ ಆರಂಭ; ಕಾನ್ವೇ ಔಟ್

ಉಭಯ ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಂಬಟಿ ರಾಯುಡು, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆ, ದೀಪಕ್ ಚಹಾರ್, ರಾಜವರ್ಧನ್ ಹಂಗರ್ಗೇಕರ್

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್​ಮನ್ ಗಿಲ್, ಕೇನ್ ವಿಲಿಯಮ್ಸನ್, ವೃದ್ಧಿಮಾನ್ ಸಹಾ, ವಿಜಯ್ ಶಂಕರ್, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ, ಯಶ್ ದಯಾಲ್ ಮತ್ತು ಜೋಶ್ ಲಿಟಲ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:32 pm, Fri, 31 March 23