ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಐಪಿಎಲ್ 2024 ಹರಾಜಿಗಾಗಿ (IPL 2024 Auction) ಭರ್ಜರಿ ತಯಾರಿ ನಡೆಸುತ್ತಿವೆ. ಇದರ ನಡುವೆ ಕೆಲ ಶಾಕಿಂಗ್ ವಹಿವಾಟು ಕೂಡ ನಡೆಯುತ್ತಿದೆ. ಫ್ರಾಂಚೈಸಿಗಳು ಹರಾಜಿಗು ಮೊದಲು ಟ್ರೇಡ್ ಮೂಲಕ ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿವೆ. ಸದ್ಯ ಇದರಲ್ಲಿ ದೊಡ್ಡ ವಿಷಯ ಎಂದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ಮರಳಿ ಕರೆತರಲು ಮುಂದಾಗಿದೆ ಎಂದು ವರದಿಯಾಗಿದೆ. ಗುಜರಾತ್ ಟೈಟಾನ್ಸ್ನೊಂದಿಗೆ ಮುಂಬೈ 15 ಕೋಟಿ ರೂ. ಒಪ್ಪಂದದ ಮೂಲಕ ಪಾಂಡ್ಯ ಅಂಬಾನಿ ಫ್ರಾಂಚೈಸಿಗೆ ಬರಲಿದ್ದಾರಂತೆ. ಇದೀಗ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ಸೇರುವುದು ಬಹುತೇಕ ಖಚಿತವಾಗಿದೆ. ಐಪಿಎಲ್ 2024 ರ ಹರಾಜಿನ ಮೊದಲು ಕುತೂಹಲಕಾರಿ ಸಂಗತಿ ಹೊರಹೊಮ್ಮಿದೆ. ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಕೊನೆಯ ಕೆಲವು ವೀಡಿಯೊಗಳಲ್ಲಿ ಹಾರ್ದಿಕ್ ಪಾಂಡ್ಯ ಎಲ್ಲಿಯೂ ಕಂಡುಬರುತ್ತಿಲ್ಲ. ಮಿನಿ ಹರಾಜು ಮತ್ತು ಐಪಿಎಲ್ 2024 ಕ್ಕಿಂತ ಮುಂಚಿತವಾಗಿ ಜಿಟಿ ಹಾರ್ದಿಕ್ ಅವರ ವಿಡಿಯೋವನ್ನು ಡಿಲೀಟ್ ಮಾಡಿದೆ.
IND vs AUS: ದುಬಾರಿ ಬೌಲರ್ಗಳಿಗೆ ಕೋಕ್? 2ನೇ ಟಿ20ಗೆ ಇಲ್ಲಿದೆ ಭಾರತ ಸಂಭಾವ್ಯ ತಂಡ
ಜಿಟಿಯ ಸಾಮಾಜಿಕ ಮಾಧ್ಯಮ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ವಿಡಿಯೋಗಳು ಶುಭ್ಮನ್ ಗಿಲ್, ಮ್ಯಾಥ್ಯೂ ವೇಡ್, ರಶೀದ್ ಖಾನ್ ಮತ್ತು ಮುಂತಾದವರನ್ನು ಮಾತ್ರ ಒಳಗೊಂಡಿವೆ. ಆದಾಗ್ಯೂ, ಈ ವೀಡಿಯೊಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಯಾವುದೇ ಕುರುಹು ಇಲ್ಲ. ಈ ಮೂಲಕ ಅವರು ಮುಂಬೈ ಸೇರುವುದು ಬಹುತೇಕ ಖಚಿತವಾಗಿದೆ. ಗುಜರಾತ್ ಅವರ ಇತ್ತೀಚಿನ ಕೆಲವು ಪೋಸ್ಟ್‌ಗಳನ್ನು ನೋಡೋಣ.
ಐಪಿಎಲ್ 2024 ಕ್ಕೆ ಮುಂದಿನ ತಿಂಗಳು ಮಿನಿ ಹರಾಜು ನಡೆಯಲಿದೆ, ಆದರೆ ಇದಕ್ಕೂ ಮೊದಲು, ಪ್ರತಿ ಬಾರಿಯಂತೆ, ಎಲ್ಲಾ 10 ಫ್ರಾಂಚೈಸಿಗಳಿಗೆ ಟ್ರೇಡ್ ವಿಂಡೋ ತೆರೆದಿರುತ್ತದೆ, ಇದರಲ್ಲಿ ಫ್ರಾಂಚೈಸಿ ಪರಸ್ಪರ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಟ್ರೇಡ್ ವಿಂಡೋ ನವೆಂಬರ್ 26 ರಂದು ಕೊನೆಗೊಳ್ಳುತ್ತದೆ. ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 2 ಋತುಗಳ ನಂತರ ಗುಜರಾತ್ ಟೈಟಾನ್ಸ್ ಜೊತೆಗಿನ ಸಂಬಂಧವನ್ನು ಮುರಿಯಲು ನಿರ್ಧರಿಸಿದ್ದಾರೆ. ಹಾರ್ದಿಕ್ ಮತ್ತೊಮ್ಮೆ ಮುಂಬೈ ಇಂಡಿಯನ್ಸ್‌ಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ನಡುವೆ ಕೆಲಕಾಲಗಳಿಂದ ಭಿನ್ನಾಭಿಪ್ರಾಯವಿತ್ತು, ಹೀಗಾಗಿ ಹಾರ್ದಿಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ