15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2022) ಡಬಲ್ ಧಮಾಕ. ಒಟ್ಟು ಎರಡು ಹೈವೋಲ್ಟೇಜ್ ಪಂದ್ಯಗಳು ಇಂದು ನಡೆಯಲಿದೆ. ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮಧ್ಯಾಹ್ನ 3:30ಕ್ಕೆ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಕೇನ್ ವಿಲಿಯಮ್ಸನ್ ಅವರ ಸನ್‌ರೈಸರ್ಸ್ ಹೈದರಾಬಾದ್ (PBKS vs SRH) ತಂಡ ಎದುರಿಸಲಿದೆ. ಸಂಜೆ 7:30ಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಲಯನ್ಸ್ ಮತ್ತು ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (GT vs CSK) ತಂಡ ಮುಖಾಮುಖಿ ಆಗಲಿದೆ. ನಾಲ್ಕೂ ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ಗೆಲುವು ಕಂಡಿರುವ ಕಾರಣ ಇಂದಿನ ಸೆಣೆಸಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಅದರಲ್ಲೂ ಟೇಬಲ್ ಟಾಪರ್ ಗುಜರಾತ್ ಹಾಗೂ ಸತತ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಸಿಎಸ್ಕೆ ಕಾದಾಟ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಪಂಜಾಬ್ vs ಹೈದರಾಬಾದ್:
ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಹೈದರಾಬಾದ್ ತಂಡವು ಹ್ಯಾಟ್ರಿಕ್ ಜಯ ಸಾಧಿಸಿತು. ಅಭಿಷೇಕ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಲಯದಲ್ಲಿದ್ದಾರೆ. ಜೇಸನ್ ಹೋಲ್ಡರ್, ಭುವನೇಶ್ವರ್ ಕುಮಾರ್ ಮತ್ತು ಅಫ್ಗನ್ ಸ್ಪಿನ್ನರ್ ರಶೀದ್ ಖಾನ್ ಕೊನೆಯ ಎಸೆತದವರೆಗೂ ಛಲದ ಹೋರಾಟ ಮಾಡುವ ನುರಿತ ಬೌಲರ್‌ಗಳು. ವಾಷಿಂಗ್ಟನ್ ಸುಂದರ್ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿರುವ ಜೆ.ಸುಚಿತ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಇತ್ತ ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್ ಫಾರ್ಮ್‌ಗೆ ಮರಳಿರುವುದು ತಂಡದ ಸ್ಥೈರ್ಯ ಹೆಚ್ಚಿಸಿದ್ದರೆ, ಅನುಭವಿ ಶಿಖರ್ ಧವನ್ ಆರಂಭಿಕ ಹಂತದಲ್ಲಿ ರನ್‌ಗಳಿಸುತ್ತಿದ್ದಾರೆ. ಆಲ್ರೌಂಡರ್ ಲಿವಿಂಗ್‌ಸ್ಟೋನ್ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ಹೊಸಪ್ರತಿಭೆ ಜಿತೇಶ್ ಶರ್ಮಾ ಕೂಡ ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್ ಒಡೀನ್ ಸ್ಮಿತ್ ಪಂದ್ಯವನ್ನು ಗೆದ್ದುಕೊಡುವ ಆಟಗಾರನೆಂದು ಸಾಬೀತು ಮಾಡಿದ್ದಾರೆ. ರಬಾಡ ಮತ್ತು ಆರ್ಷದೀಪ್ ಸಿಂಗ್ ಕೂಡ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಸಂಭಾವ್ಯ ಪ್ಲೇಯಿಂಗ್ 11:
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್, ರಾಹುಲ್ ಚಹರ್, ವೈಭವ್ ಅರೋರಾ.
ಸನ್‌ರೈಸರ್ಸ್ ಹೈದರಾಬಾದ್ : ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸನ್, ಉಮ್ರಾನ್ ಮಲಿಕ್ ಮತ್ತು ಟಿ ನಟರಾಜನ್.
ಗುಜರಾತ್ vs ಚೆನ್ನೈ:
ಐಪಿಎಲ್ 2022ರ ಹೊಸ ತಂಡ ಗುಜರಾತ್ ಟೈಟಾನ್ಸ್ ನಾಲ್ಕು ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತ 4 ಸೋಲುಗಳನ್ನುಂಡ ಸಿಎಸ್ಕೆ ಒಂಬತ್ತನೆ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಆಲ್ರೌಂಡರ್‌ಗಳೇ ಸಾರಥಿಗಳಾಗಿದ್ದು, ನಾಯಕತ್ವದ ಸವಾಲನ್ನು ಉತ್ತಮವಾಗಿ ನಿಭಾಯಿಸುತ್ತಿರುವ ಹಾರ್ದಿಕ್ ಪಾಂಡ್ಯ ಮತ್ತು ನಿಧಾನವಾಗಿ ನಾಯಕತ್ವದ ಸವಾಲಿಗೆ ಹೊಂದಿಕೊಳ್ಳುತ್ತಿರುವ ರವೀಂದ್ರ ಜಡೇಜಾ ಅವರಿಗೆ ಎಂಸಿಎ ಕ್ರೀಡಾಂಗಣದಲ್ಲಿ ಸತ್ವಪರೀಕ್ಷೆ ಎದುರಾಗಲಿದೆ. ಸಿಎಸ್ಕೆಗೆ ರಾಬಿನ್ ಉತ್ತಪ್ಪ-ಶಿವಂ ದುಬೆ ಜೋಡಿಯ ಮೇಲೆ ಸಾಕಷ್ಟು ನಂಬಿಕೆಯಿದ್ದು, ಇವರು ಒಂದೂ ಅಬ್ಬರಿಸುವು ಖಚಿತ. ಜಡೇಜಾ ಪಡೆಗೆ ಬೌಲರ್‌ಗಳು ಸಾಥ್ ನೀಡಬೇಕಷ್ಟೆ. ಇತ್ತ ಗುಜರಾತ್ ಮೂರು ವಿಭಾಗದಲ್ಲಿ ಬಲಿಷ್ಠವಾಗಿದೆ. ಪಾಂಡ್ಯ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡುವುದು ಖಚಿತವಾಗಿದ್ದು ನಾಯಕನಾಗಿ ಬೊಂಬಾಟ್ ಪ್ರದರ್ಶನ ನೀಡುತ್ತಿದ್ದಾರೆ.
ಸಂಭಾವ್ಯ ಪ್ಲೇಯಿಂಗ್ XI:
ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ (ನಾಯಕ), ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹಿಷ್ ತೀಕ್ಷಣ, ರಾಜವರ್ಧನ್ ಹೆಂಗರ್ಗೆಕರ್.
ಪಂಜಾಬ್: ಮಯಾಂಕ್ ಅಗರ್ವಾಲ್ (ಸಿ), ಶಿಖರ್ ಧವನ್, ಜಾನಿ ಬೇರ್‌ಸ್ಟೋ/ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ವೈಭವ್ ಅರೋರಾ.
DC vs RCB: ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು ಆರ್ಸಿಬಿ ಬೌಲರ್ ಮಾಡಿದ ಆ ಒಂದು ಓವರ್
Published On - 8:58 am, Sun, 17 April 22