Harshal Patel: ಅಭ್ಯಾಸ ಪಂದ್ಯದಲ್ಲೂ ಹರ್ಷಲ್ ಪಟೇಲ್​ ತುಂಬಾ ದುಬಾರಿ..!

| Updated By: ಝಾಹಿರ್ ಯೂಸುಫ್

Updated on: Oct 11, 2022 | 3:55 PM

Harshal Patel: 159 ರನ್​ಗಳನ್ನು ಬೆನ್ನತ್ತಿದ ವೆಸ್ಟರ್ನ್​ ಆಸ್ಟ್ರೇಲಿಯಾ ಟೀಮ್ ಇಂಡಿಯಾ ಬೌಲರ್​ಗಳ ಮುಂದೆ ಉತ್ತಮ ಪ್ರದರ್ಶನವನ್ನೇ ನೀಡಿತು. ಏಕೆಂದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿದ್ದ ಟೀಮ್ ಇಂಡಿಯಾ ಬೌಲರ್​ಗಳ ವಿರುದ್ದ 8 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿತ್ತು.

Harshal Patel: ಅಭ್ಯಾಸ ಪಂದ್ಯದಲ್ಲೂ ಹರ್ಷಲ್ ಪಟೇಲ್​ ತುಂಬಾ ದುಬಾರಿ..!
Harshal Patel
Follow us on

T20 World Cup 2o22: ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾ (Team India) ಭರ್ಜರಿ ಸಿದ್ದತೆಯಲ್ಲಿದೆ. ಈಗಾಗಲೇ ಮೊದಲ ಅಭ್ಯಾಸ ಪಂದ್ಯವನ್ನು ಆಡಿದ್ದು, ಈ ಪಂದ್ಯದಲ್ಲಿ 13 ರನ್​ಗಳಿಂದ ಜಯ ಸಾಧಿಸಿದೆ. ಆದರೆ ಈ ಗೆಲುವಿನ ಹೊರತಾಗಿಯೂ ಇದೀಗ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಪ್ರಶ್ನೆಗಳೆದ್ದಿವೆ. ಏಕೆಂದರೆ ಭಾರತ ತಂಡವು ಮೊದಲ ಅಭ್ಯಾಸ ಪಂದ್ಯವಾಡಿರುವುದು ವೆಸ್ಟರ್ನ್​ ಆಸ್ಟ್ರೇಲಿಯಾ ವಿರುದ್ದ. ದ್ವಿತೀಯ ದರ್ಜೆಯ ಆಟಗಾರರನ್ನು ಒಳಗೊಂಡ ಈ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಟೀಮ್ ಇಂಡಿಯಾ ಆಟಗಾರರು ವಿಫಲವಾಗಿದ್ದಾರೆ.

ಏಕೆಂದೆರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕಲೆಹಾಕಿದ್ದು ಕೇವಲ 158 ರನ್​ಗಳು ಮಾತ್ರ. 35 ಎಸೆತಗಳಲ್ಲಿ 52 ರನ್​ ಕಲೆಹಾಕಿದ ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಇನ್ನು 159 ರನ್​ಗಳನ್ನು ಬೆನ್ನತ್ತಿದ ವೆಸ್ಟರ್ನ್​ ಆಸ್ಟ್ರೇಲಿಯಾ ಟೀಮ್ ಇಂಡಿಯಾ ಬೌಲರ್​ಗಳ ಮುಂದೆ ಉತ್ತಮ ಪ್ರದರ್ಶನವನ್ನೇ ನೀಡಿತು. ಏಕೆಂದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿದ್ದ ಟೀಮ್ ಇಂಡಿಯಾ ಬೌಲರ್​ಗಳ ವಿರುದ್ದ 8 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿತ್ತು.

ಇದನ್ನೂ ಓದಿ
Anna Rajan: ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ..!
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಅಚ್ಚರಿ ಎಂದರೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿರುವ ಹರ್ಷಲ್ ಪಟೇಲ್ ಈ ಪಂದ್ಯದಲ್ಲಿ 4 ಓವರ್​ಗಳಲ್ಲಿ ಬರೋಬ್ಬರಿ 49 ರನ್​ ನೀಡಿದ್ದರು. ಅಂದರೆ ದ್ವಿತೀಯ ದರ್ಜೆಯ ಟೀಮ್ ವಿರುದ್ಧವೇ ಹರ್ಷಲ್ ದುಬಾರಿಯಾಗಿದ್ದಾರೆ.

ಈ ಹಿಂದೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಹರ್ಷಲ್ ಪಟೇಲ್ ದುಬಾರಿಯಾಗಿದ್ದರು. ಇದೀಗ ಯಾವುದೇ ಒತ್ತಡವಿಲ್ಲದೆ ಆಡಲಾದ ಅಭ್ಯಾಸ ಪಂದ್ಯದಲ್ಲೂ 24 ಎಸೆತಗಳಲ್ಲಿ 49 ರನ್ ಬಿಟ್ಟು ಕೊಟ್ಟಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ವೇಗಿಯ ಈ ಕಳಪೆ ಪ್ರದರ್ಶನವೇ ಇದೀಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.

ಏಕೆಂದರೆ ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆದರೆ ಈ ಬಾರಿ ತಂಡದಲ್ಲಿ ಜಸ್​ಪ್ರೀತ್ ಬುಮ್ರಾ ಇಲ್ಲ. ಇತ್ತ ಟಿ20 ವಿಶ್ವಕಪ್​ಗೆ ದಿನಗಳು ಮಾತ್ರ ಉಳಿದಿರುವಾಗಲೂ ಟೀಮ್ ಇಂಡಿಯಾ ಬೌಲಿಂಗ್ ಲೈನಪ್ ಲಯಕ್ಕೆ ಮರಳಿಲ್ಲ ಎಂಬುದು ಅಭ್ಯಾಸ ಪಂದ್ಯದ ಮೂಲಕ ನಿರೂಪಿತವಾಗಿದೆ. ಇದುವೇ ಈಗ ಟೀಮ್ ಇಂಡಿಯಾದ ಹೊಸ ಚಿಂತೆಗೆ ಕಾರಣವಾಗಿದೆ.

ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಹೀಗಿತ್ತು:

ಬ್ಯಾಟಿಂಗ್:

  • ರೋಹಿತ್ ಶರ್ಮಾ- 3 (4)
  • ರಿಷಭ್ ಪಂತ್- 9 (16)
  • ದೀಪಕ್ ಹೂಡಾ- 22 (14)
  • ಸೂರ್ಯಕುಮಾರ್ ಯಾದವ್ – 52 (35)
  • ಹಾರ್ದಿಕ್ ಪಾಂಡ್ಯ – 27 (20)
  • ದಿನೇಶ್ ಕಾರ್ತಿಕ್ – 19 (23)
  • ಅಕ್ಷರ್ ಪಟೇಲ್ – 10 (5)
  • ಹರ್ಷಲ್ ಪಟೇಲ್ – 5 (4)

ಬೌಲಿಂಗ್:

  • ಭುವನೇಶ್ವರ್ ಕುಮಾರ್:  4-0-26-2
  • ಅರ್ಷದೀಪ್ ಸಿಂಗ್:  3-1-6-3
  • ಹರ್ಷಲ್ ಪಟೇಲ್: 4-0-49-1
  • ಅಕ್ಷರ್ ಪಟೇಲ್:  3-0-23-0
  • ದೀಪಕ್ ಹೂಡಾ:  2-0-24-0
  • ಯುಜ್ವೇಂದ್ರ ಚಹಾಲ್:  4-0-15-2

 

 

Published On - 3:54 pm, Tue, 11 October 22