15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟೂರ್ನಿ ಇದೀಗ ರೋಚಕತೆ ಪಡೆಯುತ್ತಿದೆ. ಹಿಂದಿನ ಸೀಸನ್ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದ ತಂಡ ಈ ಬಾರಿ ಹೊಸ ಆಟಗಾರರನ್ನು ಸೇರಿಸಿ ಭರ್ಜರಿ ಪ್ರದರ್ಶನ ತೋರುತ್ತಿದ್ದರೆ, ಹಾಲಿ ಚಾಂಪಿಯನ್, ಮಾಜಿ ಚಾಂಪಿಯನ್ ತಂಡಗಳು ಗೆಲುವಿಗಾಗಿ ಹಾತೊರೆಯುತ್ತಿದೆ. ಕಳೆದ ಬಾರಿಯ ವಿನ್ನರ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಸೋಲುಂಡು ಕಟ್ಟ ದಾಖಲೆ ಬರೆದಿದೆ. ಎರಡು ಹೊಸ ತಂಡಗಳಾದ ಲಖನೌ ಸೂಪರ್ ಜೇಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಟೀಮ್ ಕೂಡ ನಿರೀಕ್ಷೆಗೆ ತಕ್ಕ ಆಟವಾಡುತ್ತಿದೆ. ಲೀಗ್ ಪಂದ್ಯಗಳು ಮುಕ್ತಾಯಗೊಂಡ ಬಳಿಕ ಪಾಯಿಂಟ್ ಪಟ್ಟಿಯಲ್ಲಿರುವ ಮೊದಲ ನಾಲ್ಕು ತಂಡಗಳು ಟೂರ್ನಿಯ ಪ್ಲೇ-ಆಫ್ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತವೆ. ಅದರ ನಂತರ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಇರುತ್ತದೆ. ವಿಜೇತ ತಂಡವು ಪ್ರತಿ ಪಂದ್ಯದಲ್ಲಿ 2 ಅಂಕಗಳನ್ನು ಪಡೆಯುತ್ತದೆ. ಇದರ ಜೊತೆಗೆ ಅತಿ ಹೆಚ್ಚು ರನ್ ಕಲೆಹಾಕಿದವರಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಕಿತ್ತವರು ಪರ್ಪಲ್ ಕ್ಯಾಪ್ ಧರಿಸುತ್ತಾರೆ. ಹಾಗಾದ್ರೆ ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.
ಪಾಯಿಂಟ್ ಟೇಬಲ್:
ಆರೆಂಜ್ ಕ್ಯಾಪ್:
ಅತಿ ಹೆಚ್ಚು ರನ್ ಗಳಿಸಿದವರ ಮೊದಲ ಸ್ಥಾನದಲ್ಲಿ ಆರ್ ಆರ್ ತಂಡದ ಜೋಸ್ ಬಟ್ಲರ್ ಇದ್ದು ಇವರು ಮೂರು ಪಂದ್ಯಗಳಿಂದ 205 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ ಇಶಾನ್ ಕಿಶನ್ ಇದ್ದು ಇವರು ಒಟ್ಟು 149 ರನ್ ಸಿಡಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅವರಿದ್ದಾರೆ. ಇವರು ಮೂರು ಪಂದ್ಯಗಳಿಂದ 122 ರನ್ ಗಳಿಸಿದ್ದಾರೆ. ಮುಂಬೈ ತಂಡದ ತಿಲಕ್ ವರ್ಮಾ ನಾಲ್ಕನೇ ಸ್ಥಾನದಲ್ಲಿದೆ 121 ರನ್ ಗಳಿಸಿದ್ದಾರೆ. ದೀಪಕ್ ಹೂಡ 119 ರನ್ ಬಾರಿಸಿ ಐದನೇ ಸ್ಥಾನ ಸಂಪಾದಿಸಿದ್ದಾರೆ.
ಪರ್ಪಲ್ ಕ್ಯಾಪ್:
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಉಮೇಶ್ ಯಾದವ್ ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಇವರು ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದು 9 ವಿಕೆಟ್ ಕಬಳಿಸಿದ್ದಾರೆ. ರಾಜಸ್ಥಾನ್ ತಂಡದ ಯುಜ್ವೇಂದ್ರ ಚಹಲ್ 3 ಪಂದದ್ಯಗಳಿಂದ 7 ವಿಕೆಟ್ ಕಿತ್ತು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಲಖನೌ ತಂಡದ ಆವೇಶ್ ಖಾನ್ ಅವರಿದ್ದು 3 ಪಂದ್ಯಗಳಿಂದ 7 ವಿಕೆಟ್ ಕಿತ್ತಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ರಾಹುಲ್ ಚಹಾರ್ ನಾಲ್ಕನೇ ಸ್ಥಾನದಲ್ಲಿದ್ದು ಮೂರು ಪಂದ್ಯಗಳಿಂದ 6 ವಿಕೆಟ್ ಕಬಳಿಸಿದ್ದಾರೆ. 6 ವಿಕೆಟ್ ಕಿತ್ತ ಹನಿಂದು ಹಸರಂಗ ಐದನೇ ಸ್ಥಾನದಲ್ಲಿದ್ದಾರೆ.
LSG vs DC, IPL 2022: ಐಪಿಎಲ್ನಲ್ಲಿಂದು ಲಖನೌ-ಡೆಲ್ಲಿ ಮುಖಾಮುಖಿ: ವಾರ್ನರ್ ಮೇಲೆ ಎಲ್ಲರ ಕಣ್ಣು
Pat Cummins: ಮೊದಲ ಪಂದ್ಯದಲ್ಲೇ ಕಮಿನ್ಸ್ ಸ್ಫೋಟಕ ಆಟ: ಕೇವಲ 14 ಎಸೆತಗಳಲ್ಲಿ ಅರ್ಧಶತಕದ ದಾಖಲೆ