
ಮಹಿಳಾ ಟಿ20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 158 ರನ್ಗಳು ಮಾತ್ರ. ಈ ಗುರಿಯನ್ನು ಸೌತ್ ಆಫ್ರಿಕಾ ತಂಡ 19.1 ಓವರ್ಗಳಲ್ಲಿ ಚೇಸ್ ಮಾಡಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ತುಸು ಕಷ್ಟಕರವಾಗಿದೆ.
ಏಕೆಂದರೆ ಮಹಿಳಾ ಟಿ20 ವಿಶ್ವಕಪ್ನಲ್ಲಿ ಗ್ರೂಪ್ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್ಗೇರಲಿದೆ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸೋಲಿನೊಂದಿಗೆ ಭಾರತ ತಂಡದ ಅಂಕ 4 ರಲ್ಲೇ ಉಳಿದಿದೆ. ಅತ್ತ ಟೀಮ್ ಇಂಡಿಯಾ ವಿರುದ್ಧ ಗೆದ್ದಿರುವ ಸೌತ್ ಆಫ್ರಿಕಾ ಒಟ್ಟು 4 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಇನ್ನು ಆರು ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಈ ಮೂರು ತಂಡಗಳಿಗೂ ಇನ್ನೂ ತಲಾ ಎರಡೆರಡು ಪಂದ್ಯಗಳಿದ್ದು, ಈ ಮ್ಯಾಚ್ಗಳು ನಿರ್ಣಾಯಕ.
ಈ ನಿರ್ಣಾಯಕ ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಹೇಗೆ ಸೆಮಿಫೈನಲ್ಗೇರಲಿದೆ ಎಂದು ನೋಡುವುದಾದರೆ…
ಭಾರತ ತಂಡವು ಜೂನ್ 25 ರಂದು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವನ್ನು ನಿರೀಕ್ಷಿಸಬಹುದು. ಆದರೆ ಜೂನ್ 28 ರಂದು ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಬೇಕಿದೆ. ಈ ಪಂದ್ಯವೇ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.
ಏಕೆಂದರೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಪಂದ್ಯಗಳನ್ನು ಆಡಲಿರುವುದು ದುರ್ಬಲ ನೆದರ್ಲ್ಯಾಂಡ್ಸ್ ಹಾಗೂ ಬಾಂಗ್ಲಾದೇಶ್ ವಿರುದ್ಧ. ಒಂದು ವೇಳೆ ಸೌತ್ ಆಫ್ರಿಕಾ ತಂಡವು ತನ್ನ ಕೊನೆಯ ಎರಡು ಮ್ಯಾಚ್ಗಳಲ್ಲೂ ಜಯ ಸಾಧಿಸಿದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ.
ಇದಾಗ್ಯೂ ಇಲ್ಲಿ ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿರುವುದು ತನ್ನ ನೆಟ್ ರನ್ ರೇಟ್. ಭಾರತ ತಂಡವು ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ +2.511 ನೆಟ್ ರನ್ ರೇಟ್ ಹೊಂದಿದೆ. ಇದೇ ವೇಳೆ ಸೌತ್ ಆಫ್ರಿಕಾ ತಂಡದ ನೆಟ್ ರನ್ ರೇಟ್ -0.546 ನಲ್ಲಿದೆ.
ಅಂದರೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡು ಮ್ಯಾಚ್ಗಳಲ್ಲಿ ಜಯ ಸಾಧಿಸಿದರೂ ಟೀಮ್ ಇಂಡಿಯಾ ಸೆಮಿಫೈನಲ್ಗೇರಬಹುದು. ಇದಕ್ಕಾಗಿ ಭಾರತ ತಂಡವು ತನ್ನ ನೆಟ್ ರನ್ ರೇಟ್ ಕಡಿಮೆಯಾಗದಂತೆ ಮುಂದಿನ ಎರಡು ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಅಂದರೆ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್ಗೇರುವುದನ್ನು ಎದುರು ನೋಡಬಹುದು.
ಈ ಎರಡು ಪಂದ್ಯಗಳನ್ನು ಗೆದ್ದರೆ ಟೀಮ್ ಇಂಡಿಯಾದ ಒಟ್ಟು ಅಂಕಗಳು ಎಂಟಕ್ಕೇರಲಿದೆ. ಒಂದು ವೇಳೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಮ್ಯಾಚ್ನಲ್ಲಿ ಗೆದ್ದರೆ ಟೀಮ್ ಇಂಡಿಯಾ ಅವರ ಕೊನೆಯ ಪಂದ್ಯವನ್ನೂ ಕೂಡ ಎದುರು ನೋಡಬೇಕಾಗುತ್ತದೆ.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ 6 ಆಟಗಾರರು ಔಟ್..!
ಏಕೆಂದರೆ ಜೂನ್ 29 ರಂದು ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಅಂದರೆ ಭಾರತ ತಂಡ ಇತ್ತ 8 ಅಂಕಗಳನ್ನು ಪಡೆದರೂ ನೆಟ್ ರನ್ ರೇಟ್ ಮೂಲಕ ಟೀಮ್ ಇಂಡಿಯಾವನ್ನು ಹಿಂದಿಕ್ಕಲು ಸೌತ್ ಆಫ್ರಿಕಾ ತಂಡ ಕೊನೆಯ ಮ್ಯಾಚ್ನಲ್ಲಿ ಭರ್ಜರಿ ಪ್ಲ್ಯಾನ್ ರೂಪಿಸಲಿದ್ದಾರೆ. ಅದರಂತೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ನಲ್ಲಿ ಗ್ರೂಪ್-ಎ ಯಿಂದ ಸೆಮಿಫೈನಲ್ಗೇರುವ ತಂಡಗಳಾವುವು ಎಂದು ತಿಳಿಯಲು ಜೂನ್ 29 ರವರೆಗೆ ಕಾಯಲೇಬೇಕು.
Published On - 8:21 am, Mon, 22 June 26