RCB ದಿನೇಶ್ ಕಾರ್ತಿಕ್​ರನ್ನು ಉಳಿಸಿಕೊಂಡಿದ್ದೇ ಪರಮಾಶ್ಚರ್ಯ: ಎಬಿ ಡಿವಿಲಿಯರ್ಸ್​

| Updated By: ಝಾಹಿರ್ ಯೂಸುಫ್

Updated on: Dec 03, 2023 | 6:46 PM

IPL 2024: ಐಪಿಎಲ್ 2022 ರಲ್ಲಿ ದಿನೇಶ್ ಕಾರ್ತಿಕ್ 13 ಪಂದ್ಯಗಳಲ್ಲಿ 11.66 ಸರಾಸರಿಯಲ್ಲಿ 140 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ 37 ವರ್ಷದ ದಿನೇಶ್ ಕಾರ್ತಿಕ್ ಅವರನ್ನು ಈ ಬಾರಿಯ ಐಪಿಎಲ್​ಗಾಗಿ ರಿಟೈನ್ ಮಾಡಿಕೊಂಡಿದೆ.

RCB ದಿನೇಶ್ ಕಾರ್ತಿಕ್​ರನ್ನು ಉಳಿಸಿಕೊಂಡಿದ್ದೇ ಪರಮಾಶ್ಚರ್ಯ: ಎಬಿ ಡಿವಿಲಿಯರ್ಸ್​
AB de Villiers
Follow us on

ಈ ಬಾರಿಯ ಐಪಿಎಲ್ (IPL 2024) ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು  (RCB) ತಂಡವು ಒಟ್ಟು 19 ಆಟಗಾರರನ್ನು ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಇರುವುದು ನನಗೆ ಪರಮಾಶ್ಚರ್ಯವನ್ನುಂಟು ಮಾಡಿದ ಎಂದಿದ್ದಾರೆ ಮಾಜಿ ಆರ್​ಸಿಬಿ ಆಟಗಾರ ಎಬಿ ಡಿವಿಲಿಯರ್ಸ್​.

ಕಳೆದ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ ಆರ್​ಸಿಬಿ ತಂಡ ದಿನೇಶ್ ಕಾರ್ತಿಕ್ ಅವರನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ. ಇದೇ ವೇಳೆ ಉತ್ತಮ ವೇಗದ ಬೌಲರ್​ ಜೋಶ್ ಹ್ಯಾಝಲ್​ವುಡ್ ಅವರನ್ನು ಕೈ ಬಿಟ್ಟಿದೆ. ಆರ್​ಸಿಬಿ ತಂಡದ ಈ ನಡೆ ನನಗೆ ಆಶ್ಚರ್ಯವನ್ನು ಉಂಟು ಮಾಡಿತು ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಐಪಿಎಲ್ 2022 ರಲ್ಲಿ ದಿನೇಶ್ ಕಾರ್ತಿಕ್ 13 ಪಂದ್ಯಗಳಲ್ಲಿ 11.66 ಸರಾಸರಿಯಲ್ಲಿ 140 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ 37 ವರ್ಷದ ದಿನೇಶ್ ಕಾರ್ತಿಕ್ ಅವರನ್ನು ಈ ಬಾರಿಯ ಐಪಿಎಲ್​ಗಾಗಿ ರಿಟೈನ್ ಮಾಡಿಕೊಂಡಿದೆ.

ಈ ಬಗ್ಗೆ ಮಾತನಾಡಿದ ಎಬಿಡಿ, ದಿನೇಶ್ ಕಾರ್ತಿಕ್ ಅವರನ್ನು ಉಳಿಸಿಕೊಂಡಿರುವುದು ನನಗೆ ಆಶ್ಚರ್ಯ ತಂದಿದೆ. ಕಳೆದ ಸೀಸನ್​ನಲ್ಲಿ ಅವರು ರನ್​ಗಳಿಸಿಲ್ಲ. ಅವರು ಇನ್ನೂ ಎರಡು ವರ್ಷಗಳ ಕಾಲ ಆಡಬಹುದು ಮತ್ತು ಅದ್ಭುತ ಕ್ರಿಕೆಟಿಗ ಎಂದು ನಾನು ಭಾವಿಸುತ್ತೇನೆ.

ಇದಾಗ್ಯೂ ಆರ್‌ಸಿಬಿ ತಮ್ಮ ಪರ್ಸ್ ಮೊತ್ತವನ್ನು ಹೆಚ್ಚಿಸಲು ಯುವ ವಿಕೆಟ್ ಕೀಪರ್​ ಆಯ್ಕೆಗೆ ಮುಂದಾಗಬಹುದು ಎಂದು ಭಾವಿಸಿದ್ದೆ. ಆದರೆ ದಿನೇಶ್ ಕಾರ್ತಿಕ್ ಅವರನ್ನೇ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಉಳಿಸಿಕೊಂಡಿರುವುದು ಅಚ್ಚರಿ ಮೂಡಿಸಿತ್ತು ಎಂದು ಎಬಿಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಜಿ RCB ಆಟಗಾರನಿಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

ಇನ್ನು ವನಿಂದು ಹಸರಂಗ, ಹರ್ಷಲ್ ಪಟೇಲ್ ಮತ್ತು ಜೋಶ್ ಹ್ಯಾಝಲ್‌ವುಡ್ ಬಿಡುಗಡೆ ಮಾಡಿದ್ದಾರೆ. ಈ ಮೂವರು ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ವಿಶೇಷವಾಗಿ, ಹ್ಯಾಝಲ್​ವುಡ್ ಉತ್ತಮ ಬೌಲರ್, ಅವರು RCB ಬೌಲಿಂಗ್ ಲೈನ್-ಅಪ್ ಅನ್ನು ಬಲಿಷ್ಠಗೊಳಿಸುತ್ತಿದ್ದರು. ಇದಾಗ್ಯೂ ಅವರನ್ನು ಉಳಿಸದೇ ರಿಲೀಸ್ ಮಾಡಿರುವುದು ಮತ್ತೊಂದು ಆಶ್ಚರ್ಯಕರ ನಡೆ ಎಂದು ಎಬಿಡಿ ಹೇಳಿದರು.

RCB ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ಡಗಾರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್.