2025 ರಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ. ವಾಸ್ತವವಾಗಿ ಈ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ಭಾರತ ಹಾಗೂ ಆತಿಥೇಯ ಪಾಕಿಸ್ತಾನದ ನಡುವೆ ಉಂಟಾಗಿದ್ದ ಗೊಂದಲಗಳಿಂದಾಗಿ ಈ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೂ ಈ ಎರಡೂ ದೇಶಗಳ ಬೇಡಿಕೆಯಂತೆಯೇ ಪಂದ್ಯಾವಳಿಯನ್ನು ಆಯೋಜಿಸುವ ನಿರ್ಧಾರಕ್ಕೆ ಬಂದಿದ್ದ ಐಸಿಸಿ ಇದೀಗ ಈ ಮಹತ್ವದ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಈ ಟೂರ್ನಿಯು ಫೆಬ್ರವರಿ 19 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಕರಾಚಿಯಲ್ಲಿ ನ್ಯೂಜಿಲೆಂಡ್ ಮತ್ತು ಆತಿಥೇಯ ಪಾಕಿಸ್ತಾನ ನಡುವೆ ನಡೆಯಲಿದೆ. ಮಾರ್ಚ್ 9 ರಂದು ಫೈನಲ್ ನಡೆಯಲಿದೆ. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇದಲ್ಲದೆ ಇಡೀ ಟೂರ್ನಿಯ ಹೈವೋಲ್ಟೇಜ್ ಕದನವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ದುಬೈನಲ್ಲಿ ಫೆಬ್ರವರಿ 23 ರಂದು ನಡೆಯಲಿದೆ.
Check out the full fixtures for the ICC Champions Trophy 2025. pic.twitter.com/oecuikydca
— ICC (@ICC) December 24, 2024
ದಿನಾಂಕ | ಮುಖಾಮುಖಿ | ಸ್ಥಳ |
19 ಫೆಬ್ರವರಿ, 2025 | ಪಾಕಿಸ್ತಾನ vs ನ್ಯೂಜಿಲೆಂಡ್ | ಕರಾಚಿ |
20 ಫೆಬ್ರವರಿ, 2025 | ಭಾರತ vs ಬಾಂಗ್ಲಾದೇಶ | ದುಬೈ |
21 ಫೆಬ್ರವರಿ, 2025 | ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ | ಕರಾಚಿ |
22 ಫೆಬ್ರವರಿ, 2025 | ಆಸ್ಟ್ರೇಲಿಯಾ vs ಇಂಗ್ಲೆಂಡ್ | ಲಾಹೋರ್ |
23 ಫೆಬ್ರವರಿ, 2025 | ಪಾಕಿಸ್ತಾನ vs ಭಾರತ | ದುಬೈ |
24 ಫೆಬ್ರವರಿ, 2025 | ಬಾಂಗ್ಲಾದೇಶ vs ನ್ಯೂಜಿಲೆಂಡ್ | ರಾವಲ್ಪಿಂಡಿ |
25 ಫೆಬ್ರವರಿ, 2025 | ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ | ರಾವಲ್ಪಿಂಡಿ |
26 ಫೆಬ್ರವರಿ, 2025 | ಅಫ್ಘಾನಿಸ್ತಾನ vs ಇಂಗ್ಲೆಂಡ್ | ಲಾಹೋರ್ |
27 ಫೆಬ್ರವರಿ, 2025 | ಪಾಕಿಸ್ತಾನ vs ಬಾಂಗ್ಲಾದೇಶ | ರಾವಲ್ಪಿಂಡಿ |
28 ಫೆಬ್ರವರಿ, 2025 | ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ | ಲಾಹೋರ್ |
ಮಾರ್ಚ್ 1, 2025 | ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ | ಕರಾಚಿ |
ಮಾರ್ಚ್ 2, 2025 | ನ್ಯೂಜಿಲೆಂಡ್ vs ಭಾರತ | ದುಬೈ |
ಮಾರ್ಚ್ 4, 2025 | ಸೆಮಿಫೈನಲ್ 1 | ದುಬೈ |
ಮಾರ್ಚ್ 5, 2025 | ಸೆಮಿಫೈನಲ್ 2 | ಲಾಹೋರ್ |
ಮಾರ್ಚ್ 9, 2025 | ಫೈನಲ್ | ಲಾಹೋರ್/ದುಬೈ |
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Tue, 24 December 24