INDU19 vs BAN U19: ಅಂಡರ್-19 ವಿಶ್ವಕಪ್​ನಲ್ಲಿಂದು ಭಾರತದ ಮೊದಲ ಪಂದ್ಯ: ಎದುರಾಳಿ ಯಾರು?, ಎಷ್ಟು ಗಂಟೆಗೆ?

|

Updated on: Jan 20, 2024 | 7:15 AM

ICC Under 19 World Cup: ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಮೊದಲಿಗೆ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ನಂತರ ಸ್ಕಾಟ್ಲೆಂಡ್-ಇಂಗ್ಲೆಂಡ್ ಮತ್ತು ಪಾಕಿಸ್ತಾನ-ಅಫ್ಘಾನಿಸ್ತಾನ ಸೆಣೆಸಾಡಲಿದೆ. ಪ್ರತಿ ಬಾರಿಯಂತೆ, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವ ಭಾರತೀಯ ಅಂಡರ್ -19 ತಂಡದ ಮೇಲೆ ಮತ್ತೊಮ್ಮೆ ಎಲ್ಲರ ಕಣ್ಣುಗಳಿವೆ.

INDU19 vs BAN U19: ಅಂಡರ್-19 ವಿಶ್ವಕಪ್​ನಲ್ಲಿಂದು ಭಾರತದ ಮೊದಲ ಪಂದ್ಯ: ಎದುರಾಳಿ ಯಾರು?, ಎಷ್ಟು ಗಂಟೆಗೆ?
BANU19 vs IND U19
Follow us on

ಎರಡು ವರ್ಷಗಳ ಕಾಯುವಿಕೆಯ ನಂತರ ಮತ್ತೊಮ್ಮೆ ಪುರುಷರ 19 ವರ್ಷದೊಳಗಿನವರ ವಿಶ್ವಕಪ್‌ (ICC U19 World Cup) ಮರಳಿದೆ. ಜನವರಿ 19 ಶುಕ್ರವಾರದಂದು ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಾವಳಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಅಮೆಕರಿಕಾ ವಿರುದ್ಧ ಐರ್ಲೆಂಡ್ 7 ವಿಕೆಟ್​ಗಳಿಂದ ಜಯಿಸಿದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಫ್ರಿಕಾ 31 ರನ್​ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ. ಇಂದು ಐಸಿಸಿ ಅಂಡರ್-19 ವಿಶ್ವಕಪ್​ನಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಮೊದಲಿಗೆ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ನಂತರ ಸ್ಕಾಟ್ಲೆಂಡ್-ಇಂಗ್ಲೆಂಡ್ ಮತ್ತು ಪಾಕಿಸ್ತಾನ-ಅಫ್ಘಾನಿಸ್ತಾನ ಸೆಣೆಸಾಡಲಿದೆ.

ಪ್ರತಿ ಬಾರಿಯಂತೆ, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವ ಭಾರತೀಯ ಅಂಡರ್ -19 ತಂಡದ ಮೇಲೆ ಮತ್ತೊಮ್ಮೆ ಎಲ್ಲರ ಕಣ್ಣುಗಳಿವೆ. 2022 ರಲ್ಲಿ ಯಶ್ ಧುಲ್ ನಾಯಕತ್ವದಲ್ಲಿ ಭಾರತವು ಈ ಪ್ರಶಸ್ತಿಯನ್ನು ದಾಖಲೆಯ 5 ನೇ ಬಾರಿ ಗೆದ್ದುಕೊಂಡಿತ್ತು. ಈ ಬಾರಿ ಆರನೇ ಪ್ರಶಸ್ತಿಯನ್ನು ಗೆಲ್ಲುವ ಜವಾಬ್ದಾರಿ ಉದಯ್ ಸಹರನ್ ನಾಯಕತ್ವದ ತಂಡದ ಮೇಲಿದೆ. ಇಂದು ಭಾರತ ತಂಡವು ಮೊದಲ ಬಾರಿಗೆ ಮೈದಾನಕ್ಕಿಳಿಯಲಿದ್ದು, ಬ್ಲೋಮ್‌ಫಾಂಟೈನ್ ಮೈದಾನದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಂಡರ್-19 ವಿಶ್ವಕಪ್ ಪಂದ್ಯ ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 1:30 ರಿಂದ ಆರಂಭವಾಗಲಿದೆ. ಈ ಪಂದ್ಯದ ಟಾಸ್ ಮಧ್ಯಾಹ್ನ 1:00 ಗಂಟೆಗೆ ನಡೆಯಲಿದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಲೈವ್ ಸ್ಟ್ರೀಮಿಂಗ್‌ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತವೆ.

ಇದನ್ನೂ ಓದಿ
ಗುರು ದ್ರಾವಿಡ್ ಆದೇಶವನ್ನು ಮತ್ತೆ ಧಿಕ್ಕರಿಸಿದ್ರಾ ಇಶಾನ್ ಕಿಶನ್..!
ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಝಾಕಾ ಅಶ್ರಫ್..!
ರಣಜಿಯಲ್ಲಿ ಮುಂದುವರೆದ ರಹಾನೆ ಶೂನ್ಯ ಸಾಧನೆ
ಅಂಡರ್-19 ವಿಶ್ವಕಪ್​ನಲ್ಲಿ ಭಾರತದ ವೇಳಾಪಟ್ಟಿ ಇಲ್ಲಿದೆ.

WTC 2023-25: ವಿಂಡೀಸ್​ಗೆ 10 ವಿಕೆಟ್ ಸೋಲು; ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಮಹತ್ತರ ಬದಲಾವಣೆ

ಬ್ಲೋಮ್‌ಫಾಂಟೈನ್‌ನಲ್ಲಿರುವ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಈ ವಿಕೆಟ್‌ನಲ್ಲಿ ಬ್ಯಾಟರ್‌ಗಳು ಭರ್ಜರಿ ರನ್ ಗಳಿಸಿದ್ದಾರೆ. ಮೊದಲು ಬ್ಯಾಟ್ ಮಾಡುವ ತಂಡವು ಬೋರ್ಡ್‌ನಲ್ಲಿ 300-320 ರನ್ ಕಲೆಹಾಕಲೇಬೇಕು. 300 ಕ್ಕಿಂತ ಕಡಿಮೆ ರನ್ ಗಳಿಸಿದರೆ ಸುಲಭವಾಗಿ ಚೇಸ್ ಮಾಡಬಹುದು. ಇನ್ನು ಅಕ್ಯುವೆದರ್ ಪ್ರಕಾರ, ಬ್ಲೋಮ್‌ಫಾಂಟೈನ್‌ನಲ್ಲಿ ಶನಿವಾರದ ಹವಾಮಾನ ನೋಡಿದರೆ ಮಳೆಯ ಮುನ್ಸೂಚನೆಯಿಲ್ಲದ ಕಾರಣ ಪಂದ್ಯಕ್ಕೆ ಅನುಕೂಲಕರವಾಗಿರುತ್ತದೆ. ಹವಾಮಾನವು ಪ್ರಕಾಶಮಾನವಾಗಿ ಮತ್ತು ಬಿಸಿಲಿನಿಂದ ಕೂಡಿರುತ್ತದೆ. ಕನಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌. ಗರಿಷ್ಠ ತಾಪಮಾನವು ಸುಮಾರು 30 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಭಾರತ ತಂಡ: ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರನ್ (ನಾಯಕ), ಅರವೆಲ್ಲಿ ಅವ್ನಿಶ್ ರಾವ್ (ವಿಕೆಟ್ ಕೀಪರ್), ಸೌಮ್ಯ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನೇಶ್ ಮಹಾಜನ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.

ಬಾಂಗ್ಲಾದೇಶ ತಂಡ: ಮಹ್ಫುಜುರ್ ರಹಮಾನ್ ರಬ್ಬಿ (ನಾಯಕ), ಆಶಿಕುರ್ ರೆಹಮಾನ್ ಶಿಬ್ಲಿ, ಜಿಶಾನ್ ಆಲಂ, ಚೌಧರಿ ಮೊಹಮ್ಮದ್ ರಿಜ್ವಾನ್, ಆದಿಲ್ ಬಿನ್ ಸಿದ್ದಿಕ್, ಮೊಹಮ್ಮದ್ ಅಶ್ರಫುಜ್ಜಮಾನ್ ಬೊರಾನೊ, ಅರಿಫುಲ್ ಇಸ್ಲಾಂ, ಶಿಹಾಬ್ ಜೇಮ್ಸ್, ಅಹ್ರಾರ್ ಅಮೀನ್ (ಉಪನಾಯಕ), ಶೇಖ್, ಪರ್ವೇಜ್ ಉಜಿ ರೋಹನತ್ ದೌಲಾ.ಬೋರ್ಸನ್, ಇಕ್ಬಾಲ್ ಹಸನ್ ಎಮನ್, ವಾಸಿ ಸಿದ್ದಿಕಿ, ಮರೂಫ್ ಮೃಧಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ