ಇಂದು ಐಸಿಸಿ U19 ವಿಶ್ವಕಪ್‌ಗೆ ಚಾಲನೆ: ಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಿ ದಿಢೀರ್ ಆಫ್ರಿಕಾಕ್ಕೆ ಶಿಫ್ಟ್ ಆಗಿದ್ದು ಏಕೆ?
ICC Under 19 World Cup: ಅಂಡರ್-19 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಇಂದು ಐರ್ಲೆಂಡ್ ಮತ್ತು ಅಮೆರಿಕ ನಡುವೆ ಬ್ಲೋಮ್‌ಫಾಂಟೈನ್‌ನಲ್ಲಿ ನಡೆಯಲಿದೆ. ಈ ಬಾರಿಯ ಟೂರ್ನಿಗೆ ಹರಿಣಗಳ ನಾಡು ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸುತ್ತಿದೆ. ಆದರೆ, ಈ ಮೊದಲು ಈ ವಿಶ್ವಕಪ್ ಟೂರ್ನಿ ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯಬೇಕಿತ್ತು.
19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Under 19 World Cup) ಇಂದಿನಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿದೆ. ಅಂಡರ್-19 ಕ್ರಿಕೆಟ್ ಪ್ರತಿಯೊಬ್ಬ ಕ್ರಿಕೆಟಿಗನಿಗೆ ಬಹಳ ಮುಖ್ಯವಾಗಿದೆ. ಆಯ್ಕೆಗಾರರ ಗಮನ ಸೆಳೆದು ಹಿರಿಯ ತಂಡವನ್ನು ಸೇರುವುದಕ್ಕೆ ಇದೊಂದು ಸೇತುವೆಯಾಗಿದೆ. ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ರೋಹಿತ್ ಶರ್ಮಾ ಅವರಂತಹ ಆಟಗಾರರು ಅಂಡರ್-19 ಮಟ್ಟದಲ್ಲಿ ಅಬ್ಬರಿಸಿದ ನಂತರ ಹಿರಿಯ ತಂಡವನ್ನು ಪ್ರತಿನಿಧಿಸಿದರು. ಇದೀಗ ಇಡೀ ಕ್ರಿಕೆಟ್ ಲೋಕದ ಕಣ್ಣು ಭವಿಷ್ಯದ ಯುವ ತಾರೆಯರು ಮೇಲಿದೆ.
ಈ ಟೂರ್ನಿಯ ಮೊದಲ ಪಂದ್ಯ ಇಂದು ಐರ್ಲೆಂಡ್ ಮತ್ತು ಅಮೆರಿಕ ನಡುವೆ ಬ್ಲೋಮ್‌ಫಾಂಟೈನ್‌ನಲ್ಲಿ ನಡೆಯಲಿದೆ. ಈ ಬಾರಿಯ ಟೂರ್ನಿಗೆ ಹರಿಣಗಳ ನಾಡು ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸುತ್ತಿದೆ. ಆದರೆ, ಈ ಮೊದಲು ಈ ವಿಶ್ವಕಪ್ ಟೂರ್ನಿ ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ, ನವೆಂಬರ್‌ನಲ್ಲಿ ಐಸಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿತು. ಹೀಗಾಗಿ ದಕ್ಷಿಣ ಆಫ್ರಿಕಾ ಈ ಪಂದ್ಯಾವಳಿಯ ಆತಿಥ್ಯವನ್ನು ಪಡೆದುಕೊಂಡಿದೆ. ಎರಡು ತಿಂಗಳೊಳಗೆ ದಕ್ಷಿಣ ಆಫ್ರಿಕಾ ಈ ಪಂದ್ಯಾವಳಿಗೆ ತನ್ನನ್ನು ತಾನು ಸಿದ್ಧಪಡಿಸಿಕೊಂಡಿದೆ. ತನ್ನ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಐಸಿಸಿ ಶ್ರೀಲಂಕಾವನ್ನು ಅಮಾನತುಗೊಳಿಸಿತು.
IND vs AFG: ಸಾವಿರ ಬೌಂಡರಿಗಳ ಸರದಾರ ರೋಹಿತ್ ಶರ್ಮಾ..!
ಎಷ್ಟು ತಂಡಗಳಿವೆ, ಸ್ವರೂಪ ಏನು?
ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಈ 16 ತಂಡಗಳನ್ನು ತಲಾ ನಾಲ್ಕು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದಾದ ಬಳಿಕ ಸೂಪರ್-6 ಸುತ್ತು ನಡೆಯಲಿದೆ. ಸೂಪರ್-6 ಸುತ್ತಿನ ನಂತರ ಅಗ್ರ-4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಗುಂಪು ಹಂತದ ಪಂದ್ಯ ಜನವರಿ 28 ರವರೆಗೆ ನಡೆಯಲಿದ್ದು, ನಂತರ ಫೆಬ್ರವರಿ 5 ರವರೆಗೆ ಸೂಪರ್-6 ಸುತ್ತು ನಡೆಯಲಿದೆ. ಫೆಬ್ರವರಿ 6 ರಂದು ಮೊದಲ ಸೆಮಿಫೈನಲ್ ಮತ್ತು ಫೆಬ್ರವರಿ 8 ರಂದು ಎರಡನೇ ಸೆಮಿಫೈನಲ್ ಆಯೋಜಿಸಲಾಗಿದೆ. ಇದಾದ ನಂತರ ಫೆಬ್ರವರಿ 11 ರಂದು ಬೆನೋನಿಯಲ್ಲಿ ಫೈನಲ್ ಪಂದ್ಯ ಏರ್ಪಡಿಸಲಾಗಿದೆ. ಈ ಟೂರ್ನಿಯು ದಕ್ಷಿಣ ಆಫ್ರಿಕಾದ ಐದು ಸ್ಥಳಗಳಲ್ಲಿ ನಡೆಯಲಿದೆ. ಪೊಚ್ಟೆಫೊಸ್ಟ್ರಮ್, ಬ್ಲೋಮ್‌ಫಾಂಟೈನ್, ಬೆನೋನಿ, ಕಿಂಬರ್ಲಿ, ಪೂರ್ವ ಲಂಡನ್‌ನಲ್ಲಿ ಪಂದ್ಯಗಳು ನಡೆಯಲಿವೆ.
ಭಾರತ ಅತ್ಯಂತ ಯಶಸ್ವಿ ತಂಡ
ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗುವ ನೆಚ್ಚಿನ ತಂಡವಾಗಿದೆ. 2022ರಲ್ಲಿ ಯಶ್ ಧುಲ್ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದಿತ್ತು. ಈ ಬಾರಿ ಉದಯ್ ಶರಣ್ ನಾಯಕತ್ವದಲ್ಲಿ ತಂಡ ಆರನೇ ಬಾರಿ ಚಾಂಪಿಯನ್ ಆಗಲು ಪ್ರಯತ್ನಿಸಲಿದೆ. ಭಾರತ 2000, 2008, 2012, 2018 ಮತ್ತು 2022ರಲ್ಲಿ ಈ ಟೂರ್ನಿಯನ್ನು ಗೆದ್ದಿತ್ತು. ಭಾರತ ನಂತರ ಆಸ್ಟ್ರೇಲಿಯಾ ಅತಿ ಹೆಚ್ಚು ಬಾರಿ ಈ ಟೂರ್ನಿಯನ್ನು ಗೆದ್ದುಕೊಂಡಿದೆ. 1988, 2002, 2010ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. 2004 ಮತ್ತು 2006ರಲ್ಲಿ ಪಾಕಿಸ್ತಾನ ಈ ವಿಶ್ವಕಪ್ ಗೆದ್ದಿತ್ತು. 2020 ರಲ್ಲಿ ಬಾಂಗ್ಲಾದೇಶ, 2014 ರಲ್ಲಿ ದಕ್ಷಿಣ ಆಫ್ರಿಕಾ, 2016 ರಲ್ಲಿ ವೆಸ್ಟ್ ಇಂಡೀಸ್ ಮತ್ತು 1998 ರಲ್ಲಿ ಇಂಗ್ಲೆಂಡ್ ಈ ಪಂದ್ಯಾವಳಿಯನ್ನು ಗೆದ್ದವು. ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಜ. 20 ರಂದು ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ