ಮಹಿಳಾ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ಔಟ್..! ಕಾರಣ ಬಹಿರಂಗ

2027ರ ಚೊಚ್ಚಲ ಮಹಿಳಾ ಚಾಂಪಿಯನ್ಸ್ ಟ್ರೋಫಿಗೆ ಭಾರತ ಆತಿಥ್ಯ ವಹಿಸಲಿದೆ. ಶ್ರೀಲಂಕಾ ಲೋಪದಿಂದ ಭಾರತಕ್ಕೆ ಈ ಅವಕಾಶ ಸಿಕ್ಕಿದೆ. ಈ ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಲಿವೆ. ಭಾರತ-ಪಾಕ್ ಕ್ರಿಕೆಟ್ ಮಹತ್ವದ ನಡುವೆಯೂ, ಪಾಕಿಸ್ತಾನ ಮಹಿಳಾ ತಂಡ ಟಿ20 ಶ್ರೇಯಾಂಕದಲ್ಲಿ 6ರೊಳಗೆ ಇಲ್ಲದ ಕಾರಣ ಈ ಪಂದ್ಯಾವಳಿಗೆ ಅರ್ಹತೆ ಪಡೆದಿಲ್ಲ, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಮಹಿಳಾ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ಔಟ್..! ಕಾರಣ ಬಹಿರಂಗ
ಪಾಕ್ ಮಹಿಳಾ ತಂಡ
Image Credit source: PTI

Updated on: Sep 03, 2026 | 3:54 PM

2025 ರಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್ ಬಳಿಕ ಭಾರತದಲ್ಲಿ ಮತ್ತೊಂದು ಮಹಿಳಾ ಐಸಿಸಿ ಈವೆಂಟ್ ನಡೆಯಲಿದೆ. 2027 ರಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಮಹಿಳಾ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಭಾರತಕ್ಕೆ ಸಿಕ್ಕಿದೆ. ಈ ಮೊದಲು ಈ ಪಂದ್ಯಾವಳಿಯನ್ನು ಶ್ರೀಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಶ್ರೀಲಂಕಾ ಮಂಡಳಿಯ ಲೋಪದೋಷಗಳಿಂದಾಗಿ ಭಾರತಕ್ಕೆ ಆತಿಥ್ಯವಹಿಸುವ ಅವಕಾಶ ಸಿಕ್ಕಿದೆ. ಈ ಪಂದ್ಯಾವಳಿಯ 6 ತಂಡಗಳು ಭಾಗವಹಿಸಲಿದ್ದು, ಎರಡು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಆದಾಗ್ಯೂ ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಆಡದಿರುವುದು ಅಭಿಮಾನಿಗಳಿಗೆ ಬೇಸರವನ್ನುಂಟುಮಾಡಿದೆ.

ಭಾರತ- ಪಾಕ್ ಪಂದ್ಯವಿರುವುದಿಲ್ಲ

ಐಸಿಸಿ ಪಂದ್ಯಾವಳಿಗಳಿಗೆ ಅದರದ್ದೇ ಆದ ಮಹತ್ವವಿದೆ. ಈ ಪಂದ್ಯಾವಳಿಗಳಲ್ಲಿ ಕೆಲವೊಂದು ತಂಡಗಳ ಮುಖಾಮುಖಿಗಾಗಿ ಪ್ರೇಕ್ಷಕರು ಕಾದು ಕುಳಿತಿರುತ್ತಾರೆ. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೀರುವ ಮಹತ್ವವೇ ಬೇರೆ. ಅದು ಮಹಿಳಾ ಕ್ರಿಕೆಟ್ ಆಗಿರಲಿ ಅಥವಾ ಪುರುಷ ಕ್ರಿಕೆಟ್ ಆಗಿರಲಿ ಉಭಯ ದೇಶಗಳ ತಂಡಗಳ ನಡುವಿನ ಕದನಕ್ಕಾಗಿ ಅಭಿಮಾನಿಗಳು ಕಾದುಕುಳಿತಿರುತ್ತಾರೆ. ಆದರೆ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಮಹಿಳಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಆಡುವುದಿಲ್ಲ. ಇದಕ್ಕೆ ಪಾಕಿಸ್ತಾನ ತಂಡ ಭಾರತಕ್ಕೆ ಬರುವುದಿಲ್ಲ ಎಂಬುದು ಕಾರಣವಲ್ಲ. ಬದಲಿಗೆ ಈ ಪಂದ್ಯಾವಳಿಗೆ ಪಾಕಿಸ್ತಾನ ತಂಡ ಅರ್ಹತೆಯನ್ನೇ ಪಡೆದುಕೊಂಡಿಲ್ಲ.

ಪಾಕ್ ಅನರ್ಹತೆಗೆ ಕಾರಣವೇನು?

ಮೇಲೆ ಹೇಳಿದಂತೆ ಚೊಚ್ಚಲ ಆವೃತ್ತಿಯ ಮಹಿಳಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ. ಆ 6 ತಂಡಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಸೇರಿವೆ. ಹಾಗಿದ್ದರೆ ಪಾಕಿಸ್ತಾನ ತಂಡವೇಕೆ ಈ ಪಂದ್ಯಾವಳಿಯಲ್ಲಿ ಆಡುತ್ತಿಲ್ಲ ಎಂಬುದಕ್ಕೆ ಕಾರಣ, ಟಿ20 ರ್ಯಾಂಕಿಂಗ್​ನಲ್ಲಿ ಪಾಕಿಸ್ತಾನದ ಸ್ಥಾನ 6 ರ ಒಳಗೆ ಇಲ್ಲದೆ ಇರುವುದು.

ಕ್ಯಾಚ್ ಹಿಡಿಯಲ್ಲ, ರನ್ ಹೊಡೆಯಲ್ಲ, ಬೌಲಿಂಗ್ ಬಗ್ಗೆ ಕೇಳಬೇಕಿಲ್ಲ; ಇವರೇನಾ ಟಿ20 ಚಾಂಪಿಯನ್ಸ್..!

ಒಂಬತ್ತನೇ ಸ್ಥಾನದಲ್ಲಿ ಪಾಕ್

ವಾಸ್ತವವಾಗಿ, ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಆಡುವ ತಂಡಗಳ ಪಟ್ಟಿಯನ್ನು ಶ್ರೇಯಾಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ನಾವು ಇತ್ತೀಚಿನ ರ್ಯಾಂಕಿಂಗ್ ಪಟ್ಟಿಯನ್ನು ನೋಡಿದರೆ, ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ ಮತ್ತು ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಭಾರತ ತಂಡ ಮೂರನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿದ್ದು, ಶ್ರೀಲಂಕಾ ಆರನೇ ಸ್ಥಾನದಲ್ಲಿದೆ. ಈ ಆಧಾರದ ಮೇಲೆ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಪಾಕಿಸ್ತಾನ ಈ ರ್ಯಾಂಕಿಂಗ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವುದರಿಂದ ಈ ಪಂದ್ಯಾವಳಿಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us