
ಆಸೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯ ಸೋತ ಟೀಂ ಇಂಡಿಯಾ (India Vs Australia), ಕೇವಲ ಪಂದ್ಯ ಮಾತ್ರವಲ್ಲದೆ ತವರಿನಲ್ಲಿ ಸರಣಿಯನ್ನೂ ಕಳೆದುಕೊಂಡಿದೆ. ಬುಧವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ, ರೋಹಿತ್ (Rohit Sharma) ಬಳಗವನ್ನು 2-1 ಅಂತರದಿಂದ ಸೋಲಿಸಿತು. ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತವನ್ನು 21 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಸರಣಿ ಗೆದ್ದುಕೊಂಡಿದ್ದಲ್ಲದೆ, ಏಕದಿನ ಶ್ರೇಯಾಂಕದಲ್ಲಿ (ODI Rankings) ಟೀಂ ಇಂಡಿಯಾವನ್ನು ನಂ.1 ಸ್ಥಾನದಿಂದ ಹೊರದಬ್ಬಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋತಿದ್ದ ಆಸ್ಟ್ರೇಲಿಯಾ ತಂಡ ಆ ಬಳಿಕ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಇದೀಗ ಚೆನ್ನೈನಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿತು.
ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49 ಓವರ್‌ಗಳಲ್ಲಿ 269 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಒಂದು ಹಂತದವರೆಗು ಗೆಲುವಿನ ಪ್ರಬಲ ಸ್ಪರ್ಧಿ ಎನಿಸಿಕೊಂಡಿತ್ತು. ಆದರೆ ತಂಡದ ಬ್ಯಾಟರ್ಗಳು ತೋರಿದ ಬೇಜವಬ್ದಾರಿ ಆಟದಿಂದ ಪಂದ್ಯ ಕಳೆದುಕೊಳ್ಳಬೇಕಾಯಿತು. ಆಸೀಸ್ ಬೌಲರ್‌ಗಳ ದಾಳಿಗೆ ತಲೆಬಾಗಿದ ಟೀಂ ಇಂಡಿಯಾ 49.1 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಪಂದ್ಯ ಸೋತಿದ್ದಲ್ಲದೆ, ಸರಣಿಯನ್ನು ಕಳೆದುಕೊಂಡಿತು. ಕೊನೆಯವರೆಗೂ ಗೆಲುವಿನ ಲಯದಲ್ಲಿ ಭಾರತ ಲಯ ತಪ್ಪಿದ್ದು ಎಲ್ಲಿ? ಪಂದ್ಯ ಸೋಲಲು ಕಾರಣಗಳೇನು? ಎಂಬುದರ ವಿವರ ಇಲ್ಲಿದೆ.
IPL 2023: 4 ವರ್ಷಗಳ ಬಳಿಕ ಐಪಿಎಲ್ನಲ್ಲಿ ಉದ್ಘಾಟನಾ ಸಮಾರಂಭ: ನೃತ್ಯ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ?
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Thu, 23 March 23