ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ತಿರುವನಂತಪುರಂನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಯಂಗ್ ಇಂಡಿಯಾ ಕಾಂಗರೂಗಳಿಗೆ 44 ರನ್ಗಳ ಸೋಲಿನ ಶಾಕ್ ನೀಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ ಆಹ್ವಾನಿಸಿತು. ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕರಿಬ್ಬರು ಆರಂಭದಲ್ಲೇ ಕಾಂಗರೂಗಳನ್ನು ಪಂದ್ಯದಿಂದ ಹೊರಹಾಕಿದರು. ಅದರಲ್ಲೂ ಆಸೀಸ್ ಬೌಲರ್ಗಳ ಬೆವರಿಳಿಸಿದ ಯಶಸ್ವಿ ಜೈಸ್ವಾಲ್ (Yashasvi Jaiswal) ಬೌಂಡರಿ ಸಿಕ್ಸರ್‌ಗಳ ಮಳೆಗರೆದರು. ಈ ಮೂಲಕ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಅದರಲ್ಲೂ ಆಸೀಸ್ ವೇಗಿ ಸೀನ್ ಅಬಾಟ್ (Sean Abbott) ಎದುರು ಜೈಸ್ವಾಲ್ ಅಬ್ಬರಿಸಿದ್ದು, ಪಂದ್ಯದ ಹೈಲೇಟ್ ಆಗಿತ್ತು.
ಬೌಂಡರಿ ಸಿಕ್ಸರ್‌ಗಳ ಮೂಲಕ ಭಾರತದ ಸ್ಕೋರ್ ಬೋರ್ಡ್ಗೆ ಶರವೇಗದ ನೀಡಿದ ಯಶಸ್ವಿ ಜೈಸ್ವಾಲ್, ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಸೀನ್ ಅಬಾಟ್ ಅವರ ಒಂದೇ ಓವರ್‌ನಲ್ಲಿ 24 ರನ್ ಕಲೆಹಾಕಿದರು. ಈ ಎಡಗೈ ಬ್ಯಾಟ್ಸ್‌ಮನ್, ಸೀನ್ ಅಬಾಟ್ ಬೌಲ್ ಮಾಡಿದ ನಾಲ್ಕನೇ ಓವರ್‌ನ ಮೊದಲ ಎರಡು ಎಸೆತಗಳನ್ನು ಬೌಂಡರಿಗಟ್ಟಿದರು. ಮೂರನೇ ಎಸೆತವನ್ನು ಶಾರ್ಟ್ ಫೈಲ್ ಲೆಗ್ ಕಡೆಗೆ ಬಾರಿಸಿ ಸತತ ಮೂರನೇ ಬೌಂಡರಿ ಕಲೆಹಾಕಿದರು. ಇದರ ನಂತರ ನಾಲ್ಕು ಮತ್ತು ಐದನೇ ಎಸೆತವನ್ನು ಕ್ರಮವಾಗಿ ಮಿಡ್ ವಿಕೆಟ್ ಮತ್ತು ಡೀಪ್ ಸ್ಕ್ವೇರ್ ಲೆಗ್ ಕಡೆಗೆ ಆಡಿ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ ಕೊನೆಯ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಅಬಾಟ್ ಅವರ ಓವರ್‌ನಲ್ಲಿ ಬರೋಬ್ಬರಿ 24 ರನ್‌ಗಳು ಬಂದವು.
ICYMI📢
Jaw-dropping Jaiswal💥🤯#TeamIndia #YashasviJaiswal #PlayBold #INDvAUSpic.twitter.com/OThzjQvVD2
— Default user (@ArijitK23525214) November 26, 2023
ಪವರ್‌ಪ್ಲೇಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್; ರೋಹಿತ್-ರಾಹುಲ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್..!
ಯಶಸ್ವಿ ಜೈಸ್ವಾಲ್ ಆರನೇ ಓವರ್‌ನಲ್ಲಿಯೇ ಅಂದರೆ ಕೇವಲ 24 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಪೂರೈಸಿದರು. ಅದೇ ಓವರ್‌ನಲ್ಲಿ ಔಟ್ ಕೂಡ ಆದರು. ಈ ಮೂಲಕ ಯಶಸ್ವಿ ಟಿ20 ಅಂತರಾಷ್ಟ್ರೀಯ ಪಂದ್ಯದ ಪವರ್‌ಪ್ಲೇನಲ್ಲಿ ಅರ್ಧಶತಕ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಈ ಸಾಧನೆ ಮಾಡಿದ್ದರು. ಹಾಗೆಯೇ ಜೈಸ್ವಾಲ್ ಬಾರಿಸಿದ 53 ರನ್‌ಗಳು ಪವರ್‌ಪ್ಲೇನಲ್ಲಿ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ.
ಈ ಪಂದ್ಯದಲ್ಲಿ ಭಾರತ ತಂಡ ಮೊದಲ 6 ಓವರ್‌ಗಳಲ್ಲಿ 77 ರನ್ ಕಲೆಹಾಕಿತು. ಇದು ತವರಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಗರಿಷ್ಠ ಪವರ್‌ಪ್ಲೇ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 2009ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ತಂಡ 77 ರನ್ ಕಲೆಹಾಕಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.