ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ

|

Updated on: Dec 18, 2024 | 10:58 AM

Australia vs India, 3rd Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 445 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 260 ರನ್​ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡವು 7 ವಿಕೆಟ್ ನಷ್ಟಕ್ಕೆ 89 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಟೀಮ್ ಇಂಡಿಯಾಗೆ ಕೊನೆಯ ದಿನದಾಟದಲ್ಲಿ 275 ರನ್​​ಗಳ ಗುರಿ ನೀಡಿದೆ.

ಬ್ರಿಸ್ಬೇನ್​​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯದಲ್ಲೂ ರೋಚಕ ಪೈಪೋಟಿ ಕಂಡು ಬಂದಿದೆ. ಅದರಲ್ಲೂ ಈ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಕಬಳಿಸಿ ಮೊಹಮ್ಮದ್ ಸಿರಾಜ್ ಸಂಭ್ರಮಿಸಿದರು. ಈ ಸೆಲೆಬ್ರೇಷನ್ ಅನ್ನು ಮೀರಿಸುವಂತೆ ಪುಟ್ಟ ಅಭಿಮಾನಿಯೊಬ್ಬ ಗ್ಯಾಲರಿಯಲ್ಲಿ  ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಟ್ರಾವಿಸ್ ಹೆಡ್ ಔಟ್ ಆಗುತ್ತಿದ್ದಂತೆ ಟೀಮ್ ಇಂಡಿಯಾ ಅಭಿಮಾನಿ ತೊಲಗುವಂತೆ ಕೈ ಸನ್ನೆ ಮಾಡುವ ಮೂಲಕ ಸಖತ್ತಾಗಿ ಸಂಭ್ರಮಿಸಿದರು. ಇಂತಹದೊಂದು ಸಂಭ್ರಮಕ್ಕೆ ಕಾರಣ ಪಿಂಕ್ ಬಾಲ್​​ ಟೆಸ್ಟ್​ನಲ್ಲಿ ಸಿರಾಜ್ ನೀಡಿದ ಸೆಂಡ್ ಆಫ್.

ಅಡಿಲೇಡ್​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್​ರನ್ನು ಬೌಲ್ಡ್ ಮಾಡಿದ ಮೊಹಮ್ಮದ್ ಸಿರಾಜ್ ತೊಲಗುವಂತೆ ಕೈ ಸನ್ನೆ ಮಾಡಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲೂ ಸಿರಾಜ್ ಟ್ರಾವಿಸ್ ಹೆಡ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಪುಟ್ಟ ಅಭಿಮಾನಿ ಮೊಹಮ್ಮದ್ ಸಿರಾಜ್ ಶೈಲಿಯಲ್ಲಿ ತೊಲಗುವಂತೆ ಕೈ ಸನ್ನೆ ಮಾಡಿ ಸಂಭ್ರಮಿಸಿದರು. ಇದೀಗ ಈ ಸಖತ್ ಸಂಭ್ರಮದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 445 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 260 ರನ್​ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡವು 7 ವಿಕೆಟ್ ನಷ್ಟಕ್ಕೆ 89 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಟೀಮ್ ಇಂಡಿಯಾಗೆ ಕೊನೆಯ ದಿನದಾಟದಲ್ಲಿ 275 ರನ್​​ಗಳ ಗುರಿ ನೀಡಿದೆ.