‘ಬಾಲ್ ಆಫ್ ದಿ ಟೂರ್ನಮೆಂಟ್’: ಕುಲ್ದೀಪ್ ಮ್ಯಾಜಿಕ್​ಗೆ ಬಟ್ಲರ್ ಕ್ಲೀನ್ ಬೌಲ್ಡ್! ವಿಡಿಯೋ ನೋಡಿ

|

Updated on: Oct 30, 2023 | 10:27 AM

Kuldeep Yadav, ICC World Cup 2023: ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರ ವಿಕೆಟ್ ಉರುಳಿಸಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಚೈನಾಮನ್ ಬೌಲ್ ಮಾಡಿದ ಈ ಎಸೆತವನ್ನು ಬಾಲ್ ಆಫ್​ ದಿ ಟೂರ್ನಮೆಂಟ್ ಎಂದು ನೆಟ್ಟಿಗರು ಕರೆಯಲಾರಂಭಿಸಿದ್ದಾರೆ.

‘ಬಾಲ್ ಆಫ್ ದಿ ಟೂರ್ನಮೆಂಟ್: ಕುಲ್ದೀಪ್ ಮ್ಯಾಜಿಕ್​ಗೆ ಬಟ್ಲರ್ ಕ್ಲೀನ್ ಬೌಲ್ಡ್! ವಿಡಿಯೋ ನೋಡಿ
ಕುಲ್ದೀಪ್ ಯಾದವ್ ಮ್ಯಾಜಿಕ್
Follow us on

2023ರ ವಿಶ್ವಕಪ್​ನಲ್ಲಿ (ICC ODI World Cup 2023) ಟೀಂ ಇಂಡಿಯಾದ ಗೆಲುವಿನ ಪಯಣ ಮುಂದುವರಿದಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್ ಬ್ರಿಗೇಡ್ ಇಂಗ್ಲೆಂಡ್ ತಂಡವನ್ನು (India vs England) 100 ರನ್‌ಗಳಿಂದ ಸೋಲಿಸಿತು. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಸತತ ಆರನೇ ಗೆಲುವು. ಇದರೊಂದಿಗೆ ಸೆಮಿಫೈನಲ್ ಟಿಕೆಟ್ ಬಹುತೇಕ ಖಚಿತವಾಗಿದ್ದು, 6 ಪಂದ್ಯಗಳಲ್ಲಿ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಭಾರತ ನೀಡಿದ 229 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ 34.5 ಓವರ್‌ಗಳಲ್ಲಿ 129 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 4, ಬುಮ್ರಾ 3, ಕುಲ್ದೀಪ್ 2 ಹಾಗೂ ಜಡೇಜಾ 1 ವಿಕೆಟ್ ಪಡೆದರು. ಅದರಲ್ಲೂ ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ (Kuldeep Yadav) ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ (Jos Buttler) ಅವರ ವಿಕೆಟ್ ಉರುಳಿಸಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಚೈನಾಮನ್ ಬೌಲ್ ಮಾಡಿದ ಈ ಎಸೆತವನ್ನು ಬಾಲ್ ಆಫ್​ ದಿ ಟೂರ್ನಮೆಂಟ್ ಎಂದು ನೆಟ್ಟಿಗರು ಕರೆಯಲಾರಂಭಿಸಿದ್ದಾರೆ.

9 ರನ್​ಗಳಿಗೆ 4 ವಿಕೆಟ್

ಈ ಪಂದ್ಯದಲ್ಲಿ ಭಾರತ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್​ಸ್ಟೋವ್ ಮೊದಲ ವಿಕೆಟ್​ಗೆ 30 ರನ್​ಗಳ ಸ್ಫೋಟಕ ಆರಂಭ ಒದಗಿಸಿದರು. ಆದರೆ ಕೇವಲ 9 ರನ್​ಗಳ ಅಂತರದಲ್ಲಿ ತಂಡ 4 ವಿಕೆಟ್ ಕಳೆದುಕೊಂಡಿತು. ಈ ವೇಳೆ ಬ್ಯಾಟಿಂಗ್​ಗೆ ಇಳಿದ ನಾಯಕ ಬಟ್ಲರ್ ನಿದಾನಗತಿಯ ಆಟಕ್ಕೆ ಮುಂದಾದರು. ಹಾಗೆಯೇ ತಾಳ್ಮೆಯಿಂದ ಮೊಯಿನ್ ಅಲಿ ಅವರೊಂದಿಗೆ ತಂಡದ ಇನ್ನಿಂಗ್ಸ್ ಕಟ್ಟಲಾರಂಭಿಸಿದರು. ಆದರೆ 16ನೇ ಓವರ್​ನಲ್ಲಿ ದಾಳಿಗಿಳಿದ ಕುಲ್ದೀಪ್ ಯಾದವ್ ಓವರ್​ನ ಮೊದಲ ಎಸೆತದಲ್ಲೇ ಬಟ್ಲರ್ ಇನ್ನಿಂಗ್ಸ್​ಗೆ ವಿದಾಯ ಹಾಡಿದರು.

‘ಇದಕ್ಕೆ ಟೀಂ ಇಂಡಿಯಾವನ್ನು ಫೇವರೇಟ್ ಎನ್ನುವುದು’; ರೋಹಿತ್ ಪಡೆಯನ್ನು ಹೊಗಳಿದ ಶಾಹಿದ್ ಅಫ್ರಿದಿ

ದಂಗಾದ ಬಟ್ಲರ್

ಇಂಗ್ಲೆಂಡ್ ಇನಿಂಗ್ಸ್​ನ 16ನೇ ಓವರ್ ಬೌಲ್ ಮಾಡಲು ಬಂದ ಕುಲ್ದೀಪ್ ಯಾದವ್ ಮೊದಲ ಎಸೆತದಲ್ಲೇ ಬಟ್ಲರ್ ಅವರನ್ನು ಬಲೆಗೆ ಕೆಡವಿದರು. ಆಫ್ ಸ್ಟಂಪ್‌ನ ಹೊರಗೆ ಬೌಲ್ ಮಾಡಿದ ಈ ಚೆಂಡು ಪಿಚ್‌ಗೆ ಬಡಿದ ನಂತರ ನೇರವಾಗಿ ಸ್ಟಂಪ್‌ಗೆ ಹೋಯಿತು. ಚೆಂಡು ಇಷ್ಟೊಂದು ಟರ್ನ್​ ಆಗಲಿದೆ ಎಂಬುದರ ಅರಿವಿಲ್ಲದ ಬಟ್ಲರ್, ಚೆಂಡು ವಿಕೆಟ್​ಗೆ ಬಡಿದಿದ್ದನ್ನು ನೋಡಿ ಕೊಂಚ ಸಮಯ ಶಾಕ್​ಗೆ ಒಳಗಾದರು. ಆ ಬಳಿಕ ಅಸಹಾಯಕರಾಗಿ ಪೆವಿಲಿಯನ್​ನತ್ತ ನಡೆದರು. ಇದೀಗ ಕುಲ್ದೀಪ್ ಅವರ ಈ ಅದ್ಭುತ ಸ್ಪಿನ್ ಮ್ಯಾಜಿಕ್​ನ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

2 ವಿಕೆಟ್ ಪಡೆದ ಕುಲ್ದೀಪ್

ಇನ್ನು ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ತಮ್ಮ ಖೋಟಾದ 8 ಓವರ್​ ಬೌಲ್ ಮಾಡಿ ಕೇವಲ 24 ರನ್ ನೀಡಿ 2 ವಿಕೆಟ್ ಪಡೆದರು. ಬಟ್ಲರ್ ಹೊರತಾಗಿ ಲಿಯಾಮ್ ಲಿವಿಂಗ್‌ಸ್ಟನ್ (27) ಅವರನ್ನು ಕುಲ್ದೀಪ್ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಈ ಪಂದ್ಯದಲ್ಲಿ 27 ರನ್ ಸಿಡಿಸಿದ ಲಿವಿಂಗ್‌ಸ್ಟನ್ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರೆ, ಭಾರತ 100 ರನ್‌ಗಳಿಂದ ಗೆಲುವು ಸಾಧಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:25 am, Mon, 30 October 23