Breaking: ಭಾರತಕ್ಕೆ ಬಿಗ್ ಶಾಕ್; 2ನೇ ಟೆಸ್ಟ್​ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಕೆಎಲ್ ರಾಹುಲ್..

|

Updated on: Jan 29, 2024 | 5:25 PM

IND vs ENG: ವಿಶಾಖಪಟ್ಟಣದಲ್ಲಿ ನಡೆಯಲ್ಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ.

Breaking: ಭಾರತಕ್ಕೆ ಬಿಗ್ ಶಾಕ್; 2ನೇ ಟೆಸ್ಟ್​ನಿಂದ ಹೊರಬಿದ್ದ ರವೀಂದ್ರ ಜಡೇಜಾ, ಕೆಎಲ್ ರಾಹುಲ್..
ರವೀಂದ್ರ ಜಡೇಜಾ, ಕೆಎಲ್ ರಾಹುಲ್
Follow us on

ಹೈದರಾಬಾದ್​ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 28 ರನ್​ಗಳಿಂದ ಸೋತು ಮುಜುಗರಕ್ಕೆ ಒಳಗಾಗಿದ್ದ ಟೀಂ ಇಂಡಿಯಾಕ್ಕೆ (Team India) ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಉಭಯ ತಂಡಗಳ ನಡುವೆ ವಿಶಾಖಪಟ್ಟಣದಲ್ಲಿ ನಡೆಯಲ್ಲಿರುವ ಎರಡನೇ ಟೆಸ್ಟ್ ಪಂದ್ಯದಿಂದ ತಂಡದ ಇಬ್ಬರು ಸ್ಟಾರ್ ಆಟಗಾರರಾದ ರವೀಂದ್ರ ಜಡೇಜಾ (Ravindra Jadeja) ಹಾಗೂ ಕೆಎಲ್ ರಾಹುಲ್ (KL Rahul) ಹೊರಬಿದ್ದಿದ್ದಾರೆ. ಸ್ವತಃ ಈ ವಿಚಾರವನ್ನು ಬಿಸಿಸಿಐ (BCCI) ತನ್ನ ಅಧಿಕೃತ ಏಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೊಳಗಾಗಿದ್ದ ರವೀಂದ್ರ ಜಡೇಜಾ ಹಾಗೂ ಕೆಎಲ್ ರಾಹುಲ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ವಾಸ್ತವವಾಗಿ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್​ನ ನಾಲ್ಕನೇ ದಿನದಾಟದಂದು ರವೀಂದ್ರ ಜಡೇಜಾ ಇಂಜುರಿಗೆ ಒಳಗಾಗಿದ್ದರು. ಭಾರತದ ಎರಡನೇ ಇನ್ನಿಂಗ್ಸ್ ವೇಳೆ ರನ್​ಗಾಗಿ ಓಡುತ್ತಿದ್ದ ಜಡೇಜಾ, ಇಂಗ್ಲೆಂಡ್ ನಾಯಕ ಬೆನ್​ ಸ್ಟೋಕ್ಸ್​ ಎಸೆದ ಅದ್ಭುತ ಥ್ರೋನಿಂದಾಗಿ ರನೌಟ್​ಗೆ ಬಲಿಯಾಗಿದ್ದರು. ಅಲ್ಲದೆ ಆ ವೇಳೆ ಜಡೇಜಾ ಮಂಡಿರಜ್ಜು ಸಮಸ್ಯೆಗೂ ಒಳಗಾಗಿದ್ದರು. ಇವರೊಂದಿಗೆ ಕೆಎಲ್ ರಾಹುಲ್ ಕೂಡ ತಮ್ಮ ಬಲತೊಡೆಯಲ್ಲಿನ ನೋವಿನಿಂದ ಬಳಲುತ್ತಿದ್ದು, ಈ ಇಬ್ಬರು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಮೂವರಿಗೆ ತಂಡದಲ್ಲಿ ಅವಕಾಶ

ಗಾಯದಿಂದಾಗಿ ತಂಡದಿಂದ ಹೊರಬಿದ್ದಿರುವ ಜಡೇಜಾ ಮತ್ತು ರಾಹುಲ್ ಬದಲಿಯಾಗಿ ಮೂವರು ಆಟಗಾರರನ್ನು ಬಿಸಿಸಿಐ ತಂಡಕ್ಕೆ ಆಯ್ಕೆ ಮಾಡಿದೆ. ಅದರಂತೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್​ಗೆ ಕೊನೆಗೂ ಟೀಂ ಇಂಡಿಯಾದ ಕದ ತೆರೆದಿದೆ. ರಾಹುಲ್ ಬದಲಿಗೆ ಸರ್ಫರಾಜ್ ಖಾನ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಹಾಗೆಯೇ ಆಲ್​ರೌಂಡರ್ ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್​ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರಿಬ್ಬರಲ್ಲದೆ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನವೇ ತಂಡದಿಂದ ಬಿಡುಗಡೆಯಾಗಿದ್ದ ವೇಗಿ ಅವೇಶ್ ಖಾನ್ ಬದಲಿಯಾಗಿ ಸೌರಭ್ ಕುಮಾರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಟೀಂ ಇಂಡಿಯಾಕ್ಕೆ ಭಾರಿ ಹಿನ್ನಡೆ

ಇಂಜುರಿಂದಾಗಿ ತಂಡದಿಂದ ಹೊರಬಿದ್ದಿರುವ ರವೀಂದ್ರ ಜಡೇಜಾ ಹಾಗೂ ಕೆಎಲ್ ರಾಹುಲ್ ಅಲಭ್ಯತೆ ಟೀಂ ಇಂಡಿಯಾಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ಈ ಇಬ್ಬರು ಆಟಗಾರರು ಮೊದಲ ಟೆಸ್ಟ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಕೆಎಲ್ ರಾಹುಲ್ 86 ರನ್​ಗಳ ಇನ್ನಿಂಗ್ಸ್ ಆಡಿದ್ದರೆ, ರವೀಂದ್ರ ಜಡೇಜಾ ಕೂಡ 87 ರನ್ ಸಿಡಿಸಿ ತಂಡದ ಮೊತ್ತವನ್ನು 400 ರ ಗಡಿ ದಾಟಿಸಿದ್ದರು. ಇದಲ್ಲದೆ ಬೌಲಿಂಗ್​ನಲ್ಲೂ ಮ್ಯಾಜಿಕ್ ಮಾಡಿದ್ದ ಜಡೇಜಾ 5 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಈ ಇಬ್ಬರ ಅಲಭ್ಯತೆಯನ್ನು ನಾಯಕ ರೋಹಿತ್ ಶರ್ಮಾ ಹೇಗೆ ಸರಿದೂಗಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Mon, 29 January 24