IND vs ENG: ಇಂಗ್ಲೆಂಡ್ ತಂಡವನ್ನು ಸೇರಿಕೊಂಡ ಮತ್ತೊಬ್ಬ ಯುವ ಸ್ಪಿನ್ನರ್
IND vs ENG: ಇಂಗ್ಲೆಂಡ್‌ನ ಯುವ ಆಟಗಾರ ಶೋಯೆಬ್ ಬಶೀರ್ ಸರಣಿ ಆರಂಭಕ್ಕೂ ಮುನ್ನ ತಂಡದೊಂದಿಗೆ ಭಾರತಕ್ಕೆ ಬಂದಿರಲಿಲ್ಲ. ಅವರು ಪಾಕಿಸ್ತಾನ ಮೂಲದ ಇಂಗ್ಲಂಡ್ ಆಟಗಾರನಾಗಿರುವ ಕಾರಣ ಅವರಿಗೆ ಭಾರತದ ವೀಸಾ ಸಿಕ್ಕಿರಲಿಲ್ಲ. ಆ ಬಂತರ ಬ್ರಿಟನ್ ಸರ್ಕಾರ ಈ ಸಮಸ್ಯೆಯನ್ನು ಭಾರತ ಸರ್ಕಾರದ ಗಮನಕ್ಕೆ ತಂದಿತ್ತು. ಆ ಬಳಿಕ ಬಶೀರ್ಗೆ ಭಾರತದ ವೀಸಾ ಸಿಕ್ಕಿತ್ತು.
ಪ್ರಸ್ತುತ ಇಂಗ್ಲೆಂಡ್ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ (England Tour of India) ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಈಗಾಗಲೇ ಮೊದಲ ಟೆಸ್ಟ್ ಮುಗಿದಿದ್ದು, ಆತಿಥೇಯ ಭಾರತ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದೆ. ಇದರೊಂದಿಗೆ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಹೈದರಾಬಾದ್ನಲ್ಲಿ (Hyderabad) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಫೇವರೆಟ್ ಎನಿಸಿಕೊಂಡಿದ್ದ ಭಾರತ ಕೊನೆಗೆ 28 ರನ್ಗಳಿಂದ ಹೀನಾಯ ಸೋಲು ಅನುಭವಿಸಿತು. ಇತ್ತ ಸೋಲುವ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡ ಇಂಗ್ಲೆಂಡ್ ತಂಡ ಮುಂದಿನ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ (Visakhapatnam) ಆರಂಭವಾಗಲಿದೆ. ಈ ನಡುವೆ ವೀಸಾ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೋಯೆಬ್ ಬಶೀರ್ (Shoaib Bashir), ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಂಡಿದ್ದಾರೆ.
ವೀಸಾ ಸಮಸ್ಯೆ ಪರಿಹಾರ
ಇಂಗ್ಲೆಂಡ್‌ನ ಯುವ ಆಟಗಾರ ಶೋಯೆಬ್ ಬಶೀರ್ ಸರಣಿ ಆರಂಭಕ್ಕೂ ಮುನ್ನ ತಂಡದೊಂದಿಗೆ ಭಾರತಕ್ಕೆ ಬಂದಿರಲಿಲ್ಲ. ಅವರು ಪಾಕಿಸ್ತಾನ ಮೂಲದ ಇಂಗ್ಲಂಡ್ ಆಟಗಾರನಾಗಿರುವ ಕಾರಣ ಅವರಿಗೆ ಭಾರತದ ವೀಸಾ ಸಿಕ್ಕಿರಲಿಲ್ಲ. ಆ ಬಂತರ ಬ್ರಿಟನ್ ಸರ್ಕಾರ ಈ ಸಮಸ್ಯೆಯನ್ನು ಭಾರತ ಸರ್ಕಾರದ ಗಮನಕ್ಕೆ ತಂದಿತ್ತು. ಆ ಬಳಿಕ ಬಶೀರ್ಗೆ ಭಾರತದ ವೀಸಾ ಸಿಕ್ಕಿತ್ತು. ಆದರೆ ಅಷ್ಟರಲ್ಲಾಗಲೇ ಮೊದಲ ಟೆಸ್ಟ್ ಪಂದ್ಯ ಆರಂಭವಾಗುವ ಸನಿಹದಲ್ಲಿತ್ತು. ಹಾಗಾಗಿ ಬಶೀರ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಂದಿರುವ ಬಶೀರ್, ಇಂಗ್ಲೆಂಡ್ ತಂಡವನ್ನು ಸೇರಿಕೊಂಡಿದ್ದಾರೆ.
IND vs ENG: ಕೊನೆಗೂ ಭಾರತದ ವೀಸಾ ಪಡೆದ ಇಂಗ್ಲೆಂಡ್ ಯುವ ಸ್ಪಿನ್ನರ್
ಶೋಯೆಬ್ ಬಶೀರ್ ಯಾರು?
20 ವರ್ಷದ ಕ್ರಿಕೆಟಿಗ ಶೋಯೆಬ್ ಬಶೀರ್ ಕೌಂಟಿ ಕ್ರಿಕೆಟ್ ಕ್ಲಬ್ ಸೋಮರ್‌ಸೆಟ್ ಪರ ಆಡುತ್ತಿದ್ದಾರೆ. ಅವರು ಇದುವರೆಗೆ ಇಂಗ್ಲೆಂಡ್ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಶೋಯೆಬ್ ಬಶೀರ್ ಅವರ ಜನನ ಇಂಗ್ಲೆಂಡ್‌ನಲ್ಲೇ ಆಗಿತ್ತಾದರೂ, ಅವರ ಪೋಷಕರು ಪಾಕಿಸ್ತಾನಿ ಮೂಲದವರು. ಹೀಗಾಗಿ ಅವರಿಗೆ ವೀಸಾ ನೀಡುವಲ್ಲಿ ಕೊಂಚ ವಿಳಂಬವಾಗಿತ್ತು. ಇನ್ನು ಮೊದಲ ಬಾರಿಗೆ ಇಂಗ್ಲೆಂಡ್ ತಂಡದಲ್ಲಿ ಆಯ್ಕೆಯಾಗಿರುವ ಶೋಯೆಬ್ ಬಶೀರ್ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಸರಣಿಯ ಮುಂದಿನ ಪಂದ್ಯದಲ್ಲಿ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆಗಳಿವೆ. ಸರಣಿಯ ಎರಡನೇ ಪಂದ್ಯ ಫೆಬ್ರವರಿ 2 ರಿಂದ 6 ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳಾಪಟ್ಟಿ
- ಮೊದಲ ಟೆಸ್ಟ್: ಇಂಗ್ಲೆಂಡ್ಗೆ 28 ರನ್ ಜಯ
- ಎರಡನೇ ಟೆಸ್ಟ್: 2-6 ಫೆಬ್ರವರಿ, ವಿಶಾಖಪಟ್ಟಣ
- ಮೂರನೇ ಟೆಸ್ಟ್: 15-19 ಫೆಬ್ರವರಿ, ರಾಜ್ಕೋಟ್
- ನಾಲ್ಕನೇ ಟೆಸ್ಟ್: 23-27 ಫೆಬ್ರವರಿ, ರಾಂಚಿ
- 5 ನೇ ಟೆಸ್ಟ್: 7-11 ಮಾರ್ಚ್, ಧರ್ಮಶಾಲಾ
ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ:
ಬೆನ್ ಸ್ಟೋಕ್ಸ್ (ನಾಯಕ), ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ರೆಹಾನ್ ಅಹ್ಮದ್, ಡೇನ್ ಲಾರೆನ್ಸ್, ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್), ಶೋಯೆಬ್ ಬಶೀರ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಜೇಮ್ಸ್ ಆಂಡರ್ಸನ್, ಗಸ್ ಅಟ್ಕಿನ್ಸನ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲಿ ಪೋಪ್, ಜೋ ರೂಟ್, ಮಾರ್ಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ