IND vs ENG: ರಣಜಿಯಲ್ಲಿ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರಗೆ ತೆರೆಯದ ಟೀಂ ಇಂಡಿಯಾ ಕದ!

|

Updated on: Jan 13, 2024 | 3:42 PM

IND vs ENG: ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಪೂಜಾರ ದೇಶಿ ಕ್ರಿಕೆಟ್​ಗೆ ರಣಜಿ ಟ್ರೋಫಿಯತ್ತ ಮುಖಮಾಡಿದ್ದರು. ಆಡಿದ ಮೊದಲ ಪಂದ್ಯದಲ್ಲೇ ಅದ್ಭುತ ಇನ್ನಿಂಗ್ಸ್ ಆಡಿ ಟೀಕಾಕಾರರಿಗೆ ಉತ್ತರ ನೀಡಿದ್ದರು. ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಭಾರಿಸಿದ್ದ ಪೂಜಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾಗುತ್ತಾರೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದರು.

IND vs ENG: ರಣಜಿಯಲ್ಲಿ ದ್ವಿಶತಕ ಸಿಡಿಸಿದ ಚೇತೇಶ್ವರ ಪೂಜಾರಗೆ ತೆರೆಯದ ಟೀಂ ಇಂಡಿಯಾ ಕದ!
ಚೇತೇಶ್ವರ ಪೂಜಾರ
Follow us on

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿನ್ನೆ ಭಾರತ ತಂಡವನ್ನು ಪ್ರಕಟಿಸಿತು. ಜನವರಿ 25 ರಿಂದ ಆರಂಭವಾಗಲಿರುವ ಈ ಟೆಸ್ಟ್ ಸರಣಿಯಿಂದ ಹಲವು ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಇದರಲ್ಲಿ ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ಚೇತೇಶ್ವರ ಪೂಜಾರ (Cheteshwar Pujara) ಮತ್ತು ಅಜಿಂಕ್ಯ ರಹಾನೆ ಅವರಂತಹ ಆಟಗಾರರು ಸೇರಿದ್ದಾರೆ. ಈ ಪೈಕಿ ಅತ್ಯಂತ ಅಚ್ಚರಿಯ ಹೆಸರು ಚೇತೇಶ್ವರ ಪೂಜಾರ ಅವರದ್ದು. ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಪೂಜಾರರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹೊರಗಿಡಲಾಗಿತ್ತು. ಅದರ ನಂತರ ದೇಶೀಯ ಕ್ರಿಕೆಟ್‌ಗೆ ಮರಳಿದ್ದ ಚೇತೇಶ್ವರ ಪೂಜಾರ ದ್ವಿಶತಕದ ಇನ್ನಿಂಗ್ಸ್ ಆಡುವ ಮೂಲಕ ಮತ್ತೆ ಟೀಂ ಇಂಡಿಯಾಕ್ಕೆ ಮರಳುವ ಸೂಚನೆ ನೀಡಿದ್ದರು. ಆದರೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಪೂಜಾರರನ್ನು ಕೈಬಿಡಲಾಗಿದೆ.

ರಣಜಿಯಲ್ಲಿ ದ್ವಿಶತಕ ಸಿಡಿಸಿದ ಪೂಜಾರ

ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಪೂಜಾರ ದೇಶಿ ಕ್ರಿಕೆಟ್​ಗೆ ರಣಜಿ ಟ್ರೋಫಿಯತ್ತ ಮುಖಮಾಡಿದ್ದರು. ಆಡಿದ ಮೊದಲ ಪಂದ್ಯದಲ್ಲೇ ಅದ್ಭುತ ಇನ್ನಿಂಗ್ಸ್ ಆಡಿ ಟೀಕಾಕಾರರಿಗೆ ಉತ್ತರ ನೀಡಿದ್ದರು. ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಭಾರಿಸಿದ್ದ ಪೂಜಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾಗುತ್ತಾರೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದರು. ಇದರ ಹೊರತಾಗಿಯೂ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಆಯ್ಕೆಗಾರರು ಅವರನ್ನು ಕಡೆಗಣಿಸಿದ್ದಾರೆ.

Breaking: ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ..!

ಈ ಬಳಿಕವೂ ಪೂಜಾರ ಎಂದಾದರೂ ಟೀಂ ಇಂಡಿಯಾಗೆ ಮರಳುತ್ತಾರಾ ಅಥವಾ ಪೂಜಾರ ಅವರ ಅಂತರಾಷ್ಟ್ರೀಯ ಟೆಸ್ಟ್ ವೃತ್ತಿಜೀವನವು ಕೊನೆಗೊಳ್ಳಲಿದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪೂಜಾರ ಅವರ ಅಂಕಿಅಂಶಗಳು ಉತ್ತಮವಾಗಿವೆ. ಅಲ್ಲದೆ ಇಂಗ್ಲೆಂಡ್‌ನಂತಹ ದೊಡ್ಡ ತಂಡದ ವಿರುದ್ಧ ಆಡಿದ ಅನುಭವವನ್ನು ಪೂಜಾರ ಹೊಂದಿದ್ದಾರೆ. ಇದರ ಹೊರತಾಗಿಯೂ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಪೂಜಾರ ಟೆಸ್ಟ್ ವೃತ್ತಿಜೀವನ

ಚೇತೇಶ್ವರ್ ಪೂಜಾರ ಟೀಂ ಇಂಡಿಯಾ ಪರ ಬಹಳ ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ ಟೀಂ ಇಂಡಿಯಾ ಪರ ಅವರ ಪ್ರದರ್ಶನ ಕಳೆದ ಕೆಲವು ದಿನಗಳಿಂದ ವಿಶೇಷವೇನೂ ಆಗಿಲ್ಲ. ಪೂಜಾರ ಇಲ್ಲಿಯವರೆಗೆ ಟೀಂ ಇಂಡಿಯಾ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 7195 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಪೂಜಾರ 19 ಶತಕ ಹಾಗೂ 35 ಅರ್ಧ ಶತಕಗಳನ್ನೂ ಸಹ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪೂಜಾರ ಅವರ ಅತ್ಯುತ್ತಮ ಸ್ಕೋರ್ 206 ರನ್ ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ