IND vs NZ: ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಖಚಿತ: ಯಾರಿಗೆ ಸಿಗಲಿದೆ ಚಾನ್ಸ್?

|

Updated on: Oct 23, 2024 | 12:39 PM

India vs New Zealand, 2nd Test: ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ನ್ಯೂಝಿಲೆಂಡ್ ತಂಡ ಗೆದ್ದರೆ ಸರಣಿ ಅವರ ವಶವಾಗಲಿದೆ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು ಸಮಬಲಗೊಳಿಸಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.

IND vs NZ: ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಖಚಿತ: ಯಾರಿಗೆ ಸಿಗಲಿದೆ ಚಾನ್ಸ್?
Team India
Follow us on

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ನಾಳೆಯಿಂದ (ಅ.24) ಶುರುವಾಗಲಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಭಾರತ ತಂಡವು ಒಂದು ಬದಲಾವಣೆ ಮಾಡುವುದು ಖಚಿತ. ಏಕೆಂದರೆ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಶುಭ್​ಮನ್ ಗಿಲ್ ಇದೀಗ ಸಂಪೂರ್ಣ ಫಿಟ್​ ಆಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಕತ್ತು ನೋವು ಕಾಣಿಸಿಕೊಂಡಿದ್ದರಿಂದ ಗಿಲ್ ಕಣಕ್ಕಿಳಿದಿರಲಿಲ್ಲ. ಇದೀಗ ಪುಣೆಯಲ್ಲಿ ಅಭ್ಯಾಸವನ್ನು ಶುರು ಮಾಡಿದ್ದಾರೆ.

ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗಿಲ್ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು. ಆದರೆ ಇಲ್ಲಿ ಗಿಲ್ ಅವರನ್ನು ಆಯ್ಕೆ ಮಾಡಬೇಕಿದ್ದರೆ ಒಬ್ಬರನ್ನು ತಂಡದಿಂದ ಕೈ ಬಿಡಬೇಕಾಗುತ್ತದೆ. ಏಕೆಂದರೆ ಶುಭ್​ಮನ್ ಸ್ಥಾನದಲ್ಲಿ ಮೊದಲ ಪಂದ್ಯವಾಡಿದ್ದ ಸರ್ಫರಾಝ್ ಖಾನ್ 150 ರನ್​ಗಳನ್ನು ಬಾರಿಸಿ ಮಿಂಚಿದ್ದಾರೆ.

ಈ ಆಕರ್ಷಕ ಶತಕದೊಂದಿಗೆ ಸರ್ಫರಾಝ್ ಖಾನ್ ತಮ್ಮ ಫಾರ್ಮ್ ಅನ್ನು ತೆರೆದಿಟ್ಟಿದ್ದಾರೆ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಿಂದ ಅವರನ್ನು ಕೈ ಬಿಡುವ ಸಾಧ್ಯತೆಯಿಲ್ಲ. ಇದಾಗ್ಯೂ ಶುಭ್​​ಮನ್ ಗಿಲ್​ಗೆ ಸ್ಥಾನ ನೀಡಬೇಕಿದ್ದರೆ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಡಬೇಕಾಗುತ್ತದೆ.

ಏಕೆಂದರೆ ಕಳೆದ ಪಂದ್ಯದಲ್ಲಿ ರಾಹುಲ್ ಕೇವಲ 12 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಅಷ್ಟೇ ಅಲ್ಲದೆ ಕಳೆದ 8 ಇನಿಂಗ್ಸ್​ಗಳಲ್ಲಿ ಕೇವಲ 33.42 ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಅವರನ್ನು ಕೈ ಬಿಡುವುದು ಬಹುತೇಕ ಖಚಿತ ಎನ್ನಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • 1. ರೋಹಿತ್ ಶರ್ಮಾ (ನಾಯಕ)
  • 2. ಯಶಸ್ವಿ ಜೈಸ್ವಾಲ್
  • 3. ಶುಭ್​ಮನ್ ಗಿಲ್
  • 4. ವಿರಾಟ್ ಕೊಹ್ಲಿ
  • 5. ರಿಷಬ್ ಪಂತ್ (ವಿಕೆಟ್ ಕೀಪರ್​)
  • 6. ಸರ್ಫರಾಝ್ ಖಾನ್
  • 7. ರವೀಂದ್ರ ಜಡೇಜಾ
  • 8. ರವಿಚಂದ್ರನ್ ಅಶ್ವಿನ್
  • 9. ಕುಲ್ದೀಪ್ ಯಾದವ್
  • 10. ಮೊಹಮ್ಮದ್ ಸಿರಾಜ್
  • 11. ಜಸ್​ಪ್ರೀತ್ ಬುಮ್ರಾ

ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೇಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.