ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಅಂತಿಮ ಘಟ್ಟದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 259 ರನ್ ಕಲೆಹಾಕಿದರೆ, ಭಾರತ ತಂಡವು 156 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು 103 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ 255 ರನ್ಗಳಿಗೆ ಆಲೌಟ್ ಆಗಿದೆ. ಇದೀಗ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಭಾರತ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 359 ರನ್ಗಳ ಬೃಹತ್ ಗುರಿ ಪಡೆದುಕೊಂಡಿದೆ.
ಈ ಗುರಿ ಬೆನ್ನತ್ತಲು ಟೀಮ್ ಇಂಡಿಯಾಗೆ ಎರಡುವರೆ ದಿನದಾಟಗಳಿದ್ದು, ಇದರೊಳಗೆ 359 ರನ್ಗಳಿಸಿ ಜಯ ಸಾಧಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಈವರೆಗೆ ಟೆಸ್ಟ್ನಲ್ಲಿ 300 ಕ್ಕಿಂತ ಹೆಚ್ಚಿನ ರನ್ಗಳನ್ನು ಚೇಸ್ ಮಾಡಿ ಗೆದ್ದಿಲ್ಲ. ಅಷ್ಟೇ ಅಲ್ಲದೆ ಭಾರತದಲ್ಲಿ ಟೀಮ್ ಇಂಡಿಯಾ 300+ ರನ್ಗಳನ್ನು ಚೇಸ್ ಮಾಡಿ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಹೀಗಾಗಿಯೇ ಕಿವೀಸ್ ವಿರುದ್ಧ ಭಾರತ ತಂಡ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗುವುದು ದಿಟ.
ಇದನ್ನೂ ಓದಿ: ಝಿಂಬಾಬ್ವೆ ಅಬ್ಬರಕ್ಕೆ ಟೀಮ್ ಇಂಡಿಯಾದ ವಿಶ್ವ ದಾಖಲೆ ಉಡೀಸ್
ಭಾರತದಲ್ಲಿನ ಯಶಸ್ವಿ ಟೆಸ್ಟ್ ರನ್ ಚೇಸ್ | |||||
ತಂಡ | ಗೆಲುವಿನ ಗುರಿ | ವಿಜಯದ ಅಂತರ | ಎದುರಾಳಿ | ಸ್ಥಳ | ವರ್ಷ |
ಭಾರತ | 387 | 6 ವಿಕೆಟ್ | ಇಂಗ್ಲೆಂಡ್ | ಚೆನ್ನೈ | 2008 |
ವೆಸ್ಟ್ ಇಂಡೀಸ್ | 276 | 5 ವಿಕೆಟ್ | ಭಾರತ | ದೆಹಲಿ | 1987 |
ಭಾರತ | 276 | 5 ವಿಕೆಟ್ | ವೆಸ್ಟ್ ಇಂಡೀಸ್ | ದೆಹಲಿ | 2011 |
ಭಾರತ | 261 | 5 ವಿಕೆಟ್ | ನ್ಯೂಝಿಲೆಂಡ್ | ಬೆಂಗಳೂರು | 2012 |
ಭಾರತ | 254 | 2 ವಿಕೆಟ್ | ಆಸ್ಟ್ರೇಲಿಯಾ | ಬ್ರಬೋರ್ನ್ | 1964 |
ಭಾರತ | 216 | 1 ವಿಕೆಟ್ | ಆಸ್ಟ್ರೇಲಿಯಾ | ಮೊಹಾಲಿ | 2010 |
ಇಂಗ್ಲೆಂಡ್ | 207 | 6 ವಿಕೆಟ್ | ಭಾರತ | ದೆಹಲಿ | 1972 |
ಭಾರತ | 207 | 7 ವಿಕೆಟ್ | ಆಸ್ಟ್ರೇಲಿಯಾ | ಬೆಂಗಳೂರು | 2010 |
ಭಾರತ | 203 | 6 ವಿಕೆಟ್ | ಪಾಕಿಸ್ತಾನ್ | ದೆಹಲಿ | 2007 |
ಆಸ್ಟ್ರೇಲಿಯಾ | 194 | 8 ವಿಕೆಟ್ | ಭಾರತ | ಬೆಂಗಳೂರು | 1998 |
Published On - 11:11 am, Sat, 26 October 24