IND vs NZ: ‘ಟಾಸ್ ಗೆದ್ದಿದ್ದರೆ ನಾವು ಕೂಡ..’; ಕಿವೀಸ್ ಗೆಲುವಿಗೆ ವರವಾಯ್ತು ಟಾಸ್ ಸೋಲು

|

Updated on: Oct 20, 2024 | 3:51 PM

IND vs NZ: ಬೆಂಗಳೂರು ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ಮಾತನಾಡಿದ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲೇಥಮ್, ಒಂದು ವೇಳೆ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದರೆ, ನಾವು ಕೂಡ ಮೊದಲು ಬ್ಯಾಟಿಂಗ್ ಮಾಡುತ್ತಿದ್ದವು. ಕೊನೆಯಲ್ಲಿ ಟಾಸ್ ಸೋತಿದ್ದು ಒಳ್ಳೆಯದಾಯಿತು ಎಂದಿದ್ದಾರೆ.

IND vs NZ: ‘ಟಾಸ್ ಗೆದ್ದಿದ್ದರೆ ನಾವು ಕೂಡ..’; ಕಿವೀಸ್ ಗೆಲುವಿಗೆ ವರವಾಯ್ತು ಟಾಸ್ ಸೋಲು
ಟಾಮ್ ಲೇಥಮ್
Follow us on

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಕಿವೀಸ್ 8 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಬರೋಬ್ಬರಿ 36 ವರ್ಷಗಳ ನಂತರ ಕಿವೀಸ್ ಪಡೆ ಟೀಂ ಇಂಡಿಯಾವನ್ನು ತವರಿನಲ್ಲಿ ಮಣಿಸುವ ಮೂಲಕ ಭಾರತದ ನೆಲದಲ್ಲಿ ಮೂರನೇ ಟೆಸ್ಟ್ ಪಂದ್ಯ ಗೆದ್ದ ದಾಖಲೆ ಬರೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತವನ್ನು 46 ರನ್‌ಗಳಿಗೆ ಆಲೌಟ್ ಮಾಡಿದ ಕಿವೀಸ್ ಪಡೆ, ಮೊದಲ ಇನ್ನಿಂಗ್ಸ್‌ನಲ್ಲಿ 402 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ 462 ರನ್ ಕಲೆಹಾಕಿ ಪ್ರವಾಸಿ ತಂಡಕ್ಕೆ 107 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಕಿವೀಸ್ ತಂಡ ಸುಲಭವಾಗಿ ಸಾಧಿಸಿತು. ಈ ಐತಿಹಾಸಿಕ ವಿಜಯದ ನಂತರ ಮಾತನಾಡಿದ ಕಿವೀಸ್ ನಾಯಕ ಟಾಮ್ ಲೇಥಮ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಟಾಸ್ ಗೆದ್ದಿದ್ದರೆ ನಾವು ಸಹ

ವಾಸ್ತವವಾಗಿ ಬೆಂಗಳೂರು ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸೋಲಿನ ನಂತರ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಅದರಲ್ಲಿ ಪ್ರಮುಖವಾಗಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿರ್ಧಾರ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂಬುದನ್ನು ಸ್ವತಃ ರೋಹಿತ್ ಅವರೇ ಒಪ್ಪಿಕೊಂಡಿದ್ದಾರೆ. ಇದು ಒಂದೆಡೆಯಾದರೆ, ಪಂದ್ಯ ಮುಗಿದ ಬಳಿಕ ಮಾತನಾಡಿದ ಕಿವೀಸ್ ನಾಯಕ ಟಾಮ್ ಲೇಥಮ್ ಕೂಡ, ಟಾಸ್ ಗೆದ್ದಿದ್ದರೆ ನಾವು ಸಹ ಮೊದಲು ಬ್ಯಾಟಿಂಗ್ ಮಾಡುತ್ತಿದ್ದೇವು ಎಂದಿದ್ದಾರೆ.

ಕಿವೀಸ್ ಗೆಲುವಿಗೆ ವರವಾಯ್ತು ಟಾಸ್ ಸೋಲು

ಬೆಂಗಳೂರು ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ಮಾತನಾಡಿದ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲೇಥಮ್, ಒಂದು ವೇಳೆ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದರೆ, ನಾವು ಕೂಡ ಮೊದಲು ಬ್ಯಾಟಿಂಗ್ ಮಾಡುತ್ತಿದ್ದವು. ಕೊನೆಯಲ್ಲಿ ಟಾಸ್ ಸೋತಿದ್ದು ಒಳ್ಳೆಯದಾಯಿತು ಎಂದಿದ್ದಾರೆ. ಇದರರ್ಥ ಟಾಸ್ ಫಲಿತಾಂಶ ನ್ಯೂಜಿಲೆಂಡ್ ಪರವಾಗಿದ್ದರೆ, ಇಂದಿನ ಪಂದ್ಯದ ಫಲಿತಾಂಶವೇ ಬೇರೆಯಾಗಬಹುದಿತ್ತು. ಆದರೆ ಈಗ ಎಲ್ಲವೂ ಕಿವೀಸ್ ತಂಡದ ಪರವಾಗಿದೆ.

8 ವಿಕೆಟ್‌ಗಳಿಂದ ಗೆದ್ದ ಕಿವೀಸ್

ಬೆಂಗಳೂರು ಟೆಸ್ಟ್‌ನಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಂತರ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ 5 ಬ್ಯಾಟ್ಸ್‌ಮನ್‌ಗಳಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ 356 ರನ್‌ಗಳ ಮುನ್ನಡೆ ಸಾಧಿಸಿತು.

ಅದರ ನಂತರ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಖಂಡಿತವಾಗಿಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 106 ರನ್‌ಗಳ ಮುನ್ನಡೆ ಸಾಧಿಸಿತು. ಬಳಿಕ ಪಂದ್ಯದ ಕೊನೆಯ ದಿನವಾದ ಇಂದು 107 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Sun, 20 October 24