
ಏಷ್ಯಾಕಪ್ 2022ರ (Asia Cup 2022) ಸೂಪರ್ 4 ಹಂತದಲ್ಲಿ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ (India vs Pakistan) ಸೋಲು ಕಂಡಿದೆ. ಕೊನೆಯ ಓವರ್ ವರೆಗೂ ನಡೆದ ರೋಚಕ ಕಾದಾಟದಲ್ಲಿ ಪಾಕಿಸ್ತಾನ 5 ವಿಕೆಟ್ಗಳ ಜಯ ಕಂಡಿತು. ಮೊಹಮ್ಮದ್ ರಿಜ್ವಾನ್ ಅವರ 71 ರನ್ ಹಾಗೂ ಮೊಹಮ್ಮದ್ ನವಾಜ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಾಕ್ ಲೀಗ್ ಹಂತದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಭಾರತದ ಬೌಲರ್ಗಳು ಈ ಪಂದ್ಯದಲ್ಲಿ ಬಲು ದುಬಾರಿಯಾದರು. ಟೀಮ್ ಇಂಡಿಯಾ ಬ್ಯಾಟಿಂಗ್ನಲ್ಲೂ ವಿರಾಟ್ ಕೊಹ್ಲಿ (Virat Kohli) ಬಿಟ್ಟರೆ ಮತ್ಯಾರು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಈ ಸೋಲಿನ ಮೂಲಕ ಭಾರತ ಏಷ್ಯಾಕಪ್ ಫೈನಲ್ ತಲುಪಬೇಕಾದರೆ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ಭಾರತ ಸ್ಫೋಟಕ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ನಂತರ ವಿರಾಟ್ ಕೊಹ್ಲಿ ಬಿಟ್ಟು ಬೇರೆ ಯಾವ ಬ್ಯಾಟರ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇದೀಗ ಭರ್ಜರಿ ಫಾರ್ಮ್ಗೆ ಮರಳಿರುವ ಕೊಹ್ಲಿ 44 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸರ್ ಬಾರಿಸಿ 60 ರನ್ ಚಚ್ಚಿದರು. ಕೊನೆಯ ಓವರ್ನಲ್ಲಿ ವಿರಾಟ್ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಇದರ ಜೊತೆಗೆ ಕೆಲ ದಾಖಲೆಗಳನ್ನು ಕೂಡ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಕೊಹ್ಲಿ 18ನೇ ಓವರ್ನಲ್ಲಿ ತಮ್ಮ ಫೆವರಿಟ್ ಶಾಟ್ನಲ್ಲಿ ಸಿಕ್ಸ್ ಸಿಡಿಸುವ ಮೂಲಕ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊಹ್ಲಿ 50 ರನ್ ಪೂರೈಸುತ್ತಿದ್ದಂತೆ ದುಬೈ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅತ್ತ ಟೀಮ್ ಇಂಡಿಯಾ ಆಟಗಾರರು ಕೂಡ ಡಗೌಟ್ನಲ್ಲಿ ಎದ್ದು ನಿಂತು ಖುಷಿ ಪಟ್ಟಿದ್ದಾರೆ. ಅದರಲ್ಲೂ ಸ್ಟೇಡಿಯಂನಲ್ಲಿದ್ದ ಕೆಲವು ಅಭಿಮಾನಿಗಳು ಕೊಹ್ಲಿಯ ಆಕರ್ಷಕ ಆಟ ಕಂಡು ಶಿರಬಾಗಿ ಕೈ ಮುಂದೆ ಚಾಚಿ ಸಲಾಂ ಎಂದಿದ್ದಾರೆ.
Virat Kohli has arrived with a bang ?
RETURN OF THE KING ?
pic.twitter.com/TRvztSMO28— A N A S ? (@thisisanas_) September 4, 2022
ಕೊಹ್ಲಿ ಕೂಡ ಅರ್ಧಶತಕ ಬಾರಿಸುತ್ತಿದ್ದಂತೆ ಬ್ಯಾಟ್ ಎತ್ತಿ ತಾವು ಧರಿಸಿದ್ದ ಟೀಮ್ ಇಂಡಿಯಾ ಜೆರ್ಸಿಯ ಬಾಡ್ಜ್ಗೆ ಮುತ್ತಿಟ್ಟು ವಿಶೇಷವಾಗಿ ಸಂಭ್ರಮಿಸಿದರು. ಅತ್ತ ನಾನ್ ಸ್ಟ್ರೈಕರ್ನಲ್ಲಿದ್ದ ದೀಪಕ್ ಹೂಡ ಅವರು ಕೊಹ್ಲಿ ಬಳಿ ಓಡಿ ಬಂದು ಶುಭಾಶಯ ತಿಳಿಸಿದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿಯ ಮನಮೋಹಕ ಆಟ ಕಂಡು ಅಭಿಮಾನಿಗಳಂತು ಖಷಿ ಪಟ್ಟಿದ್ದಾರೆ.
ಈ ಅರ್ಧಶತಕದ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಕೂಡ ಮಾಡಿದ್ದು, ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 50+ ರನ್ ಬಾರಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ. ಈ ಹಿಂದೆ ಈ ವಿಶ್ವ ದಾಖಲೆಯು ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಹಿಟ್ಮ್ಯಾನ್ ಟಿ20 ಕ್ರಿಕೆಟ್ನಲ್ಲಿ 31 ಬಾರಿ 50 ಪ್ಲಸ್ ರನ್ ಕಲೆಹಾಕಿದ್ದರು. ಈ ವೇಳೆ 27 ಅರ್ಧಶತಕಗಳನ್ನು, 4 ಭರ್ಜರಿ ಶತಕಗಳನ್ನು ಸಿಡಿಸಿದ್ದರು. ಇದೀಗ ಕೇವಲ ಅರ್ಧಶತಕಗಳ ಮೂಲಕವೇ ಕೊಹ್ಲಿ ರೋಹಿತ್ ಶರ್ಮಾ ಅವರ ಈ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 32 ಅರ್ಧಶತಕಗಳನ್ನು ಬಾರಿಸಿದ್ದಾರೆ.
Published On - 8:00 am, Mon, 5 September 22