IND vs SA: ಜೋಹಾನ್ಸ್‌ಬರ್ಗ್​ನಲ್ಲಿ ಟೀಂ ಇಂಡಿಯಾ ಸೋಲಿಗೆ ಮೂರು ಕಾರಣಗಳನ್ನು ವಿವರಿಸಿದ ಗಂಭೀರ್

| Updated By: ಪೃಥ್ವಿಶಂಕರ

Updated on: Jan 07, 2022 | 6:50 PM

IND vs SA: ಮೊಹಮ್ಮದ್ ಸಿರಾಜ್ 100 ಪ್ರತಿಶತ ಫಿಟ್ ಆಗಿದ್ದರೆ ನಾಯಕ ತನ್ನ ಇಬ್ಬರು ಪ್ರಮುಖ ವೇಗಿಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಒಮ್ಮೆ ಚೆಂಡು ಒದ್ದೆಯಾದರೆ, ಅಶ್ವಿನ್‌ಗೆ ಅದು ಸಹಾಯ ಮಾಡುವುದಿಲ್ಲ ಎಂದು ನಿಮಗೆ ತಿಳಿದಿದೆ. ಆದ್ದರಿಂದ ನೀವು ಕೇವಲ ಮೂರು ವೇಗಿಗಳು ಉಳಿದ ಎಂಟು ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು.

IND vs SA: ಜೋಹಾನ್ಸ್‌ಬರ್ಗ್​ನಲ್ಲಿ ಟೀಂ ಇಂಡಿಯಾ ಸೋಲಿಗೆ ಮೂರು ಕಾರಣಗಳನ್ನು ವಿವರಿಸಿದ ಗಂಭೀರ್
ಗೌತಮ್ ಗಂಭೀರ್, ಟೀಂ ಇಂಡಿಯಾ
Follow us on

ಜೋಹಾನ್ಸ್​ಬರ್ಗ್ ಟೆಸ್ಟ್​ನಲ್ಲೇ ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡ ಹೊಡೆತ ನೀಡಿದೆ. ನಾಯಕ ಡೀನ್ ಎಲ್ಗರ್ ಅವರ ಅಜೇಯ 96 ಮತ್ತು ರೆಸಿ ವ್ಯಾನ್ ಡೆರ್ ಡಸ್ಸೆ ಅವರ ಅಮೋಘ 40 ರನ್‌ಗಳ ನೆರವಿನಿಂದ ಆತಿಥೇಯರು 7 ವಿಕೆಟ್‌ಗಳ ಜಯ ಸಾಧಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಳು ವಿಕೆಟ್‌ಗಳ ಸೋಲಿಗೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಒಂದಲ್ಲ ಮೂರು ಕಾರಣಗಳನ್ನು ಎತ್ತಿ ತೋರಿಸಿದ್ದಾರೆ.

ದಕ್ಷಿಣ ಆಫ್ರಿಕಾವನ್ನು ಸೆಂಚೂರಿಯನ್ ಕೋಟೆಯಲ್ಲಿ ಸರಣಿಯ ಆರಂಭಿಕ ಪಂದ್ಯದಲ್ಲಿ 113 ರನ್‌ಗಳಿಂದ ಸೋಲಿಸಿದ ಭಾರತ ಎರಡನೇ ಟೆಸ್ಟ್ ಸೋಲುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಸರಣಿಯ ಗೆಲುವಿನಿಂದ ದೂರ ಉಳಿಯಿತು. ಇದಕ್ಕೆ ವಿರಾಟ್ ಕೊಹ್ಲಿಯ ಅಲಭ್ಯತೆ ಹಾಗೂ ಮೊಹಮ್ಮದ್ ಸಿರಾಜ್ ಇಂಜುರಿ ಪ್ರಮುಖ ಕಾರಣವಾಗಿದೆ.

ಸಿರಾಜ್ ಇಂಜುರಿ
ಬುಧವಾರದ ಸೋಲಿನ ನಂತರ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗಂಭೀರ್, ಸಿರಾಜ್ ಫಿಟ್ ಆಗಿದ್ದರೆ ಅಥವಾ ಅವರ ಗಾಯದಿಂದ ಚೇತರಿಸಿಕೊಂಡಿದ್ದರೆ, ಪೇಸ್ ಯೂನಿಟ್ ಒಂದು ಗುಂಪಿನಂತೆ ಉತ್ತಮ ಪ್ರದರ್ಶನ ನೀಡುತ್ತಿತ್ತು ಎಂದು ಹೇಳಿದ್ದಾರೆ. ಭಾರತವು ನಾಲ್ಕನೇ ಸೀಮರ್ ಅನ್ನು ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ 100 ಪ್ರತಿಶತ ಫಿಟ್ ಆಗಿದ್ದರೆ ನಾಯಕ ತನ್ನ ಇಬ್ಬರು ಪ್ರಮುಖ ವೇಗಿಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಒಮ್ಮೆ ಚೆಂಡು ಒದ್ದೆಯಾದರೆ, ಅಶ್ವಿನ್‌ಗೆ ಅದು ಸಹಾಯ ಮಾಡುವುದಿಲ್ಲ ಎಂದು ನಿಮಗೆ ತಿಳಿದಿದೆ. ಆದ್ದರಿಂದ ನೀವು ಕೇವಲ ಮೂರು ವೇಗಿಗಳು ಉಳಿದ ಎಂಟು ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು. ಹಾಗಾಗಿ ಸಿರಾಜ್ ಫಿಟ್ ಆಗಿದ್ದರೆ ನಾವು ಅವರ ಬೌಲಿಂಗ್​ನಿಂದ ಉತ್ತಮ ಪ್ರದರ್ಶನ ಕಾಣುತ್ತಿದ್ದೆವು ಎಂದು ಗಂಭೀರ್ ವಿವರಿಸಿದರು.

ಆಫ್ರಿಕಾದ ವೇಗಿಗಳಿಗೆ ಎತ್ತರದ ಅನುಕೂಲ
ದಕ್ಷಿಣ ಆಫ್ರಿಕಾದ ವೇಗಿಗಳಿಗೆ ಎತ್ತರದ ಅನುಕೂಲವಿರುವುದರಿಂದ, ಭಾರತದ ದಾಳಿಗಿಂತ ಸ್ವಾಭಾವಿಕವಾಗಿ ಬರುವ ಕಡಿಮೆ ಎಸೆತಗಳ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಪರೀಕ್ಷಿಸಲು ಅವರು ಹೆಚ್ಚು ಸಮರ್ಥರಾಗಿದ್ದಾರೆ. ಎತ್ತರವಿರುವ ಕಾರಣ ಅವರು ಬೌಲಿಂಗ್ ಪೂರ್ಣ ಎಸೆತಗಳನ್ನು ಹೆಚ್ಚು ನೈಸರ್ಗಿಕವಾಗಿ ಹಾಕುತ್ತಾರೆ. ನೀವು ವೇಗದ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳನ್ನು ಶಾರ್ಟ್ ಬಾಲ್‌ಗಳಿಂದ ಪರೀಕ್ಷಿಸಬೇಕೆಂದು ನೀವು ಬಯಸುತ್ತೀರಿ. ಆದರೆ ದಕ್ಷಿಣ ಆಫ್ರಿಕಾದ ವೇಗಿಗಳು ಬೌಲಿಂಗ್ ಮಾಡುವಾಗ, ಅವರು ಹೆಚ್ಚು ಎತ್ತರವನ್ನು ಹೊಂದಿರುವುದರಿಂದ ಚೆಂಡಿನ ಮೇಲೆ ಸಾಕಷ್ಟು ಪ್ರೆಶರ್ ಹಾಕುವ ಅಗತ್ಯವಿರಲಿಲ್ಲ. ಟೀಂ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಅವರಿಂದ ನೀವು ಅದನ್ನು ನಿರೀಕ್ಷಿಸಬಹುದು, ಆದರೆ ಈ ರೀತಿಯ ಎಸೆತಗಳು ಶಮಿಗೆ ಸ್ವಾಭಾವಿಕವಾಗಿ ಬರುವುದಿಲ್ಲ. ಆದ್ದರಿಂದ ಅವರ ಹೆಚ್ಚಿನ ಶಾರ್ಟ್-ಪಿಚ್ ಎಸೆತಗಳು ಕೀಪರ್‌ ತಲೆಯ ಮೇಲೆ ಹೋದವು. ಇದರಿಂದ ಹೆಚ್ಚು ಎಕ್ಸ್ರ್ಟಾ ರನ್​ಗಳು ಹೋದವು ಎಂದು ವಿವರಿಸಿದರು.

ನೀವು ಮಾರ್ಕೊ ಯಾನ್ಸೆನ್ ಅಥವಾ ಕಗಿಸೊ ರಬಾಡ ಅವರನ್ನು ನೋಡಿದರೆ, ಅವರು ಹೆಚ್ಚು ಬ್ಯಾಕ್ ಆಫ್ ಲೆಂಗ್ತ್ ಎಸೆತಗಳನ್ನು ಹಾಕುತ್ತಾರೆ. ಆದರಲ್ಲಿ ನಮ್ಮ ಬೌಲಿಂಗ್​ ವಿಭಾಗದಿಂದ ಇದನ್ನು ನಾವು ಕಾಣಲಿಲ್ಲ. ಇದು ಎರಡೂ ಕಡೆಯ ಬೌಲಿಂಗ್‌ನ ನಡುವಿನ ಪ್ರಮುಖ ವ್ಯತ್ಯಾಸವಾಗಿತ್ತು. ಒಂದು ಕಡೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಎತ್ತರ ಮತ್ತು ಹಿಟ್-ಡೆಕ್ ಬೌಲರ್‌ಗಳಿದ್ದರೆ ಮತ್ತೊಂದೆಡೆ, ಟೀಂ ಇಂಡಿಯಾ ವೇಗಿಗಳು ಅಷ್ಟು ಎತ್ತರದವರಲ್ಲ, ಅವರ ನ್ಯಾಚುರಲ್ ಲೆಂಗ್ತ್ ಫುಲರ್ ಡೆಲವರಿಸ್ ಹಾಕುತ್ತಾರೆ ಎಂದು ಉಭಯ ತಂಡದ ಬೌಲಿಂಗ್ ವ್ಯತ್ಯಾಸವನ್ನು ವಿವರಿಸಿದರು.

ಬ್ಯಾಟಿಂಗ್ ವೈಫಲ್ಯ
ಬೌಲಿಂಗ್ ವ್ಯತ್ಯಾಸಗಳ ಹೊರತಾಗಿಯೂ, ಪ್ರಮುಖ ಸಮಸ್ಯೆಯು ಬ್ಯಾಟಿಂಗ್‌ನಲ್ಲಿದೆ ಎಂದು ಗಂಭೀರ್ ಹೇಳಿದ್ದಾರೆ. ಟಾಸ್ ಗೆದ್ದ ನಂತರ ಭಾರತ ಕೇವಲ 202 ರನ್​ಗಳಿಗೆ ಮಂಡಿಯೂರಿತು. ಇದರೊಂದಿಗೆ ಎಲ್ಲಾ ಪ್ರಯೋಜನವನ್ನು ಕಳೆದುಕೊಂಡಿತು ಎಂದರು.

ಭಾರತ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನಂತರ ಕೇವಲ 200 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಟೀಂ ಇಂಡಿಯಾ ಟಾಸ್​ ಗೆದ್ದ ಪ್ರಯೋಜನವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಜೋಬರ್ಗ್ ಮತ್ತು ಸೆಂಚುರಿಯನ್ ನಡುವಿನ ವ್ಯತ್ಯಾಸವೆಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಸ್ಕೋರ್. ಸೆಂಚುರಿಯನ್‌ನಲ್ಲಿ ಭಾರತ 350 ಕ್ಕೂ ಹೆಚ್ಚು ರನ್ ಗಳಿಸಿತು ಇದರಿಂದ ಆ ಟೆಸ್ಟ್​ನಲ್ಲಿ ಗೆಲುವು ಸಾಧಿಸಿತು. ಆದರೆ ಪ್ರತಿ ಬಾರಿಯೂ ಟೀಂ ಇಂಡಿಯಾ ಎದುರಾಳಿ ತಂಡಕ್ಕೆ 200 ರಿಂದ 220 ರನ್ ಗುರಿ ನೀಡಿ, ಬೌಲರ್‌ಗಳ ಮೇಲೆ ಗೆಲುವಿನ ಜವಬ್ದಾರಿ ಹೇರಲಾಗುವುದಿಲ್ಲ. ವಿಶೇಷವಾಗಿ ಒಬ್ಬ ಬೌಲರ್ ಗಾಯಗೊಂಡಾಗ, ಕೇವಲ ನಾಲ್ಕು ಬೌಲಿಂಗ್ ಆಯ್ಕೆಗಳನ್ನು ಇಟ್ಟುಕೊಂಡು ಗೆಲ್ಲಬೇಕು ಎಂದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: IND vs SA: ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ರೋಹಿತ್ ಔಟ್, ರಾಹುಲ್​ಗೆ ನಾಯಕತ್ವ!