IND vs SL: ಲೈವ್ ಪಂದ್ಯದಲ್ಲೇ ಸುಂದರ್​ಗೆ ಹೊಡೆಯಲು ಓಡಿದ ರೋಹಿತ್; ಕಾರಣವೇನು? ವಿಡಿಯೋ ನೋಡಿ

|

Updated on: Aug 04, 2024 | 6:47 PM

IND vs SL: ಬೌಲಿಂಗ್​ ಮಾಡಲು ಸರಿಯಾಗಿ ರನ್ ಅಪ್ ತೆಗೆದುಕೊಳ್ಳುವಲ್ಲಿ ಪದೇ ಪದೇ ತಪ್ಪು ಮಾಡಿದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್​ ಅವರಿಗೆ ರೋಹಿತ್​ ಶರ್ಮಾ ಹೊಡೆಯಲು ಓಡಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

IND vs SL: ಲೈವ್ ಪಂದ್ಯದಲ್ಲೇ ಸುಂದರ್​ಗೆ ಹೊಡೆಯಲು ಓಡಿದ ರೋಹಿತ್; ಕಾರಣವೇನು? ವಿಡಿಯೋ ನೋಡಿ
ರೋಹಿತ್ ಶರ್ಮಾ
Follow us on

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನೇಕ ಸಂದರ್ಭಗಳಲ್ಲಿ ಮೈದಾನದಲ್ಲಿ ಕೋಪಗೊಳ್ಳುವುದನ್ನು ನಾವು ಸಾಕಷ್ಟು ಭಾರಿ ನೋಡಿದ್ದೇವೆ. ಹಾಗೆಯೇ ಆಟಗಾರರು ಮಾಡುವ ಸಣ್ಣ ಸಣ್ಣ ಎಡವಟ್ಟುಗಳಿಗೆ ತಾಳ್ಮೆ ಕಳೆದುಕೊಳ್ಳುವ ರೋಹಿತ್ ಮೈದಾನದಲ್ಲೇ ಅವರನ್ನು ತಮಾಷೆಯಾಗಿ ಮಾತಿನಲ್ಲಿ ನಿಂದಿಸುವುದು ಹಾಗೂ ಪೆಟ್ಟು ಕೊಡುವುದನ್ನು ನಾವು ನೋಡಿದ್ದೇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕಂಡುಬಂದಿದೆ. ಬೌಲಿಂಗ್​ ಮಾಡಲು ಸರಿಯಾಗಿ ರನ್ ಅಪ್ ತೆಗೆದುಕೊಳ್ಳುವಲ್ಲಿ ಪದೇ ಪದೇ ತಪ್ಪು ಮಾಡಿದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್​ ಅವರಿಗೆ ರೋಹಿತ್​ ಶರ್ಮಾ ಹೊಡೆಯಲು ಓಡಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಾಳ್ಮೆ ಕಳೆದುಕೊಂಡ ರೋಹಿತ್

ವಾಸ್ತವವಾಗಿ ಶ್ರೀಲಂಕಾ ಇನ್ನಿಂಗ್ಸ್‌ನ 33ನೇ ಓವರ್‌ ಎಸೆಯುವ ಜವಬ್ದಾರಿ ಹೊತ್ತ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮೂರು ಬಾರಿ ರನ್ ಅಪ್ ತೆಗೆದುಕೊಳ್ಳುವಲ್ಲಿ ಎಡವಿದರು. ಮೊದಲ ಬಾರಿ ರನ್ ಅಪ್ ತೆಗೆದುಕೊಳ್ಳುವಲ್ಲಿ ಸುಂದರ್ ಎಡವಿದಾಗ ರೋಹಿತ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಎರಡನೇ ಬಾರಿ ಅದೇ ಪುನರಾವರ್ತನೆಯಾದ ರೋಹಿತ್, ಸುಂದರ್​ ಕಡೆಗೆ ಕೈ ತೋರಿಸಿದರು. ಇಲ್ಲಿಗೆ ನಿಲ್ಲದ ಸುಂದರ್ ಮೂರನೇ ಬಾರಿಯೂ ಅದೇ ತಪ್ಪು ಮಾಡಿದರು. ಈ ವೇಳೆ ತಮ್ಮ ತಾಳ್ಮೆ ಕಳೆದುಕೊಂಡ ರೋಹಿತ್, ಸಂದುರ್​ನತ್ತ ಹೊಡೆಯಲು ಓಡಿದರು. ಇದನ್ನು ಗಮನಿಸಿದ ಇತರ ಆಟಗಾರರೊಂದಿಗೆ ಸುಂದರ್ ಕೂಡ ನಕ್ಕರು. ಇದೀಗ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಮೊದಲ ಪಂದ್ಯದಲ್ಲೂ ಇಂಥದ್ದೇ ಘಟನೆ

ಸರಣಿಯ ಮೊದಲ ಪಂದ್ಯದಲ್ಲೂ ರೋಹಿತ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಇಂತಹದ್ದೇ ತಮಾಷದಾಯಕ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಶ್ರೀಲಂಕಾ ಇನಿಂಗ್ಸ್​ನ 29ನೇ ಓವರ್​ನಲ್ಲಿ ಸುಂದರ್ ಎಲ್ ಬಿಡಬ್ಲ್ಯುಗೆ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಬಳಿಕ ವಾಷಿಂಗ್ಟನ್ ಸುಂದರ್ ನಾಯಕ ರೋಹಿತ್ ಶರ್ಮಾ ಕಡೆಗೆ ನೋಡಲಾರಂಭಿಸಿದರು.

ಆ ಸಮಯದಲ್ಲಿ ರೋಹಿತ್ ಕೂಡ ಸ್ಲಿಪ್‌ನಲ್ಲಿದ್ದರು, ಇದರಿಂದಾಗಿ ಚೆಂಡು ಮೊದಲು ಎಲ್ಲಿಗೆ ಬಡಿಯಿತು ಎಂದು ಅವರಿಗೆ ತಿಳಿದಿರಲಿಲ್ಲ. ಹೀಗಾಗಿ ಸುಂದರ್ ದಿಟ್ಟಿಸಿ ತನ್ನತ್ತ ನೋಡುವುದನ್ನು ನೋಡಿದ ರೋಹಿತ್, ‘ಏನು, ನೀನು ಹೇಳಪ್ಪ. ನನ್ನ ನೋಡಿದ್ರೆ ಆಗುತ್ತಾ?’ (ನಾನು ನೋಡಿಲ್ಲ, ಬೌಲಿಂಗ್ ಮಾಡಿದ್ದು ನೀನು, ಖಚಿತವಾಗಿ ಅದು ಔಟ್ ಅನ್ನುವ ಹಾಗಿದ್ರೆ ಹೇಳು ಡಿಆರ್​ಎಸ್ ತೆಗೆದುಕೊಳ್ಳುವ ಅನ್ನುವ ಅರ್ಥದಲ್ಲಿ) ಎಂದು ಹೇಳಿ ನಕ್ಕಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ