IND vs WI 2nd ODI: ಇಂದು ಭಾರತ- ವೆಸ್ಟ್ ಇಂಡೀಸ್ ಎರಡನೇ ಏಕದಿನ: ಸಂಜು ಸ್ಯಾಮ್ಸನ್​ಗೆ ಸಿಗುತ್ತಾ ಚಾನ್ಸ್?

|

Updated on: Jul 29, 2023 | 7:17 AM

India vs West Indies 2nd ODI: ಎರಡನೇ ಪಂದ್ಯದಲ್ಲೂ ಭಾರತ ಗೆದ್ದು ಸರಣಿ ವಶಪಡಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಅತ್ತ ವಿಂಡೀಸ್ ತಂಡ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ತಿದ್ದಿ ಕಮ್​ಬ್ಯಾಕ್ ಮಾಡಲು ಹೊಂಚು ಹಾಕಿದೆ.

IND vs WI 2nd ODI: ಇಂದು ಭಾರತ- ವೆಸ್ಟ್ ಇಂಡೀಸ್ ಎರಡನೇ ಏಕದಿನ: ಸಂಜು ಸ್ಯಾಮ್ಸನ್​ಗೆ ಸಿಗುತ್ತಾ ಚಾನ್ಸ್?
IND vs WI 2nd ODI
Follow us on

ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ಬಾರ್ಬಡೊಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ದ್ವಿತೀಯ ಏಕದಿನ ಪಂದ್ಯ ನಡೆಯಲಿದೆ. ಇದೇ ಮೈದಾನದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿತ್ತು. ಭಾರತ ಸ್ಪಿನ್ ದಾಳಿಗೆ ತತ್ತರಿಸಿದ ಕೆರಿಬಿಯನ್ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ರೋಹಿತ್ (Rohit Sharma) ಪಡೆ 5 ವಿಕೆಟ್​ಗಳಿಂದ ಗೆದ್ದಿತ್ತು. ಇದೀಗ ಎರಡನೇ ಪಂದ್ಯದಲ್ಲೂ ಭಾರತ ಗೆದ್ದು ಸರಣಿ ವಶಪಡಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಅತ್ತ ವಿಂಡೀಸ್ ತಂಡ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ತಿದ್ದಿ ಕಮ್​ಬ್ಯಾಕ್ ಮಾಡಲು ಹೊಂಚು ಹಾಕಿದೆ.

ಕಳೆದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲ ಬದಲಾವಣೆ ಮಾಡಿ ಕೈಸುಟ್ಟುಕೊಂಡಿತ್ತು. ರೋಹಿತ್ ಶರ್ಮಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದರೆ ವಿರಾಟ್ ಕೊಹ್ಲಿ ಕ್ರೀಸ್​ಗೆ ಬರಲಿಲ್ಲ. ಗಿಲ್-ಕಿಶನ್ ಓಪನರ್​ಗಳಾಗಿ ಆಡಿದರು. ಆದರೆ, ಈ ಬದಾವಣೆ ಭಾರತಕ್ಕೆ ಹೊಡೆತ ನೀಡಿತು. ಗಿಲ್, ಸೂರ್ಯಕುಮಾರ್, ಹಾರ್ದಿಕ್ ವೈಫಲ್ಯ ಅನುಭವಿಸಿದರು. ಆದರೆ, ವಿಕೆಟ್ ಕೀಪರ್ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಹೀಗಾಗಿ ಸಂಜು ಸ್ಯಾಮ್ಸನ್​ಗೆ ದ್ವಿತೀಯ ಏಕದಿನ ದಿನದಲ್ಲೂ ಸ್ಥಾನ ಅನುಮಾನ.

IND vs WI: ಐಪಿಎಲ್ ಬಳಿಕ ಲಯ ಕಳೆದುಕೊಂಡ ಗಿಲ್; ಟೀಂ ಇಂಡಿಯಾಗೆ ಹೊಸ ತಲೆನೋವು

ಇದನ್ನೂ ಓದಿ
Virat Kohli: ಅತಿ ಹೆಚ್ಚು ಕ್ಯಾಚ್ ಹಿಡಿದವರ ಪೈಕಿ ಇದೀಗ ಕಿಂಗ್ ಕೊಹ್ಲಿಗೆ ನಾಲ್ಕನೇ ಸ್ಥಾನ..!
ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ್ರಾ ಭುವನೇಶ್ವರ್? ಅನುಮಾನ ಹೆಚ್ಚಿಸಿದ ಇನ್ಸ್ಟಾಗ್ರಾಮ್ ಬಯೋ ಬದಲಾವಣೆ
IND vs WI: 60ಕ್ಕೂ ಹೆಚ್ಚು ಸರಾಸರಿ ಇದ್ದರೂ ಸಂಜು ಸ್ಯಾಮ್ಸನ್‌ಗೆ ಏಕೆ ಅವಕಾಶ ನೀಡುತ್ತಿಲ್ಲ? ಇಲ್ಲಿದೆ ಕಾರಣ
Ashes 2023: ನಿರ್ಣಾಯಕ ಪಂದ್ಯದಲ್ಲೂ ಮುಗ್ಗರಿಸಿದ ಆಂಗ್ಲರು; ಮೊದಲ ದಿನ ಆಸೀಸ್ ಮೇಲುಗೈ

ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗುವ ಈ ಪಿಚ್​ನಲ್ಲಿ ಓರ್ವ ವೇಗಿಯನ್ನು ಕೈಬಿಡುವ ಸಾಧ್ಯತೆ ಇದೆ. ಮುಖೇಶ್ ಕುಮಾರ್ ಬದಲಿಗೆ ಯುಜ್ವೇಂದ್ರ ಚಹಲ್ ಕಣಕ್ಕಿಳಿಯಬಹುದು. ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ಜಾದು ಎದುರಾಳಿಗರಲ್ಲಿ ನಡುಕ ಹುಟ್ಟಿಸಿದೆ. ಉಮ್ರಾನ್ ಮಲಿಕ್ ಇನ್ನಷ್ಟು ಮಾರಕವಾಗಬೇಕಿದೆ. ಶಾರ್ದೂಲ್ ಥಾಕೂರ್ ಹಾಗೂ ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ತಲಾ ಒಂದೊಂದು ವಿಕೆಟ್ ಕಿತ್ತಿದ್ದರು.

ಇತ್ತ ಕೆರಿಬಿಯನ್ ಪಡೆ ನೂತನ ಪ್ಲಾನ್​ನೊಂದಿಗೆ ಕಣಕ್ಕಿಳಿಯಬೇಕಿದೆ. ತವರು ನೆಲದಲ್ಲೇ ಹೀನಾಯ ಸೋಲು ಕಂಡಿರುವುದು ದೊಡ್ಡ ಹಿನ್ನಡೆ. ನಾಯಕ ಶಾಯ್ ಹೋಪ್ ಬಿಟ್ಟರೆ ಉಳಿದ ಬ್ಯಾಟರ್​ಗಳು ಸಾಥ್ ನೀಡುತ್ತಿಲ್ಲ. ಶಿಮ್ರೋನ್ ಹೆಟ್ಮೇರ್ ಅಬ್ಬರಿಸಬೇಕಿದೆ. ಖೈಲ್ ಮೇಯರ್ಸ್, ಬ್ರಾಂಡನ್ ಕಿಂಗ್ ಮೇಲೆ ನಿರೀಕ್ಷೆ ಇದೆ. ವಿಂಡೀಸ್ ಬೌಲಿಂಗ್ ವಿಭಾಗದಲ್ಲಿ ಅನೇಕ ಆಯ್ಕೆಗಳಿವೆ. ಆದರೆ, ಸಂಘಟಿತ ಪ್ರದರ್ಶನ ತೋರಿದರಷ್ಟೆ ಗೆಲುವು ಸಾಧ್ಯ. ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಬಹುದು.

ಪಂದ್ಯ ಎಷ್ಟು ಗಂಟೆಗೆ ಆರಂಭ-ನೇರ ಪ್ರಸಾರ?:

ಭಾರತ- ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆಯು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ನಡೆಯಲಿದ್ದು, ಪಂದ್ಯ 7.30ಕ್ಕೆ ಶುರುವಾಗಲಿದೆ. ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್​ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೆ ಫ್ಯಾನ್​ ಕೋಡ್ ಆ್ಯಪ್ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ನೋಡಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್-ಕೀಪರ್), ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ಉಮ್ರಾನ್ ಮಲಿಕ್.

ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಖೈಲ್ ಮೇಯರ್ಸ್, ಅಲಿಕ್ ಅಥಾನಾಝ್, ಕೀಸಿ ಕಾರ್ಟಿ, ಶಿಮ್ರೋನ್ ಹೆಟ್ಮೇರ್, ಅಲ್ಝಾರಿ ಜೋಸೆಫ್, ಡೊಮಿನಿಕ್ ಡ್ರೇಕ್ಸ್, ಯಾನಿಕ್ ಕ್ಯಾರಿಯಾ, ಗುಡಾಕೇಶ್ ಮೋಟಿ, ಬ್ರ್ಯಾಂಡನ್ ಕಿಂಗ್, ಕೆವಿನ್ ಸಿಂಕ್ಲೇರ್, ಒಶಾನೆ ಥಾಮಸ್, ರೊಮೊರಿಯೊ ಶೆಫರ್ಡ್, ಜೇಡನ್ ಸೀಲ್ಸ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ