IND vs WI: ಐಪಿಎಲ್ ಬಳಿಕ ಲಯ ಕಳೆದುಕೊಂಡ ಗಿಲ್; ಟೀಂ ಇಂಡಿಯಾಗೆ ಹೊಸ ತಲೆನೋವು

Shubman Gill: ವರ್ಷದ ಆರಂಭದಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಾ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಟೀಂ ಇಂಡಿಯಾದ ಯುವ ಬ್ಯಾಟರ್ ಶುಭ್​ಮನ್ ಗಿಲ್​ಗೆ ವೆಸ್ಟ್ ಇಂಡೀಸ್ ಪ್ರವಾಸ ದುಸ್ವಪ್ನದಂತೆ ಕಾಡುತ್ತಿದೆ.

IND vs WI: ಐಪಿಎಲ್ ಬಳಿಕ ಲಯ ಕಳೆದುಕೊಂಡ ಗಿಲ್; ಟೀಂ ಇಂಡಿಯಾಗೆ ಹೊಸ ತಲೆನೋವು
ಶುಭ್​ಮನ್ ಗಿಲ್
Follow us
ಪೃಥ್ವಿಶಂಕರ
|

Updated on:Jul 28, 2023 | 10:25 AM

ವರ್ಷದ ಆರಂಭದಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಾ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಟೀಂ ಇಂಡಿಯಾದ (Team India) ಯುವ ಬ್ಯಾಟರ್ ಶುಭ್​ಮನ್ ಗಿಲ್​ಗೆ (Shubman Gill) ವೆಸ್ಟ್ ಇಂಡೀಸ್ ಪ್ರವಾಸ (India vs West Indies) ದುಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್​ನಲ್ಲಿ (IPL 2023) ರನ್​ಗಳ ಗುಡ್ಡೆ ಹಾಕಿ ಡಬ್ಲ್ಯುಟಿಸಿ ಫೈನಲ್​ನಲ್ಲಿ ಅಬ್ಬರಿಸುವ ಸುಳಿವು ನೀಡಿದ್ದ ಗಿಲ್, ಆಸೀಸ್ ವೇಗಿಗಳ ಮುಂದೆ ಲೆಕ್ಕಕ್ಕಿಲ್ಲದಂತ್ತಾದರು. ಆ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲಾದರೂ ಗಿಲ್, ತಮ್ಮ ಹಳೆಯ ಲಯಕ್ಕೆ ಮರಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಆ ಭರವಸೆ ಕೂಡ ಇದೀಗ ಹುಸಿಯಾಗಿದೆ. ಏಷ್ಯಾಕಪ್ ಹಾಗೂ ವಿಶ್ವಕಪ್​ ಸಮೀಪಿಸುತ್ತಿರುವ ಸಮಯದಲ್ಲಿ ಶುಭ್​ಮನ್ ಗಿಲ್ ತಮ್ಮ ಫಾರ್ಮ್​ ಕಳೆದುಕೊಂಡಿರುವುದು ಟೀಂ ಇಂಡಿಯಾದ ತಲೆನೋವನ್ನು ಹೆಚ್ಚಿಸಿದೆ.

ವಾಸ್ತವವಾಗಿ ಇದೇ ಶುಭ್​ಮನ್ ಗಿಲ್, ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಕಳೆದ ವರ್ಷ ಭಾರತ ತಂಡ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಿದ್ದಾಗ ಅಬ್ಬರಿಸಿ ಬೊಬ್ಬಿರಿದಿದ್ದರು. ಆ ಪ್ರವಾಸದಲ್ಲಿ ಆಡಿದ ಗಿಲ್ ಮೂರು ಪಂದ್ಯಗಳಲ್ಲಿ ಕ್ರಮವಾಗಿ 64, 43, 98 ರನ್‌ಗಳ (ಔಟಾಗದೆ) ಇನ್ನಿಂಗ್ಸ್‌ಗಳನ್ನು ಆಡಿದ್ದರು. ಅಂದಿನಿಂದ, ಅವರು ಈ ಸ್ವರೂಪದಲ್ಲಿ ರನ್ ಗಳಿಸುತ್ತಲೇ ಇದ್ದರು. ಹೀಗಾಗಿ ಅನುಭವಿ ಆರಂಭಿಕ ಶಿಖರ್ ಧವನ್ ಬದಲಿಗೆ, ಗಿಲ್​ರನ್ನು ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾರ ಜೊತೆಗಾರನೆಂದು ಬಿಂಭಿಸಲಾಗಿತ್ತು. ಆದರೀಗ ಗಿಲ್ ಫಾರ್ಮ್​ ಕಂಡ ಆಯ್ಕೆ ಮಂಡಳಿ ಮತ್ತೆ ಧವನ್​ರತ್ತ ಮುಖ ಮಾಡುವಂತ್ತಾಗಿದೆ.

IND vs WI: ಬ್ಯಾಟಿಂಗ್ ಕ್ರಮಾಂಕದಲ್ಲಾಗಿರುವ ಬದಲಾವಣೆಯ ಬಗ್ಗೆ ಶುಭ್​ಮನ್ ಗಿಲ್ ಹೇಳಿದ್ದೇನು?

ಟೆಸ್ಟ್‌ನಲ್ಲಿ ಫ್ಲಾಪ್, ಏಕದಿನದಲ್ಲೂ ಲಯ ಕಾಣಲಿಲ್ಲ

ಇದೀಗ ಒಂದು ವರ್ಷದ ನಂತರ ಮತ್ತೊಮ್ಮೆ ವೆಸ್ಟ್ ಇಂಡೀಸ್ ಪ್ರವಾದಲ್ಲಿ ತಂಡದಲ್ಲಿರುವ ಶುಭ್​ಮನ್ ಗಿಲ್​ಗೆ ತಮ್ಮ ಹಳೆಯ ಆಟವನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಅನಾನುಭವಿಯಾಗಿ ವಿಂಡೀಸ್ ವಿರುದ್ಧ ಕಣಕ್ಕಿಳಿದಿದ್ದ ಗಿಲ್ ಅಬ್ಬರಿಸಿದ್ದರು. ಆದರೆ ಈ ವರ್ಷ ಸಾಕಷ್ಟು ಅನುಭವದ ಹೊರತಾಗಿಯೂ ದುರ್ಬಲ ವಿಂಡೀಸ್ ವಿರುದ್ಧ ರನ್​ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.

ಏಕದಿನ ಸರಣಿಗೂ ಮುನ್ನ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಇನ್ನಿಂಗ್ಸ್​ಗಳನ್ನು ಆಡಿದ್ದ ಗಿಲ್, ಮೊದಲ ಪಂದ್ಯದಲ್ಲಿ 6 ಮತ್ತು ಎರಡನೇ ಪಂದ್ಯದಲ್ಲಿ 10, ಔಟಾಗದೆ 29 ರನ್ ಕಲೆಹಾಕಿದ್ದರು. ಅಂದರೆ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 45 ರನ್ ಮಾತ್ರ ಗಿಲ್ ಬ್ಯಾಟ್​ನಿಂದ ಹೊರಬಂದಿದ್ದವು. ಇದರ ಹೊರತಾಗಿಯೂ ಗಿಲ್, ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಾರ್ಬಡೋಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿದ ಗಿಲ್, ಕೇವಲ ಏಳು ರನ್ ಕಲೆ ಹಾಕಿ ತಮ್ಮ ಹಳೆಯ ತಪ್ಪಿಗೆ ಮತ್ತೊಮ್ಮೆ ವಿಕೆಟ್ ಕೈಚೆಲ್ಲಿದರು.

ಮತ್ತೆ ಮತ್ತೆ ಅದೇ ತಪ್ಪು

ಟೆಸ್ಟ್‌ನಿಂದ ಏಕದಿನ ಪಂದ್ಯದವರೆಗೂ ಶುಭ್‌ಮನ್‌ ಪದೇಪದೇ ಒಂದೇ ತಪ್ಪನ್ನು ಪುನಾರವರ್ತಿಸಿ ತಮ್ಮ ವಿಕೆಟ್ ಕೈಚೆಲ್ಲುತ್ತಿದ್ದಾರೆ. ವಿಕೆಟ್​ನಿಂದ ಹೊರ ಹೋಗುತ್ತಿರುವ ಚೆಂಡನ್ನು ಆಡಲು ಯತ್ನಿಸಿ ವಿಕೆಟ್ ಕೈಚೆಲ್ಲುವ ಚಟಕ್ಕೆ ಗಿಲ್ ಬಿದ್ದಂತೆ ತೋರುತ್ತಿದೆ. ಕೆರಿಬಿಯನ್ ಪ್ರವಾಸದಲ್ಲಿ, 4 ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 52 ರನ್ ಹೊರಬಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಸರಣಿಯ ಉಳಿದ ಎರಡು ಏಕದಿನ ಪಂದ್ಯಗಳ ಜೊತೆಗೆ, ನಂತರ ನಡೆಯಲ್ಲಿರುವ 5 ಟಿ20 ಪಂದ್ಯಗಳಲ್ಲಿ ಗಿಲ್ ಮತ್ತೆ ತಮ್ಮ ಹಳೆಯ ಫಾರ್ಮ್​ ಕಂಡುಕೊಳ್ಳಲು ಪ್ರಯತ್ನಿಸಬೇಕಿದೆ. ಇಲ್ಲದಿದ್ದರೆ, ಏಷ್ಯಾಕಪ್​ಗೂ ಮುನ್ನ ಟೀಂ ಇಂಡಿಯಾ ಗಿಲ್ ಬದಲಿಯಾಗಿ ಬೇರೊಬ್ಬ ಆಟಗಾರನನ್ನು ಹುಡುಕಬೇಕಾಗುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:07 am, Fri, 28 July 23

"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ