AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ishan Kishan: ಧೋನಿ ದಾಖಲೆ ಉಡೀಸ್; ವೇಗದ ಟೆಸ್ಟ್ ಅರ್ಧಶತಕ ಸಿಡಿಸಿ ಕಿಶನ್ ಬರದ ದಾಖಲೆಗಳಿವು

IND vs WI: ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಭಾರತದ ಆಟಗಾರರಾದ ರಿಷಭ್ ಪಂತ್, ವೀರೇಂದ್ರ ಸೆಹ್ವಾಗ್, ಕಪಿಲ್ ದೇವ್, ಹರ್ಭಜನ್ ಮತ್ತು ಎಂಎಸ್ ಧೋನಿ ಅವರಂತಹ ಆಟಗಾರರ ಪಟ್ಟಿಗೆ ಕಿಶನ್ ಸೇರ್ಪಡೆಗೊಂಡರು.

Ishan Kishan: ಧೋನಿ ದಾಖಲೆ ಉಡೀಸ್; ವೇಗದ ಟೆಸ್ಟ್ ಅರ್ಧಶತಕ ಸಿಡಿಸಿ ಕಿಶನ್ ಬರದ ದಾಖಲೆಗಳಿವು
ಇಶಾನ್ ಕಿಶನ್
ಪೃಥ್ವಿಶಂಕರ
|

Updated on:Jul 24, 2023 | 10:43 AM

Share

ರಿಷಭ್ ಪಂತ್ (Rishabh Pant) ಅನುಪಸ್ಥಿತಿಯಲ್ಲಿ ಭಾರತ ಟೆಸ್ಟ್ ತಂಡಕ್ಕೆ ಸೂಕ್ತ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ನನ್ನು ಹುಡುಕುತ್ತಿರುವ ಆಯ್ಕೆ ಮಂಡಳಿಗೆ ಇಶಾನ್ ಕಿಶನ್ (Ishan Kishan) ರೂಪದಲ್ಲಿ ಒಬ್ಬ ಸೂಕ್ತ ಆಟಗಾರ ಸಿಕ್ಕಿದ್ದಾನೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಟೆಸ್ಟ್ (India vs West Indies) ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕಿಶನ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಖಾತೆ ತೆರೆಯಲು ಸಾಕಷ್ಟು ಎಸೆತಗಳನ್ನು ತೆಗೆದುಕೊಂಡು ನಾಯಕನ ಕೋಪಕ್ಕೆ ಗುರಿಯಾಗಿದ್ದ ಕಿಶನ್, ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

33 ಎಸೆತಗಳಲ್ಲಿ ಚೊಚ್ಚಲ ಟೆಸ್ಟ್  ಅರ್ಧಶತಕ

ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಮಳೆ ಪೀಡಿತ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ವಿಂಡೀಸ್ ವಿರುದ್ಧ ಮೇಲುಗೈ ಸಾಧಿಸಿದೆ. ಇದಕ್ಕೆ ಪ್ರಮುಖ ಕಾರಣ ತಂಡದ ಸ್ಫೋಟಕ ಬ್ಯಾಟಿಂಗ್. ಇದಕ್ಕೆ ಮೊದಲು ನಾಂದಿ ಹಾಡಿದ್ದ ನಾಯಕ ರೋಹಿತ್ ಶರ್ಮಾ ತಮ್ಮ ಟೆಸ್ಟ್ ವೃತ್ತಿ ಬದುಕಿನಲ್ಲಿ ವೇಗದ ಅರ್ಧಶತಕ ಸಿಡಿಸಿ ಮಿಂಚಿದರೆ, ಕೊಹ್ಲಿ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಇಳಿದ ಇಶಾನ್ ಕಿಶನ್, ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ಕೇವಲ 33 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್  ಅರ್ಧಶತಕವನ್ನು ಪೂರೈಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಭಾರತದ ಆಟಗಾರರಾದ ರಿಷಭ್ ಪಂತ್, ವೀರೇಂದ್ರ ಸೆಹ್ವಾಗ್, ಕಪಿಲ್ ದೇವ್, ಹರ್ಭಜನ್ ಮತ್ತು ಎಂಎಸ್ ಧೋನಿ ಅವರಂತಹ ಆಟಗಾರರ ಪಟ್ಟಿಗೆ ಕಿಶನ್ ಸೇರ್ಪಡೆಗೊಂಡರು.

IND vs WI: ಒಂದೇ ಕೈಯಲ್ಲಿ ಸಿಕ್ಸರ್! ಅರ್ಧಶತಕದ ಇನ್ನಿಂಗ್ಸ್​ನಲ್ಲಿ ಪಂತ್​ರನ್ನು ನೆನಪಿಸಿದ ಕಿಶನ್; ವಿಡಿಯೋ ನೋಡಿ

ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 34 ಎಸೆತಗಳಲ್ಲಿ ಸಿಡಿಸಿದ ಅಧರ್ಶತಕ ದಾಖಲೆಯನ್ನು 33 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವುದರೊಂದಿಗೆ ಕಿಶನ್ ಮುರಿದರು. ಈ ಮೂಲಕ ಈ ದಾಖಲೆ ಬರೆದ ಟೀಂ ಇಂಡಿಯಾದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಎನಿಸಿಕೊಂಡರು. ಅಲ್ಲದೆ ಕಿಶನ್ ಅವರು ನರೇನ್ ತಮ್ಹಾನೆ, ಬುಧಿ ಕುಂದರನ್, ಫಾರೋಖ್ ಇಂಜಿನಿಯರ್, ಸೈಯದ್ ಕಿರ್ಮಾನಿ ಮತ್ತು ನಯನ್ ಮೊಂಗಿಯಾ ಅವರ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಆರನೇ ಭಾರತೀಯ ವಿಕೆಟ್‌ಕೀಪರ್ ಬ್ಯಾಟರ್ ಎನಿಸಿಕೊಂಡರು

ನಂ. 4 ರಲ್ಲಿ ಬ್ಯಾಟಿಂಗ್ ಮಾಡಿದ ವಿಕೆಟ್‌ಕೀಪರ್‌ಗಳು ಯಾರ್ಯಾರೆಂದರೆ?

  1. ನರೇನ್ ತಮ್ಹಾನೆ vs ಆಸ್ಟ್ರೇಲಿಯಾ- ಚೆನ್ನೈ, 1956
  2. ಬುದ್ಧಿ ಕುಂದರನ್ vs ಆಸ್ಟ್ರೇಲಿಯಾ- ಚೆನ್ನೈ, 1960
  3. ಫರೋಖ್ ಇಂಜಿನಿಯರ್ vs ಇಂಗ್ಲೆಂಡ್- ಲಾರ್ಡ್ಸ್, 1971
  4. ಸೈಯದ್ ಕಿರ್ಮಾನಿ vs ಪಾಕಿಸ್ತಾನ- ಕರಾಚಿ, 1978
  5. ಸೈಯದ್ ಕಿರ್ಮಾನಿ vs ಪಾಕಿಸ್ತಾನ- ಬೆಂಗಳೂರು, 1979
  6. ನಯನ್ ಮೊಂಗಿಯಾ vs ಆಸ್ಟ್ರೇಲಿಯಾ- ಮುಂಬೈ, 2001
  7. ಇಶಾನ್ ಕಿಶನ್ vs ವೆಸ್ಟ್ ಇಂಡೀಸ್ – ಪೋರ್ಟ್ ಆಫ್ ಸ್ಪೇನ್, 2023

ಟೆಸ್ಟ್‌ನಲ್ಲಿ ಭಾರತೀಯ ವಿಕೆಟ್‌ಕೀಪರ್‌ಗಳ ವೇಗದ ಅರ್ಧಶತಕ

  1. 28 ಎಸೆತಗಳು – ರಿಷಬ್ ಪಂತ್ vs ಶ್ರೀಲಂಕಾ, ಬೆಂಗಳೂರು (2022)
  2. 33 ಎಸೆತಗಳು – ಇಶಾನ್ ಕಿಶನ್ vs ವೆಸ್ಟ್ ಇಂಡೀಸ್, ಪೋರ್ಟ್ ಆಫ್ ಸ್ಪೇನ್ (2023)
  3. 34 ಎಸೆತಗಳು – ಎಂಎಸ್ ಧೋನಿ vs ಪಾಕಿಸ್ತಾನ, ಫೈಸಲಾಬಾದ್ (2006)

ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ವಿಕೆಟ್‌ಕೀಪರ್‌ಗಳು

  1. 172.88 – 102*(59) – ಆಡಮ್ ಗಿಲ್‌ಕ್ರಿಸ್ಟ್ vs ಇಂಗ್ಲೆಂಡ್, ಪರ್ತ್ (2006/07)
  2. 161.29 – 50(31) – ರಿಷಭ್ ಪಂತ್ vs ಶ್ರೀಲಂಕಾ, ಬೆಂಗಳೂರು (2022)
  3. 152.94 – 52*(34) – ಇಶನ್ ಕಿಶನ್ vs ವೆಸ್ಟ್ ಇಂಡೀಸ್, ಪೋರ್ಟ್ ಆಫ್ ಸ್ಪೇನ್ (2023)
  4. 145.23 – 61(42) – ಇಯಾನ್ ಸ್ಮಿತ್ vs ಪಾಕಿಸ್ತಾನ, ಫೈಸಲಾಬಾದ್ (1990)
  5. 145.23 – 61 (42) – ಮ್ಯಾಟ್ ಪ್ರಯರ್ vs ಆಸ್ಟ್ರೇಲಿಯಾ, ಲಾರ್ಡ್ಸ್ (2009)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:41 am, Mon, 24 July 23

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ