IND vs WI 3rd ODI: ಇಂದು ಭಾರತ-ವೆಸ್ಟ್ ಇಂಡೀಸ್ ಕೊನೆಯ ಏಕದಿನ: ಉಭಯ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

|

Updated on: Aug 01, 2023 | 7:16 AM

ಇಂದಿನ ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಗೆದ್ದವರಿಗೆ ಸರಣಿ ಸಿಗಲಿದೆ. ಈಗಾಗಲೇ ಇಂಡೋ-ವಿಂಡೀಸ್ ಆಟಗಾರರು ಸ್ಟೇಡಿಯಂಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

IND vs WI 3rd ODI: ಇಂದು ಭಾರತ-ವೆಸ್ಟ್ ಇಂಡೀಸ್ ಕೊನೆಯ ಏಕದಿನ: ಉಭಯ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
IND vs WI 3rd ODI
Follow us on

ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಅಂತಿಮ ನಿರ್ಣಾಯಕ ಮೂರನೇ ಏಕದಿನ ಇಂದು ನಡೆಯಲಿದೆ. ಟ್ರಿನಿಡಾಡ್​ನ (Trinidad) ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಏರ್ಪಡಿಸಲಾಗಿದೆ. ಸದ್ಯ ಮೂರು ಪಂದ್ಯಗಳ ಏಕದಿನ ಸರಣಿ (ODI Series) 1-1 ಅಂಕಗಳ ಅಂತರದ ಸಮಬಲದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಗೆದ್ದವರಿಗೆ ಸರಣಿ ಸಿಗಲಿದೆ. ಈಗಾಗಲೇ ಇಂಡೋ-ವಿಂಡೀಸ್ ಆಟಗಾರರು ಸ್ಟೇಡಿಯಂಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಟೀಮ್ ಇಂಡಿಯಾ ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಕೆಲ ಬದಲಾವಣೆ ಮಾಡಿತು. ಆದರೆ, ಅದು ಯಶಸ್ಸು ಕೊಡಲಿಲ್ಲ. ದ್ವಿತೀಯ ಏಕದಿನದಿಂದ ರೋಹಿತ್, ಕೊಹ್ಲಿಗೆ ವಿಶ್ರಾಂತಿ ನೀಡಿ ಸ್ಯಾಮ್ಸನ್, ಅಕ್ಷರ್​ರನ್ನು ಕಣಕ್ಕಿಳಿಸಿತ್ತು. ಇಂದಿನ ಪಂದ್ಯದಲ್ಲಿ ಕೂಡ ಪ್ರಯೋಗ ಮುಂದುವರೆಯಲಿದೆ ಎಂದು ಕೋಚ್ ದ್ರಾವಿಡ್ ಹೇಳಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತೃತೀಯ ಏಕದಿನದಲ್ಲೂ ಆಡುವುದು ಅನುಮಾನ ಎನ್ನಲಾಗಿದೆ.

ಐಸಿಸಿ ಏಕದಿನ ವಿಶ್ವಕಪ್​ಗೆ ತಂಡ ಕೊಟ್ಟಲು ಮ್ಯಾನೇಜ್ಮೆಂಟ್ ಪರದಾಡುತ್ತಿದ್ದು, ಸೂಕ್ತ ಆಟಗಾರನ ಹುಡುಕಾಟದಲ್ಲಿದೆ. ಸಂಜು ಸ್ಯಾಮ್ಸನ್​ ಹಾಗೂ ಸೂರ್ಯಕುಮಾರ್ ಯಾದವ್​ಗೆ ಇದು ಕೊನೆಯ ಅವಕಾಶ ಎನ್ನಬಹುದು. ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸಿ ಭರವಸೆ ಮೂಡಿಸಿದರೆ, ಶುಭ್​ಮನ್ ಗಿಲ್ ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಪ್ರದರ್ಶನ ತೋರಬೇಕಿದೆ. ಬೌಲಿಂಗ್​ನಲ್ಲಿ ಯುಜ್ವೇಂದ್ರ ಚಹಲ್​ಗೆ ಇನ್ನೂ ಅವಕಾಶ ಸಿಕ್ಕಲ್ಲ.

ಇದನ್ನೂ ಓದಿ
Ashes 2023: ರಣರೋಚಕ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್: ಸ್ಟುವರ್ಟ್​ ಬ್ರಾಡ್​ಗೆ ಗೆಲುವಿನ ವಿದಾಯ
Virat Kohli: ಮೂರನೇ ಏಕದಿನ ಪಂದ್ಯಕ್ಕೂ ವಿರಾಟ್ ಕೊಹ್ಲಿ ಡೌಟ್..!
T20 World Cup Qualifier 2023: ಕೊನೆಗೂ ಗೆದ್ದು ಬೀಗಿದ ಚೀನಾ ತಂಡ
India T20 squad: ಟೀಮ್ ಇಂಡಿಯಾ ಟಿ20 ತಂಡ ಪ್ರಕಟ: ಬುಮ್ರಾಗೆ ನಾಯಕತ್ವ

VIDEO: ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ಹಾವು: ಬಾಂಗ್ಲಾ ತಂಡದ ಕಾಲೆಳೆದ ಡಿಕೆ

ಇತ್ತ ಕೆರಿಬಿಯನ್ ಪಡೆ ದ್ವಿತೀಯ ಏಕದಿನದಲ್ಲಿ ಗೆಲ್ಲುವ ಮೂಲಕ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ನಾಯಕ ಶಾಯ್ ಹೋಪ್ ನೂತನ ಯೋಜನೆಯೊಂದಿಗೆ ಇಂದುಕೂಡ ಕಣಕ್ಕಿಳಿಯಬಹುದು. ಬ್ರಾಂಡನ್ ಕಿಂಗ್, ಖೈಲ್ ಮೇಯರ್ಸ್, ಅಲಿಕ್ ಅಥನಾಜೆ, ಶಿಮ್ರೋನ್ ಹೆಟ್ಮೇರ್ ರಂತಹ ಅನುಭವಿ ಬ್ಯಾಟರ್​ಗಳು ತಂಡಕ್ಕೆ ನೆರವಾದರೆ ದೊಡ್ಡ ಮೊತ್ತ ಕಲೆಹಾಕಬಹುದು. ಬೌಲಿಂಗ್​ನಲ್ಲಿ ಒಶಾನೆ ಥೋಮಸ್, ಅಲ್ಜರಿ ಜೋಸೆಫ್, ಮೋತಿ, ಶೆಪರ್ಡ್ ಮಾರಕವಾಗು ಗೋಚರಿಸಿದ್ದಾರೆ.

ಪಂದ್ಯ ಎಷ್ಟು ಗಂಟೆಗೆ ಆರಂಭ-ನೇರ ಪ್ರಸಾರ?:

ಭಾರತ- ವೆಸ್ಟ್ ಇಂಡೀಸ್ ಮೂರನೇ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆಯು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ನಡೆಯಲಿದ್ದು, ಪಂದ್ಯ 7.30ಕ್ಕೆ ಶುರುವಾಗಲಿದೆ. ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್​ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೆ ಫ್ಯಾನ್​ ಕೋಡ್ ಆ್ಯಪ್ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ನೋಡಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್-ಕೀಪರ್), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ಉಮ್ರಾನ್ ಮಲಿಕ್, ರುತುರಾಜ್ ಗಾಯಕ್ವಾಡ್, ಅಕ್ಷರ್ ಪಟೇಲ್.

ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಖೈಲ್ ಮೇಯರ್ಸ್, ಅಲಿಕ್ ಅಥಾನಾಝ್, ಕೀಸಿ ಕಾರ್ಟಿ, ಶಿಮ್ರೋನ್ ಹೆಟ್ಮೇರ್, ಅಲ್ಝಾರಿ ಜೋಸೆಫ್, ಡೊಮಿನಿಕ್ ಡ್ರೇಕ್ಸ್, ಯಾನಿಕ್ ಕ್ಯಾರಿಯಾ, ಗುಡಾಕೇಶ್ ಮೋಟಿ, ಬ್ರ್ಯಾಂಡನ್ ಕಿಂಗ್, ರೊಮೊರಿಯೊ ಶೆಫರ್ಡ್, ಜೇಡನ್ ಸೀಲ್ಸ್, ಕೆವಿನ್ ಸಿಂಕ್ಲೇರ್, ಒಶಾನೆ ಥಾಮಸ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ