AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ಹಾವು: ಬಾಂಗ್ಲಾ ತಂಡದ ಕಾಲೆಳೆದ ಡಿಕೆ

LPL 2023: ಲಂಕಾ ಪ್ರೀಮಿಯರ್ ಲೀಗ್​ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ಹಾವಿನ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ದಿನೇಶ್ ಕಾರ್ತಿಕ್ ಬಾಂಗ್ಲಾದೇಶ್ ತಂಡದ ಕಾಲೆಳೆದಿದ್ದಾರೆ.

VIDEO: ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ಹಾವು: ಬಾಂಗ್ಲಾ ತಂಡದ ಕಾಲೆಳೆದ ಡಿಕೆ
Snake - DK
TV9 Web
| Edited By: |

Updated on: Jul 31, 2023 | 7:08 PM

Share

LPL 2023: ಲಂಕಾ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದ ವೇಳೆ ಹಾವೊಂದು ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ಗಾಲೆ ಟೈಟಾನ್ಸ್ ವಿರುದ್ಧ ಡಂಬುಲ್ಲಾ ಔರಾ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನ 4ನೇ ಓವರ್​ ವೇಳೆ ಮೈದಾನದಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಕೆಲ ಕಾಲ ಮ್ಯಾಚ್​ ಅನ್ನು ಸ್ಥಗಿತಗೊಳಿಸಲಾಯಿತು. ಈ ವೇಳೆ ಮೈದಾನಕ್ಕೆ ಆಗಮಿಸಿದ ನಾಲ್ಕನೇ ಅಂಪೈರ್ ಹಾವನ್ನು ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಇದೀಗ ಈ ಹಾವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

View this post on Instagram

A post shared by FanCode (@fancode)

ಬಾಂಗ್ಲಾದೇಶ್ ತಂಡದ ಕಾಲೆಳೆದ ದಿನೇಶ್ ಕಾರ್ತಿಕ್:

ಲಂಕಾ ಪ್ರೀಮಿಯರ್ ಲೀಗ್​ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ಹಾವಿನ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ದಿನೇಶ್ ಕಾರ್ತಿಕ್ ಬಾಂಗ್ಲಾದೇಶ್ ತಂಡದ ಕಾಲೆಳೆದಿದ್ದಾರೆ.

ನಾಗಿನ್ ಮತ್ತೆ ಬಂದಿದೆ…ನಾನು ಇದು ಬಾಂಗ್ಲಾದೇಶ್ ತಂಡ ಅಂದುಕೊಂಡೆ ಡಿಕೆ ಕಿಚಾಯಿಸಿದ್ದಾರೆ. ಬಾಂಗ್ಲಾದೇಶ್ ತಂಡದ ಆಟಗಾರರು ಹಲವು ಬಾರಿ ನಾಗಿನ್ ಶೈಲಿಯಲ್ಲಿ ಗೆಲುವನ್ನು ಸಂಭ್ರಮಿಸಿದ್ದರು. ಇದನ್ನೆ ಪರೋಕ್ಷವಾಗಿ ಪ್ರಸ್ತಾಪಿಸಿರುವ ದಿನೇಶ್ ಕಾರ್ತಿಕ್ ಬಾಂಗ್ಲಾದೇಶ್ ತಂಡದ ಕಾಲೆಳೆದಿರುವುದು ವಿಶೇಷ.

ಭಾರತ-ಸೌತ್ ಆಫ್ರಿಕಾ ಪಂದ್ಯದ ವೇಳೆ ಕಾಣಿಸಿಕೊಂಡಿದ್ದ ನಾಗರಾಜ:

ಈ ಹಿಂದೆ ಗುವಾಹಟಿಯ ಬರ್ಸ್ಪಾರಾ ಕ್ರೀಡಾಂಗಣದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಹಾವೊಂದು ಕಾಣಿಸಿಕೊಂಡಿತ್ತು. ಇದಾದ ಬಳಿಕ ಮೈದಾನಕ್ಕೆ ಹಾವು ಬರುವುದನ್ನು ತಡೆಯಲು ವಿಶೇಷ ಕೀಟನಾಶಕಗಳನ್ನು ಸಿಂಪಡಿಸಲಾಗಿತ್ತು.