IND vs WI: ಕೊನೆಯ 2 ಟಿ20 ಪಂದ್ಯಗಳಿಗೆ ಅಮೇರಿಕಾ ಆತಿಥ್ಯ; ಯಾವ ದಿನದಂದು ನಡೆಯಲ್ಲಿವೆ ಈ ಪಂದ್ಯಗಳು?
IND vs WI: ಸರಣಿಯ ಮೊದಲ ಮೂರು ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯವಹಿಸಿದ್ದರೆ, ಉಳಿದ ಎರಡು ಪಂದ್ಯಗಳಿಗೆ ಅಮೇರಿಕಾ ಆತಿಥ್ಯವಹಿಸುತ್ತಿದೆ. ಹೀಗಾಗಿ ಮೂರನೇ ಟಿ20 ಪಂದ್ಯವನ್ನು ಆಡಿದ ಬಳಿಕ ಹಾರ್ದಿಕ್ ಪಡೆ ಇಂದು ಅಂದರೆ, ಆಗಸ್ಟ್ 10 ರಂದು ಅಮೇರಿಕಾಗೆ ಪ್ರಯಾಣ ಬೆಳೆಸುತ್ತಿದೆ.
1 / 9
ಸತತ ಎರಡು ಟಿ20 ಪಂದ್ಯಗಳಲ್ಲಿ ಸೋಲನುಭವಿಸಿದ್ದಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಿತ್ತು. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿ 2-1 ಅಂತರದಿಂದ ರೋಚಕತೆ ಸೃಷ್ಟಿಸಿದೆ.
2 / 9
ಸರಣಿಯ ಮೊದಲ ಮೂರು ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯವಹಿಸಿದ್ದರೆ, ಉಳಿದ ಎರಡು ಪಂದ್ಯಗಳಿಗೆ ಅಮೇರಿಕಾ ಆತಿಥ್ಯವಹಿಸುತ್ತಿದೆ. ಹೀಗಾಗಿ ಮೂರನೇ ಟಿ20 ಪಂದ್ಯವನ್ನು ಆಡಿದ ಬಳಿಕ ಹಾರ್ದಿಕ್ ಪಡೆ ಇಂದು ಅಂದರೆ, ಆಗಸ್ಟ್ 10 ರಂದು ಅಮೇರಿಕಾಗೆ ಪ್ರಯಾಣ ಬೆಳೆಸುತ್ತಿದೆ.
3 / 9
ಗುರುವಾರ ಅಮೇರಿಕಾಗೆ ಆಗಮಿಸಲಿರುವ ಟೀಂ ಇಂಡಿಯಾ ಉಳಿದೆರಡು ಪಂದ್ಯಗಳನ್ನು ಗೆದ್ದರೆ ಮಾತ್ರ ಟಿ20 ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಇತ್ತ ವೆಸ್ಟ್ ಇಂಡೀಸ್ ಇನ್ನೊಂದು ಪಂದ್ಯದಲ್ಲಿ ಗೆದ್ದರೆ ಟಿ20 ಸರಣಿಯನ್ನು ತನ್ನದಾಗಸಿಕೊಳ್ಳಲಿದೆ.
4 / 9
ಇನ್ನು ಶುಕ್ರವಾರ ಐಚ್ಛಿಕ ತರಬೇತಿ ನಡೆಸಲ್ಲಿರುವ ಹಾರ್ದಿಕ್ ಪಡೆ ಅಮೇರಿಕಾದ ಫ್ಲೋರಿಡಾದಲ್ಲಿ ಕೊನೆಯ ಎರಡು ಪಂದ್ಯಗಳನ್ನು ಆಡಲಿದೆ. ಈ ಹಿಂದೆ ಇದೆ ಮೈದಾನದಲ್ಲಿ ಮೇಜರ್ ಲೀಗ್ ಕ್ರಿಕೆಟ್ ನಡೆದಿತ್ತು. ಆ ಸಮಯದಲ್ಲಿ ಅಪಾರ ಪ್ರಮಾಣದ ಪ್ರೇಕ್ಷರು ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಹೀಗಾಗಿ ಭಾರತ ತಂಡವನ್ನು ಹುರಿದುಂಬಿಸಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ.
5 / 9
ಉಭಯ ತಂಡಗಳ ನಾಲ್ಕನೇ ಟಿ20 ಪಂದ್ಯ ಆಗಸ್ಟ್ 12 ರಂದು ಫ್ಲೋರಿಡಾದಲ್ಲಿ ನಡೆಯಲ್ಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
6 / 9
ಹಾಗೆಯೇ ಸರಣಿಯ ಕೊನೆಯ ಹಾಗೂ ಐದನೇ ಟಿ20 ಪಂದ್ಯಕ್ಕೂ ಇದೇ ಮೈದಾನ ಆತಿಥ್ಯವಹಿಸಲಿದ್ದು, ಆಗಸ್ಟ್ 12 ರಂದು ನಡೆಯಲ್ಲಿರುವ ಈ ಪಂದ್ಯ ಕೂಡ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
7 / 9
ಈ ಲಾಡರ್‌ಹಿಲ್‌ನಲ್ಲಿ ಉಭಯ ತಂಡಗಳು ಆರು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆತಿಥೇಯರು 3-2 ರಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ನಡೆದ ಮೊದಲ 4 ಪಂದ್ಯಗಳಲ್ಲಿ ವಿಂಡೀಸ್ ತಂಡ 3 ರಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಮತ್ತೊಂದೆಡೆ, ಭಾರತವು 2022 ರಲ್ಲಿ ಇಲ್ಲಿ ಆಡಿದ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದೆ.
8 / 9
ಫ್ಲೋರಿಡಾದ ಮೈದಾನ ಸ್ಲೋ ಪಿಚ್ಗೆ ಹೆಸರುವಾಸಿಯಾಗಿರುವುದರಿಂದ ಮೂರನೇ ಟಿ20ಯಲ್ಲಿ ಆಡಿದ ತಂಡವೇ ನಾಲ್ಕನೇ ಪಂದ್ಯಕ್ಕೆ ವಿಂಡೀಸ್ ವಿರುದ್ಧ ಕಣಕ್ಕಿಳಿಯಲಿದೆ. ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಪಾತ್ರವನ್ನು ಮುಂದುವರಿಸುವ ನಿರೀಕ್ಷೆಯಿದೆ.
9 / 9
ಇನ್ನು ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ಗೆ ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾ ಜಂಟಿಯಾಗಿ ಆತಿಥ್ಯವಹಿಸುತ್ತಿರುವುದರಿಂದ ಈ ಮೈದಾನದಲ್ಲಿ ನಡೆಯುವ ಎರಡು ಪಂದ್ಯಗಳು ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿವೆ.
Published On - 11:06 am, Thu, 10 August 23