ಎರಡು ಟೆಸ್ಟ್, ಮೂರು ಏಕದಿನ, ಐದು ಟಿ20 ಪಂದ್ಯಗಳಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿರುವ ಟೀಂ ಇಂಡಿಯಾ (India vs West Indies) ಜುಲೈ 12 ರಿಂದ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಲಿದೆ. ಅದಕ್ಕೂ ಮುನ್ನ ಅಭ್ಯಾಸ ಪಂದ್ಯವನ್ನಾಡಲು (warm-up match) ಮುಂದಾಗಿರುವ ರೋಹಿತ್ ಬಳಗ ಇದಕ್ಕಾಗಿ ಬಾರ್ಬಡೋಸ್‌ನಲ್ಲಿ ತರಬೇತಿಯಲ್ಲಿ ನಿರತವಾಗಿದೆ. ಇದೇ ವೇಳೆ ಟೀಂ ಇಂಡಿಯಾ (Team India) ಆಟಗಾರರನ್ನು ವೆಸ್ಟ್ ಇಂಡೀಸ್ ದಂತಕಥೆ ಸರ್ ಗಾರ್ಫೀಲ್ಡ್ (ಗ್ಯಾರಿ) ಸೋಬರ್ಸ್ (Sir Garfield Sobers) ಅವರು ತಮ್ಮ ಮಡದಿಯೊಂದಿಗೆ ಬಾರ್ಬಡೋಸ್‌ನಲ್ಲಿ ಭೇಟಿ ಮಾಡಿದರು. ಇದರೊಂದಿಗೆ ತಂಡದ ಆಟಗಾರರೊಂದಿಗೆ ಉಭಯಕುಶಲೋಪರಿ ಹಂಚಿಕೊಂಡ ಗ್ಯಾರಿ ಸೋಬರ್ಸ್ ದಂಪತಿಗಳೊಂದಿಗೆ ಟೀಂ ಇಂಡಿಯಾ ಆಟಗಾರರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ಈ ಸ್ಮರಣೀಯ ಕ್ಷಣದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ರಾಹುಲ್ ದ್ರಾವಿಡ್ ಮತ್ತು ಇತರ ಆಟಗಾರರು ತಮ್ಮ ಅಭ್ಯಾಸದ ಅವಧಿಯಲ್ಲಿ ಗ್ಯಾರಿ ಸೋಬರ್ಸ್ ದಂಪತಿಗಳನ್ನು ಭೇಟಿ ಮಾಡಿದ್ದಾರೆ. ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಂಡದ ಆಟಗಾರರನ್ನು ಗ್ಯಾರಿ ಸೋಬರ್ಸ್ ದಂಪತಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಆ ಬಳಿಕ ತಂಡದ ಆಟಗಾರರು ಗ್ಯಾರಿ ಸೋಬರ್ಸ್ ದಂಪತಿಗಳೊಂದಿಗೆ ಸ್ವಲ್ಪ ಸಮಯ ಮಾತುಕತೆಯನ್ನು ನಡೆಸಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
In Barbados & in the company of greatness! ? ?#TeamIndia meet one of the greatest of the game – Sir Garfield Sobers ? ?#WIvIND pic.twitter.com/f2u1sbtRmP
— BCCI (@BCCI) July 5, 2023
IND vs WI: ಟೀಂ ಇಂಡಿಯಾದ ಅಭ್ಯಾಸ ಪಂದ್ಯಕ್ಕೆ ವೆಸ್ಟ್ ಇಂಡೀಸ್ನ 8 ಆಟಗಾರರು ಆಯ್ಕೆ
ಈ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಗ್ಯಾರಿ ಸೋಬರ್ಸ್ ಅವರನ್ನು ಕಂಡು ಆಶ್ಚರ್ಯಚಕಿತರಾದರು. ಇದಕ್ಕೆ ಕಾರಣವೂ ಇದ್ದು, 2011 ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದಾಗ ಕೊಹ್ಲಿ ತಂಡದ ಭಾಗವಾಗಿದ್ದರು. ಹಾಗೆಯೇ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಾಗಲೂ ಕೊಹ್ಲಿ ತಂಡದಲ್ಲಿದ್ದರು. ಅಲ್ಲದೆ 2017 ಮತ್ತು 2018ರ ಅವಧಿಯಲ್ಲಿ ವೃತ್ತಿ ಜೀವನದ ಉತ್ತುಂಗದಲ್ಲಿದ್ದ ಕೊಹ್ಲಿಯನ್ನು 2020 ರ ಡಿಸೆಂಬರ್ನಲ್ಲಿ ದಶಕದ ಪುರುಷ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಕೊಹ್ಲಿ ದಶಕದ ಪುರುಷ ಕ್ರಿಕೆಟಿಗನಾಗಿ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಯನ್ನು ಪಡೆದಿದ್ದರು.
Virat Kohli enquiring with Sir Garfield Sobers if he can switch allegiance from India to West Indies.
Looks like he wants to win an international trophy again before he retires. pic.twitter.com/uIIyDihAPE
— Caribbean Cricket Podcast (@CaribCricket) July 4, 2023
ಇನ್ನು ವೆಸ್ಟ್ ಇಂಡೀಸ್ ದಿಗ್ಗಜ ಸರ್ ಗ್ಯಾರಿ ಸೋಬರ್ಸ್ 1954 ರಿಂದ 1974 ರವರೆಗೆ ಕೆರಿಬಿಯನ್ ತಂಡವನ್ನು ಪ್ರತಿನಿಧಿಸಿದ್ದರು. ತಂಡದಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ಸೋಬರ್ಸ್ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಟಿಂಗ್ಗೆ ಹೆಸರುವಾಸಿಯಾಗಿದ್ದರು.
ವೆಸ್ಟ್ ಇಂಡೀಸ್ ಪರ ಒಟ್ಟು 93 ಟೆಸ್ಟ್‌ಗಳನ್ನು ಆಡಿರುವ ಸೋಬರ್ಸ್, 57.78 ರ ಸರಾಸರಿಯಲ್ಲಿ 8032 ರನ್ ಕಲೆಹಾಕಿದ್ದರೆ, 34.03 ರ ಸರಾಸರಿಯಲ್ಲಿ 235 ವಿಕೆಟ್ ಉರುಳಿಸಿದ್ದಾರೆ. ಅಲ್ಲದೆ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟಿಂಗ್ ಸರಾಸರಿಗೆ ಸಂಬಂಧಿಸಿದಂತೆ 5,000 ಕ್ಕಿಂತ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರಲ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಸೋಬರ್ಸ್ 383 ಪ್ರಥಮ ದರ್ಜೆ ಪಂದ್ಯಗಳಲ್ಲಿ 28,000 ಕ್ಕೂ ಹೆಚ್ಚು ರನ್ ಬಾರಿಸಿದ್ದು, 1000 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Wed, 5 July 23