AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಟೀಂ ಇಂಡಿಯಾದ ಅಭ್ಯಾಸ ಪಂದ್ಯಕ್ಕೆ ವೆಸ್ಟ್ ಇಂಡೀಸ್​ನ 8 ಆಟಗಾರರು ಆಯ್ಕೆ

IND vs WI: ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಬಾರ್ಬಡೋಸ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಉಭಯ ತಂಡಗಳ ನಡುವೆ ಜುಲೈ 12 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.

IND vs WI: ಟೀಂ ಇಂಡಿಯಾದ ಅಭ್ಯಾಸ ಪಂದ್ಯಕ್ಕೆ ವೆಸ್ಟ್ ಇಂಡೀಸ್​ನ 8 ಆಟಗಾರರು ಆಯ್ಕೆ
ಭಾರತ- ವೆಸ್ಟ್ ಇಂಡೀಸ್
ಪೃಥ್ವಿಶಂಕರ
|

Updated on:Jul 05, 2023 | 10:37 AM

Share

ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ (India vs West Indies) ಬಾರ್ಬಡೋಸ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಉಭಯ ತಂಡಗಳ ನಡುವೆ ಜುಲೈ 12 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಟೀಂ ಇಂಡಿಯಾ ಬಾರ್ಬಡೋಸ್‌ನಲ್ಲಿ ಅಭ್ಯಾಸ ಪಂದ್ಯವನ್ನು (warm-up match) ಆಡಲಿದೆ. ಈ ಪಂದ್ಯದಲ್ಲಿ ಭಾರತದ ಆಟಗಾರರು ಇರಲಿದ್ದಾರೆ. ಇದಲ್ಲದೆ ವೆಸ್ಟ್ ಇಂಡೀಸ್‌ನ 8 ಆಟಗಾರರು ಸಹ ಅವರೊಂದಿಗೆ ಆಡಲಿದ್ದಾರೆ. ಟೀಮ್ ಇಂಡಿಯಾ (Team India) ಅಭ್ಯಾಸ ಪಂದ್ಯ ಎರಡು ದಿನಗಳದ್ದಾಗಿದ್ದು, ಜುಲೈ 5-6 ರಂದು ಈ ಪಂದ್ಯ ನಡೆಯಲಿದೆ.

ಒಂದು ತಿಂಗಳ ವಿರಾಮದ ನಂತರ, ಟೀಂ ಇಂಡಿಯಾ ಅಂತಿಮವಾಗಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ಕೆರಿಬಿಯನ್ ತಲುಪಿದ್ದು, ಸರಣಿಗಾಗಿ ತನ್ನ ತಯಾರಿಯನ್ನು ಆರಂಭಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತದ ಐಸಿಸಿ ಡಬ್ಲ್ಯುಟಿಸಿಯ ಹೊಸ ಆವೃತ್ತಿ ಆರಂಭವಾಗುವುದರಿಂದ ಈ ಸರಣಿ ಗೆಲುವು ಭಾರತಕ್ಕೆ ಅತ್ಯವಶ್ಯಕವಾಗಿದೆ. ಹೀಗಾಗಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ 2 ದಿನಗಳ ಅಭ್ಯಾಸ ಪಂದ್ಯವನ್ನು ಆಡುತ್ತಿದೆ.

Ashes 2023: 3ನೇ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಲಿಯಾನ್ ಬದಲು ಯಾರಿಗೆ ಅವಕಾಶ?

8 ಆಟಗಾರರು ಪ್ರಥಮ ದರ್ಜೆ ಕ್ರಿಕೆಟಿಗರು

ಸದ್ಯಕ್ಕಿರುವ ಮಾಹಿತಿ ಪ್ರಕಾರ ಈ ಪಂದ್ಯವನ್ನು ಭಾರತೀಯ ಆಟಗಾರರು ಎರಡು ತಂಡಗಳನ್ನು ರಚಿಸಿಕೊಂಡು ಆಡಲಿದ್ದಾರೆ. ಎರಡೂ ತಂಡಗಳಲ್ಲಿನ ಆಟಗಾರರ ಸಂಖ್ಯೆಯನ್ನು ಪೂರ್ಣಗೊಳಿಸಲು ವೆಸ್ಟ್ ಇಂಡೀಸ್ ಮಂಡಳಿ ಟೀಂ ಇಂಡಿಯಾಕ್ಕೆ 8 ಆಟಗಾರರನ್ನು ಮಾತ್ರ ನೀಡಿದೆ. ಭಾರತದ ಅಭ್ಯಾಸ ಪಂದ್ಯಕ್ಕೆ ವೆಸ್ಟ್ ಇಂಡೀಸ್ ಬೋರ್ಡ್ ಆಯ್ಕೆ ಮಾಡಿರುವ 8 ಆಟಗಾರರು ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದು, ಇವರಲ್ಲಿ ಯಾರೂ ವೆಸ್ಟ್ ಇಂಡೀಸ್ ಪರ ಇನ್ನೂ ಕ್ರಿಕೆಟ್ ಆಡಿಲ್ಲ.

ಇನ್ನು ಭಾರತದೊಂದಿಗೆ ಅಭ್ಯಾಸ ಪಂದ್ಯವನ್ನಾಡುವ ಆ 8 ಆಟಗಾರರು ಯಾರು ಎಂಬುದನ್ನು ನೋಡುವುದಾದರೆ: ಟೆವಿನ್, ರೋಶನ್ ಪ್ರೈಮಸ್, ಕೆವಿನ್ ವಿಕ್ಹ್ಯಾಮ್, ಜಕಾರಿ ಮೆಕಾಸ್ಕಿ, ರಶಾನ್ ವೊರೆಲ್, ಚೈಮ್ ಹೋಲ್ಡರ್, ಜೈರ್ ಮ್ಯಾಕ್ಅಲಿಸ್ಟರ್, ಮೆಕೆನ್ನಿ ಕ್ಲಾರ್ಕ್.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ರುತುರಾಜ್ ಗಾಯಕ್‌ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Wed, 5 July 23

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ