AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs BAN: ಭಾರತ ತಂಡಕ್ಕೆ ಹಂಗಾಮಿ ಕೋಚ್ ನೇಮಕ

Team India: ಮಂಡಳಿಯ ಮೂವರು ಸದಸ್ಯರ ಸಲಹಾ ಸಮಿತಿಯು ಮಾಜಿ ಕ್ರಿಕೆಟರ್ ಅಮಲ್ ಮಜುಂದಾರ್ ಅವರನ್ನು ಭಾರತೀಯ ಹಿರಿಯ ಮಹಿಳಾ ತಂಡದ ಕೋಚ್ ಆಗಿ ನೇಮಿಸಲು ಬಿಸಿಸಿಐಗೆ ಶಿಫಾರಸು ಮಾಡಿದೆ.

IND vs BAN: ಭಾರತ ತಂಡಕ್ಕೆ ಹಂಗಾಮಿ ಕೋಚ್ ನೇಮಕ
ಭಾರತ ಮಹಿಳಾ ತಂಡ
ಪೃಥ್ವಿಶಂಕರ
|

Updated on: Jul 05, 2023 | 12:19 PM

Share

ಭಾರತ ಮಹಿಳಾ ಕ್ರಿಕೆಟ್ (India women’s Cricket) ತಂಡದ ಬಾಂಗ್ಲಾದೇಶ ಪ್ರವಾಸ ಜುಲೈ 9 ರಿಂದ ಆರಂಭವಾಗಲಿದೆ . ಬಿಸಿಸಿಐ (BCCI) ಈ ಪ್ರವಾಸಕ್ಕೆ ಕೆಲ ದಿನಗಳ ಹಿಂದೆ ತಂಡವನ್ನು ಸಹ ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತದ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಬಾಂಗ್ಲಾದೇಶ ಪ್ರವಾಸಕ್ಕೆ ನುಶಿನ್ ಅಲ್ ಖದೀರ್ ಅವರು ಭಾರತ ಮಹಿಳಾ ತಂಡದ ಹಂಗಾಮಿ ಕೋಚ್ (Interim Coach) ಆಗಿ ಆಯ್ಕೆಯಾಗಿದ್ದಾರೆ. ನೂಶಿನ್ ಅಲ್ ಖದೀರ್ (Nooshin Al Khadeer) ಈ ವರ್ಷ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಮಂಡಳಿಯ ಮೂವರು ಸದಸ್ಯರ ಸಲಹಾ ಸಮಿತಿಯು ಮಾಜಿ ಕ್ರಿಕೆಟರ್ ಅಮಲ್ ಮಜುಂದಾರ್ ಅವರನ್ನು ಭಾರತೀಯ ಹಿರಿಯ ಮಹಿಳಾ ತಂಡದ ಕೋಚ್ ಆಗಿ ನೇಮಿಸಲು ಬಿಸಿಸಿಐಗೆ ಶಿಫಾರಸು ಮಾಡಿದೆ. ಆದರೆ, ಈ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹೆಸರನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ಆದರೆ ಭಾರತ ತಂಡ ಶೀಘ್ರದಲ್ಲೇ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವುದರಿಂದ ನುಶಿನ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಿಸಲಾಗಿದೆ.

WPL 2023: 18 ಎಸೆತಗಳಲ್ಲಿ ಅರ್ಧಶತಕ! ಆರ್​ಸಿಬಿ ಹೈರಾಣ; ಹರ್ಮನ್‌ಪ್ರೀತ್ ದಾಖಲೆ ಉಡೀಸ್

ಬಿಸಿಸಿಐ ಮೂಲಗಳ ಪ್ರಕಾರ, ಬಾಂಗ್ಲಾದೇಶ ಪ್ರವಾಸದ ನಂತರ, ಭಾರತ ಮಹಿಳಾ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಪಂದ್ಯಗಳಿಗೆ ಕೆಲವು ತಿಂಗಳುಗಳ ಅಂತರವನ್ನು ಹೊಂದಿದೆ. ಇದರಿಂದಾಗಿ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಯ್ಕೆಗೆ ಬಿಸಿಸಿಐಗೆ ಇನ್ನೂ ಕಾಲಾವಕಾಶವಿದೆ. ಭಾರತ ತಂಡವು ಜುಲೈ 6 ರ ಗುರುವಾರ ಬಾಂಗ್ಲಾದೇಶಕ್ಕೆ ತೆರಳಲಿದ್ದು, ಎನ್​ಸಿಎ ಕೋಚ್‌ಗಳಾದ ಅಪೂರ್ವ ದೇಸಾಯಿ (ಬ್ಯಾಟಿಂಗ್), ರಾಜೀವ್ ದತ್ (ಬೌಲಿಂಗ್) ಮತ್ತು ಶುಭದೀಪ್ ಘೋಸ್ರಾ (ಫೀಲ್ಡಿಂಗ್) ಅವರು ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತೀಯ ಮಹಿಳಾ ತಂಡದ ಸಹಾಯಕ ಸಿಬ್ಬಂದಿಯಾಗಿರಲ್ಲಿದ್ದಾರೆ.

ಬಾಂಗ್ಲಾ ಪ್ರವಾಸಕ್ಕಾಗಿ ಟೀಂ ಇಂಡಿಯಾ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ, ಅಮೊನ್ಜೋತ್ ಕೌರ್,  ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ, ಮಿನ್ನು ಮಣಿ.

ಭಾರತ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ, ಅಮನ್ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್ , ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ, ಸ್ನೇಹ ರಾಣಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ