ಟೀಮ್ ಇಂಡಿಯಾದ ಮಾಜಿ ಆಟಗಾರರನ್ನು ನಿಯಂತ್ರಿಸಲು ಬಿಸಿಸಿಐ ಮಾಸ್ಟರ್​ ಪ್ಲ್ಯಾನ್..!

Team India: ಭಾರತೀಯ ಕ್ರಿಕೆಟ್​ನ ಭಾಗವಾಗಿರುವ, ಅಂದರೆ ಟೀಮ್ ಇಂಡಿಯಾ ಹಾಗೂ ದೇಶೀಯ ಟೂರ್ನಿ ಆಡುವ ಆಟಗಾರರಿಗೆ ವಿದೇಶಿ ಲೀಗ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ.

ಟೀಮ್ ಇಂಡಿಯಾದ ಮಾಜಿ ಆಟಗಾರರನ್ನು ನಿಯಂತ್ರಿಸಲು ಬಿಸಿಸಿಐ ಮಾಸ್ಟರ್​ ಪ್ಲ್ಯಾನ್..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 05, 2023 | 3:01 PM

ಟೀಮ್ ಇಂಡಿಯಾದ ಮಾಜಿ ಆಟಗಾರರು ಇದೀಗ ವಿಶ್ವದ ವಿವಿಧ ಲೀಗ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ ಸೇರಿದಂತೆ ಕೆಲ ಆಟಗಾರರು ವಿದೇಶಿ ಟಿ20 ಲೀಗ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಇದೀಗ ಝಿಂಬಾಬ್ವೆಯಲ್ಲಿ ನಡೆಯಲಿರುವ ಟಿ10 ಲೀಗ್​ನಲ್ಲೂ ಭಾರತ ಆರು ಮಾಜಿ ಕ್ರಿಕೆಟಿಗರು ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಆಟಗಾರರ ಮೇಲೆ ನಿಯಂತ್ರಣ ಸಾಧಿಸಲು ಬಿಸಿಸಿಐ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ ಎಂದು ವರದಿಯಾಗಿದೆ.

ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ನಿವೃತ್ತ ಭಾರತೀಯ ಆಟಗಾರರು ಟಿ20 ಲೀಗ್‌ಗಳಲ್ಲಿ ಭಾಗವಹಿಸುವ ಮೊದಲು ಕೂಲಿಂಗ್ ಆಫ್ ಅವಧಿಗೆ ಒಳಗಾಗಬೇಕಾಗುತ್ತದೆ. ಅಂದರೆ ನಿವೃತ್ತಿ ಬೆನ್ನಲ್ಲೇ ನಿರ್ದಿಷ್ಟ ಸಮಯದವರೆಗೆ ಯಾವುದೇ ಲೀಗ್​ನಲ್ಲಿ ಭಾಗವಹಿಸಬಾರದು. ಈ ಅವಧಿ ಮುಗಿದ ಬಳಿಕವಷ್ಟೇ ವಿದೇಶಿ ಲೀಗ್​ನಲ್ಲಿ ಕಣಕ್ಕಿಳಿಯಬಹುದು. ಆದರೆ ಈ ಕೂಲಿಂಗ್ ಆಫ್ ಅವಧಿ ಎಷ್ಟು ತಿಂಗಳುಗಳ ಕಾಲ ಹೇರಲಾಗುತ್ತದೆ ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ.

ಹಲವಾರು ಭಾರತೀಯ ಆಟಗಾರರು ತಮ್ಮ ನಿವೃತ್ತಿಯನ್ನು ಘೋಷಿಸಿದ ಬೆನ್ನಲ್ಲೇ ವಿದೇಶಿ ಲೀಗ್​ಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಐಪಿಎಲ್​ಗೆ ವಿದಾಯ ಹೇಳಿದ ಬೆನ್ನಲ್ಲೇ ಅಂಬಾಟಿ ರಾಯುಡು ಯುಎಎಸ್​ಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಗೆ ಹೆಸರು ನೀಡಿರುವುದು. ಅತ್ತ ಭಾರತೀಯ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಅದು ಐಪಿಎಲ್ ಮೇಲೆ ಪರಿಣಾಮ ಬೀರುವ ಆತಂಕವನ್ನು ಬಿಸಿಸಿಐ ಎದುರಿಸುತ್ತಿದೆ.

ಹೀಗಾಗಿ ಕೂಲಿಂಗ್ ಆಫ್ ಅವಧಿಯನ್ನು ರೂಪಿಸಿ ಭಾರತೀಯ ಆಟಗಾರರು ನಿವೃತ್ತಿ ಬೆನ್ನಲ್ಲೇ ವಿದೇಶಿ ಲೀಗ್​ಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಪ್ಲ್ಯಾನ್ ರೂಪಿಸಿದೆ. ಈ ಬಗ್ಗೆ ಬಿಸಿಸಿಐ ಮುಂದಿನ ಸಭೆಯಲ್ಲಿ ಚರ್ಚಿಸಲಿದ್ದು, ಆ ಬಳಿಕ ಹೊಸ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಭಾರತೀಯ ಆಟಗಾರರು ವಿದೇಶಿ ಲೀಗ್​ಗಳತ್ತ ಮುಖ ಮಾಡುತ್ತಿರುವುದನ್ನು ತಡೆಯಲು ಬಿಸಿಸಿಐ ಇದೀಗ ಬಿಸಿಸಿಐ ಕೂಲಿಂಗ್ ಆಫ್ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ತಿಳಿಯಲು ನಿಯಮ ಜಾರಿಗೆ ಬರುವ ತನಕ ಕಾಯಲೇಬೇಕು.

ಭಾರತೀಯರಿಗಿಲ್ಲ ಅವಕಾಶ:

ಭಾರತೀಯ ಕ್ರಿಕೆಟ್​ನ ಭಾಗವಾಗಿರುವ, ಅಂದರೆ ಟೀಮ್ ಇಂಡಿಯಾ ಹಾಗೂ ದೇಶೀಯ ತಂಡಗಳಲ್ಲಿ ಆಡುವ ಆಟಗಾರರಿಗೆ ವಿದೇಶಿ ಲೀಗ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಒಂದು ವೇಳೆ ವಿದೇಶಿ ಲೀಗ್​ಗಳಲ್ಲಿ ಭಾಗವಹಿಸಿದರೆ ಐಪಿಎಲ್​ನಲ್ಲಿ ನಿಷೇಧ ಹೇರಲಾಗುತ್ತದೆ. ಹೀಗಾಗಿ ಭಾರತೀಯ ಕ್ರಿಕೆಟಿಗರು ಯಾವುದೇ ವಿದೇಶಿ ಲೀಗ್​ಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ: ODI World Cup 2023: ಪಾಕಿಸ್ತಾನವಲ್ಲ, ಟೀಮ್ ಇಂಡಿಯಾದ ಅಸಲಿ ಎದುರಾಳಿಯನ್ನು ತಿಳಿಸಿದ ಗಂಗೂಲಿ..!

ಇನ್ನು ವಿದೇಶಿ ಲೀಗ್​ಗಳಲ್ಲಿ ಭಾಗವಹಿಸಬೇಕಿದ್ದರೆ ಭಾರತೀಯ ಕ್ರಿಕೆಟ್ ಮಂಡಳಿ ಜೊತೆಗಿನ ಎಲ್ಲಾ ಒಪ್ಪಂದಗಳನ್ನು ಕೊನೆಗೊಳಿಸಬೇಕು. ಹೀಗೆ ಒಪ್ಪಂದ ಕೊನೆಗೊಳಿಸಿದರೆ ಆ ಬಳಿಕ ಟೀಮ್ ಇಂಡಿಯಾ ಅಥವಾ ಐಪಿಎಲ್ ​ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಇದೇ ಕಾರಣದಿಂದಾಗಿ ನಿವೃತ್ತಿ ಬಳಿಕ ಟೀಮ್ ಇಂಡಿಯಾ ಆಟಗಾರರು ವಿದೇಶಿ ಲೀಗ್​ಗಳತ್ತ ಮುಖ ಮಾಡುತ್ತಿದ್ದಾರೆ. ಆದರೀಗ ಅದಕ್ಕೂ ಬ್ರೇಕ್ ಹಾಕಲು ಕೂಲಿಂಗ್ ಆಫ್ ಅವಧಿ ನಿಯಮ ಜಾರಿಗೆ ತರಲು ಬಿಸಿಸಿಐ ಮುಂದಾಗಿದೆ.

Published On - 3:00 pm, Wed, 5 July 23

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ