SA vs IND 3rd T20I: ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ: ಮಾಸ್ಟರ್ ಪ್ಲಾನ್ ರೂಪಿಸಿದ ಸೂರ್ಯ-ದ್ರಾವಿಡ್

|

Updated on: Dec 14, 2023 | 7:06 AM

India vs South Africa 3rd T20I: ಭಾರತ ಇಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಇಂದು ಭಾರತ ಸೋತರೆ, 2023 ರಲ್ಲಿ ತವರಿನಿಂದ ಹೊರಗೆ ಎರಡನೇ ಬಾರಿ ಟಿ20 ಸರಣಿ ಸೋತಂತಾಗುತ್ತದೆ.

SA vs IND 3rd T20I: ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ: ಮಾಸ್ಟರ್ ಪ್ಲಾನ್ ರೂಪಿಸಿದ ಸೂರ್ಯ-ದ್ರಾವಿಡ್
SA vs IND 3rd T20I
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು, ನಂತರ ಎರಡನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಹೀಗಾಗಿ ಮೂರನೇ ಟಿ20 ಯಲ್ಲಿ ಭಾರತ ಗೆದ್ದರಷ್ಟೆ ಸರಣಿ ಸೋಲನ್ನು ತಪ್ಪಿಸಬಹುದು. 2024 ರ ಟಿ20 ವಿಶ್ವಕಪ್‌ನ ಸಿದ್ಧತೆಗಳ ಮೇಲೆ ಕಣ್ಣಿಟ್ಟಿರುವ ರಾಹುಲ್ ದ್ರಾವಿಡ್ -ಸೂರ್ಯಕುಮಾರ್ ಯಾದವ್ ಇಂದಿನ ಪಂದ್ಯ ಗೆಲ್ಲಲು ಮಾಸ್ಟರ್ ರೂಪಿಸಿರುವುದು ಖಚಿತ.

ಜೊಹಾನ್ಸ್‌ಬರ್ಗ್‌ನಲ್ಲಿ ಭಾರತ ಸೋತರೆ, 2023 ರಲ್ಲಿ ತವರಿನಿಂದ ಹೊರಗೆ ಎರಡನೇ ಬಾರಿ ಟಿ20 ಸರಣಿ ಸೋತಂತಾಗುತ್ತದೆ. ಟೀಮ್ ಇಂಡಿಯಾ ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-3 ಅಂತರದಲ್ಲಿ ಸೋತಿತ್ತು. 2017 ರಿಂದ, ಭಾರತವು ಮೂರು ಟಿ20I ಸರಣಿಗಳನ್ನು ವಿದೇಶದಲ್ಲಿ ಕಳೆದುಕೊಂಡಿದೆ. ಇದೀಗ ಗೆಲ್ಲಲೇ ಬೇಕಾದ ಪಂದ್ಯಕ್ಕೆ ಬದಲಾವಣೆ ಖಚಿತ ಎನ್ನಲಾಗಿದೆ.

IND vs SA 2nd T20I: ರೋಹಿತ್-ರಹಾನೆಯ ಕೆಟ್ಟ ದಾಖಲೆ ಪಟ್ಟಿಗೆ ಗಿಲ್-ಜೈಸ್ವಾಲ್

ಇದನ್ನೂ ಓದಿ
IND vs SA: ನಿರ್ಣಾಯಕ ಪಂದ್ಯ: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ
ಎಡ-ಬಲ ಕಾಂಬಿನೇಷನ್: ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್ ಪ್ಲ್ಯಾನ್
IND A vs SA A: ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಪ್ರದೋಶ್
ಸರಣಿಗಳಲ್ಲಿ ಹೀರೋ-ಐಸಿಸಿ ಟೂರ್ನಿಯಲ್ಲಿ ಝೀರೋ: ಇದು ಟೀಮ್ ಇಂಡಿಯಾ

ಕಳೆದ ಪಂದ್ಯದಲ್ಲಿ ಭಾರತವು ಬೌಲಿಂಗ್ ವಿಭಾಗದಲ್ಲಿ ಎಡವಿತ್ತು. ಬ್ಯಾಟಿಂಗ್​ನಲ್ಲಿ ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ಬಿಟ್ಟರೆ ಉಳಿದವರಿಂದ ಉತ್ತಮ ಆಟ ಬರಲಿಲ್ಲ. ಇಂದಿನ ಪಂದ್ಯಕ್ಕೆ ತಿಲಕ್ ವರ್ಮಾ ಬದಲಿಗೆ ಶ್ರೇಯಸ್ ಅಯ್ಯರ್ ಮತ್ತು ಕುಲ್ದೀಪ್ ಯಾದವ್ ಬದಲಿಗೆ ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಜಿತೇಶ್ ಶರ್ಮಾ ಜಾಗಕ್ಕೆ ಇಶಾನ್ ಕಿಶನ್ ಬಂದರೆ ಅಚ್ಚರಿ ಪಡಬೇಕಿಲ್ಲ.

ಇತ್ತ ದಕ್ಷಿಣ ಆಫ್ರಿಕಾ ಕೂಡ ಇದೇ ದೋಣಿಯಲ್ಲಿದೆ. ಟಿ20 ವಿಶ್ವಕಪ್‌ಗೆ ತಯಾರಾಗಲು ಹರಿಣಗಳಿ ಪಡೆಗೆ ಕೇವಲ ನಾಲ್ಕು ಟಿ20 ಪಂದ್ಯಗಳು ಇವೆಯಷ್ಟೆ. ಆಫ್ರಿಕಾ ಪರ ರೀಝ ಹೆಂಡ್ರಿಕ್ಸ್ ಹಾಗೂ ಮ್ಯೂಥ್ಯೂ ಬ್ರೀಟ್ಝ್​ಕೆ ಸ್ಪೋಟಕ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ನಾಯಕ ಐಡೆನ್ ಮಾರ್ಕ್ರಾಮ್ ಕೂಡ ನೆರವಾಗುತ್ತಿದ್ದಾರೆ. ಬೌಲಿಂಗ್​ನಲ್ಲೂ ಆಫ್ರಿಕಾ ಮಾರಕವಾಗಿದ್ದು, ಸ್ಪಿನ್ನರ್​ಗಳಿಂದ ಉತ್ತಮ ಪ್ರದರ್ಶನ ಬರುತ್ತಿದೆ.

ವೆದರ್‌ಕಾಮ್ ಒದಗಿಸಿದ ಹವಾಮಾನ ಮುನ್ಸೂಚನೆಯ ಪ್ರಕಾರ, ಭಾನುವಾರದಂದು ಜೋಹಾನ್ಸ್‌ಬರ್ಗ್‌ನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಪಂದ್ಯದುದ್ದಕ್ಕೂ ಮಳೆಯಾಗುವ ಸಾಧ್ಯತೆ ಕಡಿಮೆಯಾದರೂ ಮೋಡ ಕವಿದ ವಾತಾವರಣವಿರುತ್ತದೆ.

ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಪಂದ್ಯ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದ ಪಿಚ್‌ನಲ್ಲಿ ನಡೆಯಲಿದೆ. ವಾಂಡರರ್ಸ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ನಿರಂತರ ಮಳೆಯಿಂದಾಗಿ, ಪಿಚ್‌ನಲ್ಲಿನ ತೇವಾಂಶವು ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಟಿ20 ಸ್ವರೂಪದಲ್ಲಿ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದ ಪಿಚ್‌ನಲ್ಲಿ ದೊಡ್ಡ ಸ್ಕೋರ್‌ಗಳನ್ನು ಮಾಡಬಹುದು. ಇಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 260 ರನ್ ಗಳಿಸಿರುವುದು ಗರಿಷ್ಠ ಸ್ಕೋರ್ ಆಗಿದೆ. ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 171 ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 145 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ