ಟೀಮ್ ಇಂಡಿಯಾ (Team India) ಟಿ20 ವಿಶ್ವಕಪ್‌ನಲ್ಲಿ (T20 World Cup) ತನ್ನ ಕೊನೇಯ ಲೀಗ್ ಪಂದ್ಯ ಆಡುವುದಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದಾಗಿದೆ. ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ (New Zealand vs Afghanistan) ತಂಡ ಗೆಲುವು ಸಾಧಿಸುವ ಮೂಲಕ ಭಾರತದ ಸೆಮಿ ಫೈನಲ್ ಕನಸು ಭಗ್ನಗೊಂಡಿತು. ಇದರ ನಡುವೆ ಇಂದು ಭಾರತ ತಂಡ ನಮೀಬಿಯಾ (India vs Namibia) ವಿರುದ್ಧ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಭಾರತ ಪರ ವಿರಾಟ್ ಕೊಹ್ಲಿ (Virat Kohli) ನಾಯಕನಾಗಿ ಆಡುತ್ತಿರುವ ಕೊನೇ ಟಿ20 ಪಂದ್ಯ ಇದಾಗಿದೆ. ಉಭಯ ತಂಡಗಳಿಗು ಇದೊಂದು ಔಪಚಾರಿಕ ಪಂದ್ಯ. ಹೀಗಾಗಿ ಈ ಪಂದ್ಯಕ್ಕೆ ಟೀಮ್ ಇಂಡಿಯಾದ (Team India) ಪ್ಲೇಯಿಂಗ್ ಇಲೆವೆನ್ನಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ. ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಇತರೆ ಆಟಗಾರರಿಗೆ ಅವಕಾಶ (India Playing XI vs Nambia) ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು, ಭಾರತದ ಪ್ರಮುಖ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡುವ ಸಂಭವವಿದೆ. ಹೀಗಾಗಿ ಓಪನರ್ಗಳಾಗಿ ಭಾರತ ಪರ ಕೆಎಲ್ ರಾಹುಲ್ ಜೊತೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಬಹುದು. ವಿರಾಟ್ ಕೊಹ್ಲಿಗೆ ಇದು ನಾಯಕನಾಗಿ ಕೊನೇಯ ಪಂದ್ಯ ಆಗಿರುವುದರಿಂದ ಮೂರನೇ ಕ್ರಮಾಂಕದಲ್ಲೇ ಆಡಲಿದ್ದಾರೆ. 4ನೇ ಸ್ಥಾನದಲ್ಲಿ ಸೂರ್ಯಕುಮಾರ್ ಕಣಕ್ಕಿಳಿದರೆ ನಂತರದ ಸ್ಥಾನದಲ್ಲಿ ರಿಷಭ್ ಪಂತ್ ಬ್ಯಾಟ್ ಬೀಸಲಿದ್ದಾರೆ.
ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಇದ್ದರೆ ರವೀಂದ್ರ ಜಡೇಜಾ ಬದಲು ಶಾರ್ದೂಲ್ ಠಾಕೂರ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಅಂತೆಯೆ ಮೊಹಮ್ಮದ್ ಶಮಿ ಬದಲು ರಾಹುಲ್ ಚಹಾರ್, ಜಸ್ಪ್ರೀತ್ ಬುಮ್ರಾ ಬದಲು ಭುವನೇಶ್ವರ್ ಕುಮಾರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಉಳಿದಂತೆ ಆರ್. ಅಶ್ವಿನ್ ಮತ್ತು ವರುಣ್ ಚಕ್ರವರ್ತಿ ತಂಡದಲ್ಲಿ ಇರಲಿದ್ದಾರೆ.
2003ರ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಬಾರಿ ನಮೀಬಿಯ ತಂಡವನ್ನು ಎದುರಿಸಿದ್ದ ಭಾರತಕ್ಕೆ ಇದು ಟಿ20ಯಲ್ಲಿ ಮೊದಲ ಮುಖಾಮುಖಿ ಆಗಿದೆ. ಆಡಿದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲೇ ನಮೀಬಿಯಾ ಅರ್ಹತಾ ಸುತ್ತಿನಿಂದ ಸೂಪರ್ 12 ಹಂತಕ್ಕೆ ಮೊತ್ತ ಮೊದಲ ಬಾರಿ ಅರ್ಹತೆ ಪಡೆದು ಗಮನಾರ್ಹ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋತರೂ ಕಿವೀಸ್ ಬೌಲರ್‌ಗಳನ್ನು ಬೆಂಡೆತ್ತಿ ಗಮನ ಸೆಳೆದಿತ್ತು. ನಮಿಬಿಯಾ ಬೌಲರ್‌ಗಳ ಪ್ರದರ್ಶನವೂ ಉತ್ತಮವಾಗಿದ್ದು, ಭಾರತ ತಂಡ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.
ಪಿಚ್ ಹೇಗಿದೆ?:
ಭಾರತ ಟೂರ್ನಿಯಿಂದ ಹೊರಬೀಳಲು ಪ್ರಮುಖ ಕಾರಣ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವುದು. ಅದು ಇದೇ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್ನಲ್ಲಿ. ಇಲ್ಲಿ ವಿರಾಟ್ ಕೊಹ್ಲಿ ಮೊದಲ ಎರಡೂ ಪಂದ್ಯಗಳಲ್ಲಿ ಟಾಸ್ ಸೋತು ಬ್ಯಾಟ್ ಮಾಡಿ ಸೋತಿತ್ತು. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಕಡೆಗೆ ಗಮನ ನೀಡಲಿವೆ. 2ನೇ ಇನಿಂಗ್ಸ್ ವೇಳೆ ಕ್ರೀಡಾಂಗಣದ ಹುಲ್ಲುಹಾಸಿನ ಮೇಲೆ ತೇವಾಂಶ ಹೆಚ್ಚಾಗುವುದರಿಂದ ಬೌಲರ್‌ಗಳಿಗೆ ಚೆಂಡನ್ನು ಹಿಡಿಯಲು ಕಷ್ಟವಾಗುತ್ತದೆ. ಹೀಗಾಗಿ ರನ್ ಚೇಸಿಂಗ್ ಇಲ್ಲಿ ಅತ್ಯುತ್ತಮ ಆಯ್ಕೆ.
Devon Conway: ನ್ಯೂಜಿಲೆಂಡ್ನಿಂದ ನಡೆಯಿತಾ ಮೋಸದಾಟ?: ಔಟ್ ಆದರೂ ಕ್ರೀಸ್ನಿಂದ ಕದಲದ ಡೆವೋನ್ ಕಾನ್ವೇ
(India T20 World cup Predicted Playing XI of Virat Kohli lead India for T20 World Cup 2021 Match Against Namibia)