AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohan Singh Death: ಅಫ್ಘಾನ್ ನ್ಯೂಜಿಲೆಂಡ್ ಪಂದ್ಯಕ್ಕೂ ಮುನ್ನ ಅಬುಧಾಬಿ ಪಿಚ್ ಕ್ಯೂರೇಟರ್ ಮೋಹನ್‌ ಸಿಂಗ್‌ ನಿಗೂಢ ಸಾವು

T20 World Cup: ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಪಂದ್ಯ ಆರಂಭಕ್ಕೂ ಮುನ್ನ ಮೋಹನ್ ಸಿಂಗ್ ನಿಧನರಾಗಿರುವುದು ನಿಜ. ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾದ ಬಳಿಕ ಪೂರ್ಣ ವಿವರ ನೀಡಲಾಗುತ್ತದೆ ಎಂದು ಯುಎಇ ಕ್ರಿಕೆಟ್ ಸಂಸ್ಥೆಯ ಮೂಲವೊಂದು ಹೇಳಿದೆ.

Mohan Singh Death: ಅಫ್ಘಾನ್ ನ್ಯೂಜಿಲೆಂಡ್ ಪಂದ್ಯಕ್ಕೂ ಮುನ್ನ ಅಬುಧಾಬಿ ಪಿಚ್ ಕ್ಯೂರೇಟರ್ ಮೋಹನ್‌ ಸಿಂಗ್‌ ನಿಗೂಢ ಸಾವು
Mohan Singh, Abu Dhabi Chief Curator
TV9 Web
| Edited By: |

Updated on: Nov 08, 2021 | 9:05 AM

Share

ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ (New Zealand vs Afghanistan) ನಡುವಿನ ಭಾನುವಾರದ ಟಿ20 ವಿಶ್ವಕಪ್ (T20 World Cup) ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನ ಮುಖ್ಯ ಪಿಚ್ ಕ್ಯುರೇಟರ್ (Abu Dhabi Chief Curator) ಭಾರತ ಮೂಲದ ಮೋಹನ್ ಸಿಂಗ್ (Mohan Singh) ನಿಗೂಢವಾಗಿ ನಿಧನ ಹೊಂದಿದ್ದಾರೆ. ಯುನೈಟೆಡ್‌ ಅರಬ್ ಎಮಿರೇಟ್ಸ್‌ (UAE) ಕ್ರಿಕೆಟ್ ಮಂಡಳಿಯ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. ಆದರೆ, ಸಾವಿನ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಯುಎಇ ಕ್ರಿಕೆಟ್‌ ಮೂಲಗಳ ಪ್ರಕಾರ ಮೋಹನ್‌ ಸಿಂಗ್‌ ಖಿನ್ನತೆಯಿಂದ ಆತ್ಮಹತ್ಯೆ (Mohan Singh Death) ಮಾಡಿಕೊಂಡಿರಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.

“ಮೋಹನ್ ಸಿಂಗ್ ನಿಧನರಾಗಿರುವುದು ನಿಜ. ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾದ ಬಳಿಕ ಪೂರ್ಣ ವಿವರ ನೀಡಲಾಗುತ್ತದೆ. ಅವರು ಸಾವನ್ನಪ್ಪಿರುವುದು ಬಹಳ ದುರದೃಷ್ಟಕರ” ಎಂದು ಯುಎಇ ಕ್ರಿಕೆಟ್ ಸಂಸ್ಥೆಯ ಮೂಲವೊಂದು ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ಕೆಲ ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದ 45 ವರ್ಷದ ಮೋಹನ್ ಸಿಂಗ್, ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಣ ಪಂದ್ಯ ಆರಂಭಕ್ಕೂ ಮುನ್ನ ಬೆಳಗ್ಗೆ ಪಿಚ್ ಪರಿಶೀಲಿಸಿ ಮರಳಿದ ಬಳಿಕ ತಮ್ಮ ಕೋಣೆಗೆ ಮರಳಿ ನೇಣು ಬಿಗಿದುಕೊಂಡಿದ್ದರು ಎನ್ನಲಾಗಿದೆ. ಭಾರತದ ಉತ್ತರಾಖಂಡದವರಾದ ಮೋಹನ್ ಸಿಂಗ್ 2000ದ ಆರಂಭದಲ್ಲಿ ಯುಎಇಗೆ ವಲಸೆ ಹೋಗಿದ್ದರು. ಅದಕ್ಕೆ ಮುನ್ನ ಮೊಹಾಲಿಯಲ್ಲಿ ಬಿಸಿಸಿಐ ಮಾಜಿ ಮುಖ್ಯ ಕ್ಯುರೇಟರ್ ದಲ್ಜಿತ್ ಸಿಂಗ್ ಗರಡಿಯಲ್ಲಿ ಕೆಲಸ ನಿರ್ವಹಿಸಿದ್ದರು.

“ಮುಖ್ಯ ಕ್ಯುರೇಟರ್ ಮೋಹನ್ ಸಿಂಗ್ ನಿಧನರಾದರೆಂದು ತಿಳಿಸಲು ಬಹಳ ದುಃಖವಾಗುತ್ತಿದೆ. ಅಬುಧಾಬಿ ಕ್ರಿಕೆಟ್ ಜೊತೆ 15 ವರ್ಷಗಳಿಂದ ಅವರು ಕೆಲಸ ಮಾಡಿದ್ದಾರೆ. ಈ ಗ್ರೌಂಡ್​ನ ಯಶಸ್ಸಿನಲ್ಲಿ ಅವರ ಪಾತ್ರ ಬಹಳ ಮುಖ್ಯ ಇದೆ. ಮೋಹನ್ ಹಾಗೂ ಅವರ ಕೊಡುಗೆಗಳನ್ನ ಸ್ಮರಿಸಿ ಅವರಿಗೆ ಮುಂದಿನ ದಿನಗಳಲ್ಲಿ ಗೌರವ ಸಲ್ಲಿಸಲಾಗುವುದು. ಮೋಹನ್ ಕುಟುಂಬಕ್ಕೆ ನಮ್ಮ ಸಂತಾಪ ಇದೆ. ಈ ಸಂಕಷ್ಟದ ಸಂದರ್ಭದಲ್ಲಿ ಮೋಹನ್ ಕುಟುಂಬದ ಖಾಸಗಿತನವನ್ನು ಗೌರವಿಸಬೇಕೆಂದು ಮಾಧ್ಯಮದವರಿಗೆ ಮನವಿ ಮಾಡುತ್ತೇವೆ” ಎಂದು ಅಬುಧಾಬಿ ಕ್ರಿಕೆಟ್ ಸಂಸ್ಥೆ ಹೇಳಿಕೆ ನೀಡಿದೆ.

ಮೋಹನ್ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅಬುಧಾಬಿ ಕ್ರಿಕೆಟ್ ಸಂಸ್ಥೆ ಮತ್ತು ಐಸಿಸಿ ಸಂತಾಪ ಸೂಚಿಸಿದ್ದರೂ, ಮೋಹನ್ ಸಾವಿಗೆ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲ. ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತರಬೇತಿ ಪಡೆದು ಅಲ್ಲಿಯೇ ದಲಜೀತ್ ಸಿಂಗ್ ಗರಡಿಯಲ್ಲಿ ಗ್ರೌಂಡ್ ಸೂಪರ್​ವೈಸರ್ ಆಗಿ ಬಹಳ ವರ್ಷ ಕೆಲಸ ಮಾಡಿದ್ದರು. ‘ಮೋಹನ್ ಸಿಂಗ್ ಪ್ರತಿಭಾನ್ವಿತ ಮತ್ತು ಕಠಿಣ ಪರಿಶ್ರಮಿಯಾಗಿದ್ದರು. ಉತ್ತರಾಖಂಡದ ಗಹ್ವಾಲ್‌ನವರಾದ ಯುಎಇಗೆ ಹೋದ ಬಳಿಕವೂ ಪ್ರತಿ ಬಾರಿ ತವರಿಗೆ ಬಂದಾಗ ನನ್ನನ್ನು ಭೇಟಿಯಾಗುತ್ತಿದ್ದರು. ಆದರೆ ಇತ್ತೀಚೆಗೆ ಅಷ್ಟಾಗಿ ತವರಿಗೆ ಬಂದಿರಲಿಲ್ಲ ಎಂದು ದಲ್ಜಿತ್ ಸಿಂಗ್ ಸಂತಾಪ ಸೂಚಿಸಿದರು.

Virat Kohli: ಭಾರತ vs ನಮೀಬಿಯಾ ಔಪಚಾರಿಕ ಪಂದ್ಯ: ನಾಯಕನಾಗಿ ಇಂದು ವಿರಾಟ್ ಕೊಹ್ಲಿ ಯುಗ ಅಂತ್ಯ

Semi Final, T20 World Cup: ಟಿ20 ವಿಶ್ವಕಪ್ ಸೆಮಿ ಫೈನಲ್​ಗೆ ವೇದಿಕೆ ಸಜ್ಜು: ಮೊದಲ ಪಂದ್ಯದಲ್ಲಿ ಯಾವ ತಂಡ ಮುಖಾಮುಖಿ?

(Mohan Singh The Abu Dhabi Chief Curator passes away ahead of New Zealand vs Afghanistan T20 World Cup Match)

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್