Semi Final, T20 World Cup: ಟಿ20 ವಿಶ್ವಕಪ್ ಸೆಮಿ ಫೈನಲ್ಗೆ ವೇದಿಕೆ ಸಜ್ಜು: ಮೊದಲ ಪಂದ್ಯದಲ್ಲಿ ಯಾವ ತಂಡ ಮುಖಾಮುಖಿ?
ENG vs NZ, PAK vs AUS, T20 World Cup: ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಒಂದನೇ ಗುಂಪಿನ ಅಗ್ರಸ್ಥಾನಿಯಾಗಿರುವ ಇಂಗ್ಲೆಂಡ್‌ಗೆ ನ್ಯೂಜಿಲೆಂಡ್‌ನ ಸವಾಲು ಎದುರಾಗಲಿದೆ. ಹಾಗೆಯೇ ಎರಡನೇ ಗುಂಪಿನ ಅಗ್ರಸ್ಥಾನಿಯಾಗಿರುವ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾದ ಸವಾಲು ಎದುರಾಗಲಿದೆ.
ಟಿ20 ವಿಶ್ವಕಪ್ ಟೂರ್ನಿ (T20 World Cup) ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದು ಭಾರತ ಹಾಗೂ ನಮೀಬಿಯಾ (India vs Namibia) ನಡುವೆ ಸೂಪರ್ 12 ಹಂತದ (Super 12) ಕೊನೇಯ ಪಂದ್ಯ ನಡೆಯಲಿದೆ. ಆದರೆ, ಇದಕ್ಕೂ ಮುನ್ನವೇ ಸೆಮಿ ಫೈನಲ್ಗೆ (Semi Final) ನಾಲ್ಕು ತಂಡಗಳು ಲಗ್ಗೆಯಿಟ್ಟಾಗಿವೆ. ಗ್ರೂಪ್ 1 ರಿಂದ ಇಂಗ್ಲೆಂಡ್ (England) ಹಾಗೂ ಆಸ್ಟ್ರೇಲಿಯಾ (Australia) ತಂಡಗಳು ಸೆಮೀಸ್ಗೆ ತೇರ್ಗಡೆಹೊಂದಿದ್ದರೆ, ಗ್ರೂಪ್ 2 ರಿಂದ ಪಾಕಿಸ್ತಾನ (Pakistan) ಹಾಗೂ ನ್ಯೂಜಿಲೆಂಡ್ (New Zealand) ಅಂತಿಮ ನಾಲ್ಕರ ಘಟ್ಟವನ್ನು ತಲುಪಿದೆ. ಭಾನುವಾರ ನಡೆದ ಅಫ್ಘಾನಿಸ್ತಾನ (New Zealand vs Afghanistan) ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕಿವೀಸ್ ಕೊನೆಯ ತಂಡವಾಗಿ ಸೆಮೀಸ್ಗೆ ಪ್ರವೇಶ ಪಡೆಯಿತು. ಈ ಮೂಲಕ ಟೀಮ್ ಇಂಡಿಯಾ (Team India) ಅಧಿಕೃತವಾಗಿ ಟೂರ್ನಮೆಂಟ್ನಿಂದ ಹೊರಬಿದ್ದಿದೆ.
ಸೆಮಿಫೈನಲ್‌ನಲ್ಲಿ ಒಂದನೇ ಗುಂಪಿನ ಅಗ್ರಸ್ಥಾನಿಯಾಗಿರುವ ಇಂಗ್ಲೆಂಡ್‌ಗೆ ನ್ಯೂಜಿಲೆಂಡ್‌ನ ಸವಾಲು ಎದುರಾಗಲಿದೆ. ಹಾಗೆಯೇ ಎರಡನೇ ಗುಂಪಿನ ಅಗ್ರಸ್ಥಾನಿಯಾಗಿರುವ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾದ ಸವಾಲು ಎದುರಾಗಲಿದೆ.
ಸೆಮಿ ಫೈನಲ್ ವೇಳಾಪಟ್ಟಿ ಇಂತಿದೆ:
1) ಮೊದಲ ಸೆಮಿ ಫೈನಲ್: ಇಂಗ್ಲೆಂಡ್ vs ನ್ಯೂಜಿಲೆಂಡ್
ದಿನ: ನ. 10, ಸ್ಥಳ ಅಬುಧಾಬಿ
2) ಎರಡನೇ ಸೆಮಿ ಫೈನಲ್: ಪಾಕಿಸ್ತಾನ್ vs ಆಸ್ಟ್ರೇಲಿಯಾ.
ದಿನ: ನ. 11, ಸ್ಥಳ: ದುಬೈ
ಈ ಎರಡೂ ಪಂದ್ಯಗಳು ಸಂಜೆ 7:30ಕ್ಕೆ ಆರಂಭಗೊಳ್ಳುತ್ತವೆ.
ಸೂಪರ್-12 ಹಂತದಿಂದ ನಿರ್ಗಮಿಸಿದ ತಂಡಗಳು:
ಗ್ರೂಪ್ 1: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ
ಗ್ರೂಪ್ 2: ಭಾರತ, ಅಫ್ಘಾನಿಸ್ತಾನ, ನಮೀಬಿಯಾ, ಸ್ಕಾಟ್ಲೆಂಡ್
ಭಾರತದ ಕನಸು ನುಚ್ಚುನೂರು:
ಭಾರತ ತಂಡಕ್ಕೆ ಸೆಮಿಫೈನಲ್ ಹಂತಕ್ಕೇರಲು ಇದ್ದ ಕೊನೆಯ ಆಶಾಕಿರಣ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಣ ಪಂದ್ಯವಾಗಿತ್ತು. ಆದರೆ, ಇದರಲ್ಲಿ ಕಿವೀಸ್ ಗೆಲ್ಲುವ ಮೂಲಕ ಕೊಹ್ಲಿ ಪಡೆಯ ಕನಸು ಬತ್ತಿಹೋಗಿದೆ. ಟೀಮ್ ಇಂಡಿಯಾ 7ನೇ ಆವೃತ್ತಿಯ ಟಿ20 ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ನ್ಯೂಜಿಲೆಂಡ್ ತಂಡ ಸೂಪರ್-12ರಲ್ಲಿ ಗ್ರೂಪ್-2ರ 2ನೇ ತಂಡವಾಗಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್‌ಗಳಿಂದ ಪರಾಭವಗೊಳಿಸುವ ಮೂಲಕ ನ್ಯೂಜಿಲೆಂಡ್ ತಂಡ ಈ ಸಾಧನೆ ಮಾಡಿದೆ.
ಭಾರತ vs ನಮೀಬಿಯಾ:
ಸೆಮಿಫೈನಲ್ ಪ್ರವೇಶಿಸುವ ತಂಡಗಳು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯ ಕೇವಲ ಕಾಟಾಚಾರಕ್ಕಷ್ಟೆ. ಅಫ್ಘಾನಿಸ್ತಾನ್ ವಿರುದ್ಧ ನ್ಯೂಜಿಲೆಂಡ್ ಸೋತಿದ್ದರೆ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯಕ್ಕೆ ಕುತೂಹಲ ಉಳಿದುಕೊಳ್ಳುತ್ತಿತ್ತು. ಭಾರತಕ್ಕೆ ಸೆಮಿಫೈನಲ್ ತಲುಪುವ ಅವಕಾಶ ಸಿಗುತ್ತಿತ್ತು. ಆದರೆ, ಭಾರತ ತನ್ನ ಮೊದಲೆರಡು ಪಂದ್ಯ ಸೋತಿದ್ದು ಅದಕ್ಕೆ ಮುಳುವಾಗಿ ಪರಿಣಮಿಸಿತು.
T20 World Cup: ಟಿ20 ವಿಶ್ವಕಪ್‌ನಿಂದ ಔಟ್; ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಿರಾಸೆ; ಭಾನುವಾರದ ಅಭ್ಯಾಸಕ್ಕೂ ಬ್ರೇಕ್!
(India Knocked Out Of T20 World Cup and semi-final matches confirmed Here is the schedule of Semi Final Matches)