Virat Kohli: ಭಾರತ vs ನಮೀಬಿಯಾ ಔಪಚಾರಿಕ ಪಂದ್ಯ: ನಾಯಕನಾಗಿ ಇಂದು ವಿರಾಟ್ ಕೊಹ್ಲಿ ಯುಗ ಅಂತ್ಯ

India vs Namibia, T20 World Cup: ಭಾರತಕ್ಕೆ ನಮೀಬಿಯಾ ವಿರುದ್ಧದ ಪಂದ್ಯ ಗೆದ್ದರೂ ಸೋತರು ಯಾವುದೇ ಪ್ರಯೋಜನ ತಂದುಕೊಡುವುದಿಲ್ಲ. ಹೀಗಾಗಿ ಪ್ರಮುಖರಿಗೆ ವಿಶ್ರಾಂತಿ ನೀಡಿ ಕಣಕ್ಕಿಳಿಯದ ಆಟಗಾರರಿಗೆ ಅವಕಾಶ ನೀಡುವ ಸಂಭವವಿದೆ.

Virat Kohli: ಭಾರತ vs ನಮೀಬಿಯಾ ಔಪಚಾರಿಕ ಪಂದ್ಯ: ನಾಯಕನಾಗಿ ಇಂದು ವಿರಾಟ್ ಕೊಹ್ಲಿ ಯುಗ ಅಂತ್ಯ
Virat Kohli India vs Namibia
Follow us
TV9 Web
| Updated By: Vinay Bhat

Updated on: Nov 08, 2021 | 8:22 AM

ಐಸಿಸಿ ಟಿ20 ವಿಶ್ವಕಪ್​ನ (ICC T20 World Cup 2021) ಆರಂಭದ ಎರಡು ಪಂದ್ಯಗಳಲ್ಲಿ ಸೋಲುಂಡ ಪರಿಣಾಮ ಭಾರತ (India) ಇಂದು ಟೂರ್ನಿಯಿಂದಲೇ ಹೊರಬಿದ್ದಿದೆ. ಹೀಗಿದ್ದರೂ ಟೀಮ್ ಇಂಡಿಯಾ ಇಂದು ನಮೀಬಿಯಾ (India vs Namibia) ವಿರುದ್ಧ ಔಪಚಾರಿಕ ಪಂದ್ಯವಾಡಲಿದೆ. ಇದು ಸೂಪರ್ 12 ಹಂತದ ಕೊನೆಯ ಪಂದ್ಯವಾಗಿದ್ದು, ಈ ಮೂಲಕ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಲಿದೆ. ಇದರ ಜೊತೆಗೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿಯ (Virat Kohli) ಯುಗ ಅಂತ್ಯಗೊಳ್ಳಲಿದೆ. ಕೋಚ್ ರವಿಶಾಸ್ತ್ರಿ (Ravi Shastri) ಯುಗವೂ ಮುಕ್ತಾಯ ಕಾಣಲಿದೆ. ಯಾವುದೇ ಟ್ರೋಫಿ ಇಲ್ಲದೆ ನಾಯಕತ್ವ ತ್ಯಜಿಸುತ್ತಿರುವುದು ವಿರಾಟ್ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಕನಿಷ್ಠ ನಮೀಬಿಯಾ ವಿರುದ್ಧ ಜಯ ಸಾಧಿಸಿ ಕೊಹ್ಲಿಗೆ ಗೆಲುವಿನ ಅರ್ಪಣೆ ಮಾಡಲು ಟೀಮ್ ಇಂಡಿಯಾ (Team India) ಯೋಜನೆ ರೂಪಿಸಿಕೊಂಡಿದೆ.

ಭಾರತಕ್ಕೆ ಈ ಪಂದ್ಯ ಗೆದ್ದರೂ ಸೋತರು ಯಾವುದೇ ಪ್ರಯೋಜನ ತಂದುಕೊಡುವುದಿಲ್ಲ. ಹೀಗಾಗಿ ಪ್ರಮುಖರಿಗೆ ವಿಶ್ರಾಂತಿ ನೀಡಿ ಕಣಕ್ಕಿಳಿಯದ ಆಟಗಾರರಿಗೆ ಅವಕಾಶ ನೀಡುವ ಸಂಭವವಿದೆ. ಇಶಾನ್ ಕಿಶನ್, ರಾಹುಲ್ ಚಹಾರ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

ಇತ್ತ ನಮೀಬಿಯಾ ತಂಡ ಅರ್ಹತಾ ಸುತ್ತಿನಿಂದ ಸೂಪರ್‌ 12 ಹಂತಕ್ಕೆ ಮೊತ್ತ ಮೊದಲ ಬಾರಿ ಅರ್ಹತೆ ಪಡೆದು ಗಮನಾರ್ಹ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಸೋತರೂ ಕಿವೀಸ್‌ ಬೌಲರ್‌ಗಳನ್ನು ಬೆಂಡೆತ್ತಿ ಗಮನ ಸೆಳೆದಿತ್ತು. ನಮೀಬಿಯಾ ಬೌಲರ್‌ಗಳ ಪ್ರದರ್ಶನವೂ ಉತ್ತಮವಾಗಿದ್ದು, ಭಾರತ ತಂಡ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದೆ.

ವಿರಾಟ್ ನಾಯಕತ್ವದ ಯುಗ ಮುಕ್ತಾಯ:

ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್​ನ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಈಗಾಗಲೆ ಘೋಷಿಸಿರುವುದರಿಂದ ನಮೀಬಿಯ ವಿರುದ್ಧದ ಪಂದ್ಯ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಇದು ಕೊನೆಯ ಟಿ20 ಪಂದ್ಯವಾಗಿರಲಿದೆ. ಕೊಹ್ಲಿ ನಾಯಕತ್ವದಲ್ಲಿ ಇದುವರೆಗೆ ಆಡಿದ 49 ಟಿ20 ಪಂದ್ಯಗಳಲ್ಲಿ ಭಾರತ 29ರಲ್ಲಿ ಗೆದ್ದಿದ್ದು, 16ರಲ್ಲಿ ಸೋತಿದೆ. 2 ಟೈ ಆಗಿದ್ದರೆ, 2 ಪಂದ್ಯ ರದ್ದುಗೊಂಡಿದೆ. ಅಲ್ಲದೆ ಕೊಹ್ಲಿ ಏಕದಿನ ನಾಯಕತ್ವಕ್ಕೂ ಗುಡ್​ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದ್ದು ಒಂದು ವೇಳೆ ಹಾಗಾದಲ್ಲಿ ಇದು ಅವರ ನಾಯಕತ್ವದ ಕೊನೇ ಸೀಮಿತ ಓವರ್ ಪಂದ್ಯವಾಗಿರಲಿದೆ.

ರವಿಶಾಸ್ತ್ರಿ ಯುಗವೂ ಇಂದಿಗೆ ಅಂತ್ಯ:

2014ರಲ್ಲಿ ಟೀಮ್ ಇಂಡಿಯಾದ ನಿರ್ದೇಶಕರಾಗಿ ನೇಮಕಗೊಂಡಿದ್ದ ರವಿಶಾಸ್ತ್ರಿ 2015ರ ಏಕದಿನ ವಿಶ್ವಕಪ್‌ವರೆಗೆ ಹುದ್ದೆಯಲ್ಲಿದ್ದರು. ಬಳಿಕ 2017ರ ಜುಲೈನಲ್ಲಿ ಮುಖ್ಯ ಕೋಚ್ ಆಗಿ ಮರಳಿದ್ದರು ಮತ್ತು 2019ರ ಆಗಸ್ಟ್‌ನಲ್ಲಿ ಮರುನೇಮಕಗೊಂಡಿದ್ದರು. ಈ ಮೊದಲೇ ಖಚಿತಗೊಂಡಿದ್ದಂತೆ ಟಿ20 ವಿಶ್ವಕಪ್ ಬಳಿಕ ಅವರು ಹುದ್ದೆಯಿಂದ ನಿರ್ಗಮಿಸಲಿದ್ದು, ಅವರ ಮಾರ್ಗದರ್ಶನದಲ್ಲಿ ನಮೀಬಿಯ ವಿರುದ್ಧ ಭಾರತ ತಂಡ ಕೊನೇ ಪಂದ್ಯವಾಡಲಿದೆ. ತಂಡದಿಂದ ಅವರಿಗೆ ಭರ್ಜರಿ ಗೆಲುವಿನ ಉಡುಗೊರೆ ಸಿಗುವ ನಿರೀಕ್ಷೆ ಇದೆ.

Semi Final, T20 World Cup: ಟಿ20 ವಿಶ್ವಕಪ್ ಸೆಮಿ ಫೈನಲ್​ಗೆ ವೇದಿಕೆ ಸಜ್ಜು: ಮೊದಲ ಪಂದ್ಯದಲ್ಲಿ ಯಾವ ತಂಡ ಮುಖಾಮುಖಿ?

(India vs Namibia T20 World Cup Match Today Virat Kohli lead the country one last time in the T20I Cricket)

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ