ಏಷ್ಯಾಕಪ್ 2023ರ ಫೈನಲ್‌ಗೂ ಮುನ್ನ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ಟೂರ್ನಿಯಲ್ಲಿ ಸೋಲನುಭವಿಸಿದೆ. ಸೂಪರ್-4 ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ 6 ರನ್‌ಗಳಿಂದ ಸೋತಿದೆ. ಶುಭ್ಮನ್ ಗಿಲ್ ಅವರ ಶಕ್ತಿಶಾಲಿ ಶತಕಕ್ಕೂ ಟೀಂ ಇಂಡಿಯಾವನ್ನು ಈ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಬದಲಾವಣೆಗಳೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಬ್ಯಾಟಿಂಗ್ ಈ ಪಂದ್ಯದಲ್ಲಿ ದಯನೀಯವಾಗಿ ವಿಫಲವಾಗಿದ್ದು, ಬಾಂಗ್ಲಾದೇಶ ನೀಡಿದ 266 ರನ್‌ಗಳ ಗುರಿಗೆ ಉತ್ತರವಾಗಿ ಕೇವಲ 259 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಏಷ್ಯಾಕಪ್ (ODI) ಇತಿಹಾಸದಲ್ಲಿ ಬಾಂಗ್ಲಾದೇಶ ಎರಡನೇ ಬಾರಿಗೆ ಭಾರತವನ್ನು ಸೋಲಿಸಿದ ಸಾಧನೆ ಮಾಡಿದೆ. ಇಷ್ಟೇ ಅಲ್ಲ ಏಕದಿನ ರ ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆಯುವ ಅವಕಾಶವೂ ಟೀಂ ಇಂಡಿಯಾದ ಕೈತಪ್ಪಿದೆ.
ಏಷ್ಯಾಕಪ್‌ನ ಫೈನಲ್‌ಗೂ ಮುನ್ನ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತವನ್ನು 6 ರನ್‌ಗಳಿಂದ ಸೋಲಿಸಿದೆ.ಬಾಂಗ್ಲಾ ನೀಡಿದ 266 ರನ್‌ಗಳ ಗುರಿಯನ್ನು ಭಾರತಕ್ಕೆ ಸಾಧಿಸಲು ಸಾಧ್ಯವಾಗಲಿಲ್ಲ ಮತ್ತು ಇಡೀ ತಂಡ 259 ರನ್‌ಗಳಿಗೆ ಆಲೌಟ್ ಆಯಿತು.
ಟೀಂ ಇಂಡಿಯಾ ಗೆಲುವಿಗೆ 12 ರನ್‌ಗಳ ಅಗತ್ಯವಿದ್ದು, ಇನ್ನು 6 ಎಸೆತಗಳು ಬಾಕಿ ಉಳಿದಿವೆ. ಈಗ ಕೇವಲ ಒಂದು ವಿಕೆಟ್ ಮಾತ್ರ ಉಳಿದಿರುವುದು ಆತಂಕದ ವಿಚಾರ.
48ನೇ ಓವರ್ನಲ್ಲಿ ಅಕ್ಷರ್ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಈ ಓವರ್ನಲ್ಲಿ 14 ರನ್ ಬಂದವು. ಭಾರತದ ಗೆಲುವಿಗೆ 12 ಎಸೆತಗಳಲ್ಲಿ 17 ರನ್ ಬೇಕು.
ಭಾರತದ ಗೆಲುವಿಗೆ 18 ಎಸೆತಗಳಲ್ಲಿ 31 ರನ್ ಬೇಕಾಗಿದೆ. ಟೀಂ ಇಂಡಿಯಾದ ಕೈಯಲ್ಲಿ ಇನ್ನು 3 ವಿಕೆಟ್ ಉಳಿದಿದೆ.
ಭಾರತದ 7ನೇ ವಿಕೆಟ್ ಪತನವಾಗಿದೆ. 121 ರನ್ ಸಿಡಿಸಿದ್ದ ಗಿಲ್, ಸಿಕ್ಸರ್ ಬಾರಿಸುವ ಯತ್ನದಲ್ಲಿ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ.
ಭಾರತದ ಗೆಲುವಿಗೆ 42 ಎಸೆತಗಳಲ್ಲಿ 64 ರನ್ ಬೇಕಿದೆ. ಗಿಲ್ ಶತಕ ಗಳಿಸಿ ಆಡುತ್ತಿದ್ದರೆ, ಅಕ್ಷರ್ 10 ರನ್ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.
ಸತತ ವಿಕೆಟ್ಗಳ ವೈಫಲ್ಯದ ನಡುವೆಯೂ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್, 118 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದಾರೆ. ಗಿಲ್ ಅವರ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಕೂಡ ಸೇರಿದ್ದವು.
ನಿರ್ಣಾಯಕ ಹಂತದಲ್ಲಿ ಭಾರತದ 6ನೇ ವಿಕೆಟ್ ಪತನವಾಗಿದೆ. ಗಿಲ್ಗೆ ಸಾಥ್ ನೀಡಬೇಕಿದ್ದ ಜಡೇಜಾ, ಕ್ಲೀನ್ ಬೌಲ್ಡ್ ಆಗಿ 7 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ.
36ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಗಿಲ್ ಸತತ ಎರಡು ಸಿಕ್ಸರ್ ಬಾರಿಸಿದರು. ಇದರೊಂದಿಗೆ ಭಾರತದ 150 ರನ್ ಕೂಡ ಪೂರ್ಣಗೊಂಡಿದೆ.
ಭಾರತಕ್ಕೆ ಇನ್ನು 15 ಓವರ್ ಉಳಿದಿದ್ದು, ಒಟ್ಟು 90 ಎಸೆತಗಳಲ್ಲಿ ಭಾರತ 117 ರನ್ ಕಲೆಹಾಕಬೇಕಿದೆ. ಗಿಲ್ ಹಾಗೂ ಜಡೇಜಾ ಕ್ರೀಸ್‌ನಲ್ಲಿದ್ದಾರೆ.
ಭಾರತದ 5ನೇ ವಿಕೆಟ್ ಪತನವಾಗಿದೆ. ಭಾರತದ ಇನ್ನಿಂಗ್ಸ್ಗೆ ಆಸರೆಯಾಗಿದ್ದ ಸೂರ್ಯಕುಮಾರ್ ಯಾದವ್ ಸ್ವಿಪ್ ಶಾಟ್ ಆಡುವ ಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು.
ಭಾರತದ ಇನ್ನಿಂಗ್ಸ್ನ 30 ಓವರ್ ಮುಗಿದಿದೆ. ಭಾರತ 4 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದೆ. ಈ ಓವರ್ನಲ್ಲಿ ಸೂರ್ಯ 1 ಬೌಂಡರಿ ಕೂಡ ಹೊಡೆದರು.
ಭಾರತದ 4ನೇ ವಿಕೆಟ್ ಪತನವಾಗಿದೆ. ಇಶಾನ್ ಕಿಶನ್ ರಿವರ್ಸ್ವೀಪ್ ಹೊಡೆಯುವ ಯತ್ನದಲ್ಲಿ ಎಲ್ಬಿ ಬಲೆಗೆ ಬಿದ್ದಿದ್ದಾರೆ. ಮೆಹದಿ ಹಸನ್ಗೆ ಈ ವಿಕೆಟ್ ಸಿಕ್ಕಿದೆ.
ಭಾರತ 94/4
ಸತತ ವಿಕೆಟ್ಗಳ ನಡುವೆ ಕಂಗೆಟ್ಟಿರುವ ಭಾರತಕ್ಕೆ ಗಿಲ್ ಇನ್ನಿಂಗ್ಸ್ ಆಸರೆಯಾಗಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ಗಿಲ್, 61 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. 20ನೇ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಗಿಲ್ ತಮ್ಮ ಅರ್ಧಶತಕ ಪೂರೈಸಿದರು.
ಭಾರತದ ಮೂರನೇ ವಿಕೆಟ್ ಪತನವಾಗಿದೆ. 19 ರನ್ ಗಳಿಸಿದ್ದ ರಾಹುಲ್, ಮೆಹದಿ ಹಸನ್ಗೆ ಬಲಿಯಾಗಿದ್ದಾರೆ. ಭಾರತದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 74, ಗೆಲುವಿಗೆ ಇನ್ನೂ 192 ರನ್ ಅಗತ್ಯವಿದೆ.
ಇನ್ನಿಂಗ್ಸ್ನ 12ನೇ ಓವರ್ನಲ್ಲಿ ಭಾರತ ತನ್ನ ಅರ್ಧಶತಕವನ್ನು ಪೂರೈಸಿದೆ, ಶಕೀಬ್ ಬೌಲ್ ಮಾಡಿದ ಈ ಓವರ್‌ನ 4ನೇ ಎಸೆತದಲ್ಲಿ ಗಿಲ್, ಕವರ್ ದಿಕ್ಕಿನಲ್ಲಿ ಬೌಂಡರಿ ಕೂಡ ಬಾರಿಸಿದರು.
ಭಾರತದ ಪವರ್ ಪ್ಲೇ ಮುಗಿದಿದ್ದು, ಇದರಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 42 ರನ್ ಕಲೆಹಾಕಿದೆ. ರಾಹುಲ್ ಹಾಗೂ ಗಿಲ್ ಕ್ರೀಸ್‌ನಲ್ಲಿದ್ದಾರೆ.
8ನೇ ಓವರ್‌ನ 3 ಮತ್ತು 5ನೇ ಎಸೆತದಲ್ಲಿ ಗಿಲ್ 2 ಬೌಂಡರಿ ಬಾರಿಸಿದರು. ಮೊದಲ ಬೌಂಡರಿ ಪಾಯಿಂಟ್ನಲ್ಲಿ ಬಂದರೆ, ಎರಡನೆಯದ್ದು ಶಾರ್ಟ್ ಥರ್ಡ್ ಮ್ಯಾನ್ನಲ್ಲಿ ಬಂತು.
ಭಾರತದ ಇನ್ನಿಂಗ್ಸ್ನ 5 ಓವರ್ ಮುಗಿದಿದ್ದು, ಭಾರತ 2 ವಿಕೆಟ್ ಕಳೆದುಕೊಂಡು 23 ರನ್ ಕಲೆಹಾಕಿದೆ. ರಾಹುಲ್ ಹಾಗೂ ಗಿಲ್ ಕ್ರೀಸ್‌ನಲ್ಲಿದ್ದಾರೆ.
ಬಾಂಗ್ಲಾದೇಶ ಪರ ತಮ್ಮ ಚೊಚ್ಚಲ ಪಂದ್ಯವನ್ನು ಆಡುತ್ತಿರುವ ತಂಜಿಮ್ ಶಾಕಿಬ್, ತಿಲಕ್ ವರ್ಮಾ ಅವರ ವಿಕೆಟ್ ಪಡೆದರು. ತಿಲಕ್ 9 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಮರಳಿದರು. ಶಾಕಿಬ್ಗೆ ಇದು 2ನೇ ವಿಕೆಟ್
ಭಾರತದ ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.
ಭಾರತಕ್ಕೆ ಗೆಲ್ಲಲು ಬಾಂಗ್ಲಾದೇಶ ತಂಡ 265 ರನ್‌ಗಳ ಟಾರ್ಗೆಟ್ ನೀಡಿದೆ. ತಂಡದ ಪರ ನಾಯಕ ಶಕೀಬ್ 80 ರನ್, ತೌಹಿದ್ ಹೃದಯೊಯ್ 54 ರನ್ ಹಾಗೂ ನಸುಮ್ ಅಹ್ಮದ್ 44 ರನ್‌ಗಳ ಇನ್ನಿಂಗ್ಸ್ ಆಡಿದರು. ಭಾರತದ ಪರ ಶಾರ್ದೂಲ್ 3 ವಿಕೆಟ್ ಪಡೆದರೆ, ಶಮಿ 2 ಹಾಗೂ ಅಕ್ಷರ್, ಜಡೇಜಾ, ಪ್ರಸಿದ್ಧ್ ತಲಾ ಒಂದೊಂದು ವಿಕೆಟ್ ಪಡೆದರು.
ಆರಂಭದಲ್ಲಿ ಎಡವಿದ್ದ ಬಾಂಗ್ಲಾದೇಶ ಅಂತಿಮವಾಗಿ 250ರ ಗಡಿ ದಾಟಿತು. ಕೊನೆಯಲ್ಲಿ ಮೆಹದಿ ಹಸನ್ ಸ್ವಲ್ಪ ಪ್ರಯತ್ನ ಮಾಡಿ ತಂಡವನ್ನು ಈ ಹಂತಕ್ಕೆ ಕೊಂಡೊಯ್ದರು.
ಬಾಂಗ್ಲಾದೇಶ ಪರ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ನಸುಮ್ ಅಹ್ಮದ್ ಅವರನ್ನು ಪ್ರಸಿದ್ಧ್ ಕೃಷ್ಣ ಬಲಿ ಪಡೆದಿದ್ದಾರೆ. 44 ರನ್ ಗಳಿಸಿದ್ದ ನಸುಮ್ ಆರು ರನ್‌ಗಳಿಂದ ತಮ್ಮ ಅರ್ಧಶತಕವನ್ನು ತಪ್ಪಿಸಿಕೊಂಡರು.
ಬಾಂಗ್ಲಾ ತಂಡದ 200 ರನ್ ಪೂರ್ಣಗೊಂಡಿದೆ. ತಂಡದ 7 ವಿಕೆಟ್ಗಳು ಪತನವಾಗಿದ್ದು, ತಂಡದ ಪರ ನಸುಮ್ 29 ರನ್ ಸಿಡಿಸಿ ಏಕಾಂಗಿಯಾಗಿ ಹೋರಾಟ ನೀಡುತ್ತಿದ್ದಾರೆ.
ಬಾಂಗ್ಲಾ ಪರ 54 ರನ್ ಸಿಡಿಸಿ ಆಡುತ್ತಿದ್ದ ತೌಹಿದ್ ಹೃದಯೊಯ್ ಸಿಕ್ಸರ್ ಬಾರಿಸುವ ಯತ್ನದಲ್ಲಿ ತಿಲಕ್ ವರ್ಮಾ ಅವರಿಗೆ ಕ್ಯಾಚಿತ್ತು ಔಟಾಗಿದ್ದಾರೆ.
ಬಾಂಗ್ಲಾ 193/7
ರವೀಂದ್ರ ಜಡೇಜಾ ಇದೀಗ ಬಾಂಗ್ಲಾದೇಶಕ್ಕೆ ಶಾಕ್ ನೀಡಿದ್ದು, ಶಮೀಮ್ ಹುಸೇನ್ ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಉರುಳಿಸಿದ ಸಾಧನೆ ಮಾಡಿದ್ದಾರೆ.
80 ರನ್ ಸಿಡಿಸಿ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ಶಕೀಬ್ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿದ್ದಾರೆ. ಈ ಮೂಲಕ ಬಾಂಗ್ಲಾ ತನ್ನ 5ನೇ ವಿಕೆಟ್ ಕಳೆದುಕೊಂಡಿದೆ. ಅಲ್ಲದೆ ಹೃದಯ್ ಹಾಗೂ ಶಕೀಬ್ ಅವರ ಶತಕದ ಜೊತೆಯಾಟವೂ ಅಂತ್ಯಗೊಂಡಿದೆ.
ಬಾಂಗ್ಲಾ ಇನ್ನಿಂಗ್ಸ್ನ 30 ಓವರ್ ಮುಗಿದಿದೆ. ಇಲ್ಲಿ ಬಾಂಗ್ಲಾ 4 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿದೆ. ನಾಯಕ ಶಕೀಬ್ ಅರ್ಧಶತಕ ಸಿಡಿಸಿ ಆಡುತ್ತಿದ್ದರೆ, ಹೃದಯೋ 30 ರನ್ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.
ಸಂಕಷ್ಟದ ಸ್ಥಿತಿಯಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿರುವ ಭಾಂಗ್ಲಾ ನಾಯಕ ಶಕೀಬ್ 26ನೇ ಓವರ್‌ನ 4ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಇದೇ ಓವರ್ನಲ್ಲಿ ಮತ್ತೊಂದು ಸಿಕ್ಸರ್ ಕೂಡ ಬಂತು.
24 ಓವರ್ ಅಂತ್ಯಕ್ಕೆ ಬಾಂಗ್ಲಾ ತನ್ನ ಶತಕ ಪೂರೈಸಿದೆ. 24ನೇ ಓವರ್ನಲ್ಲಿ ಸ್ಲಿಪ್ನಲ್ಲಿ ಭಾರತ ಮತ್ತೊಂದು ಕ್ಯಾಚ್ ಕೈಚೆಲ್ಲಿತು. ಹೀಗಾಗಿ ಚೆಂಡು ಬೌಂಡರಿ ದಾಟಿತು. ಈ ಮೂಲಕ ಬಾಂಗ್ಲಾ ಶತಕದ ಗಡಿ ದಾಟಿತು.
ಬಾಂಗ್ಲಾದೇಶ 18 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 71 ರನ್ ಗಳಿಸಿದೆ. ಸದ್ಯ ಶಕೀಬ್ ಅಲ್ ಹಸನ್ 28 ರನ್ ಹಾಗೂ ತೌಹಿದ್ ಹೃದಯ್ ನಾಲ್ಕು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಅಕ್ಷರ್ ಪಟೇಲ್ಗೆ ಮೊದಲ ವಿಕೆಟ್ ಸಿಕ್ಕಿದೆ. ಬಾಂಗ್ಲಾ ಇನ್ನಿಂಗ್ಸ್ನ 14ನೇ ಓವರ್ ಬೌಲ್ ಮಾಡಿದ ಅಕ್ಷರ್, ಓವರ್‌ನ ಕೊನೆಯ ಎಸೆತದಲ್ಲಿ ಹಸನ್ ವಿಕೆಟ್ ಪಡೆದರು. ಹಸನ್ ಸ್ಲಿಪ್ನಲ್ಲಿ ಕ್ಯಾಚಿತ್ತು ಔಟಾದರು.
ಹಸನ್ 13 ರನ್ (28 ಎಸೆತ)
ಬಾಂಗ್ಲಾ 59/4
ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ 13ನೇ ಓವರ್‌ನ 3ನೇ ಎಸೆತವನ್ನು ಮೆಹಿದಿ ಹಸನ್ ಬೌಂಡರಿಗಟ್ಟಿದರು. ಪ್ರಸಿದ್ಧ್ ಬೌಲ ಮಾಡಿದ ಲೆಂಥ್ ಬಾಲನ್ನು ಮಿರಜ್, ಮಿಡ್ ಆಫ್ ಕಡೆ ಆಡಿ ಬೌಂಡರಿ ಪಡೆದರು.
ಬಾಂಗ್ಲಾ 58/3
ಬಾಂಗ್ಲಾ ಇನ್ನಿಂಗ್ಸ್ನ 10 ಓವರ್ ಮುಗಿದಿದೆ. ಈ ಬ್ಯಾಟಿಂಗ್ ಪವರ್ ಪ್ಲೇನಲ್ಲಿ ಬಾಂಗ್ಲಾ 3 ವಿಕೆಟ್ ಕಳೆದುಕೊಂಡು 44 ರನ್ ಕಲೆಹಾಕಿದೆ. 10ನೇ ಓವರ್ನಲ್ಲಿ ತಿಲಕ್ ಹಾಗೂ ಸೂರ್ಯಕುಮಾರ್ ಯಾದವ್ ಸುಲಭದ ಕ್ಯಾಚ್ ಕೈಚೆಲ್ಲಿದರು.
ಶಾರ್ದೂಲ್ ಠಾಕೂರ್ಗೆ 2ನೇ ವಿಕೆಟ್. ಶಾರ್ದೂಲ್ ಠಾಕೂರ್ ಅವರ ಶಾರ್ಟ್ ಬಾಲನ್ನು ಅನಾಮುಲ್ ಹಕ್ ಅವರು ನೇರವಾಗಿ ಗಾಳಿಯಲ್ಲಿ ಆಡಿದರು. ಕೀಪರ್, ಕೆಎಲ್ ರಾಹುಲ್ ತನ್ನ ಎಡಕ್ಕೆ ಓಡಿ ಸುಲಭ ಕ್ಯಾಚ್ ತೆಗೆದುಕೊಂಡರು.
ಬಾಂಗ್ಲಾ ಇನ್ನಿಂಗ್ಸ್ನ 5 ಓವರ್ ಮುಗಿದಿದೆ. ಈ ಐದು ಓವರ್‌ಗಳಲ್ಲಿ ಬಾಂಗ್ಲಾ 2 ವಿಕೆಟ್ ಕಳೆದುಕೊಂಡು 24 ರನ್ ಕಲೆಹಾಕಿದೆ. ಐದನೇ ಓವರ್ನಲ್ಲಿ ನಾಯಕ ಶಕೀಬ್ ಮಿಡ್ ಆಫ್ ಮೇಲೆ ಬೌಂಡರಿ ಕೂಡ ಬಾರಿಸಿದರು.
ಬಾಂಗ್ಲಾದ ಮತ್ತೊಬ್ಬ ಆರಂಭಿಕ ಹಸನ್ 4ನೇ ಓವರ್‌ನ ಮೊದಲ ಎಸೆತದಲ್ಲಿ ಬೌಲ್ಡ್ ಆದರು. ಶಾರ್ದೂಲ್ ಠಾಕೂರ್ ಈ ವಿಕೆಟ್ ಉರುಳಿಸಿದರು.
ಬಾಂಗ್ಲಾ 15/2
ಶಮಿ ಬೌಲ್ ಮಾಡಿದ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ಲಿಟನ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಲಿಟನ್ಗೆ ಖಾತೆ ತೆರೆಯಲು ಆಗಲಿಲ್ಲ.
ತಂಝಿದ್ ಹಸನ್ ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ನಾಲ್ಕನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು.
ಬಾಂಗ್ಲಾದೇಶ ಬ್ಯಾಟಿಂಗ್ ಆರಂಭಿಸಿದ್ದು, ಹಸನ್ ಮತ್ತು ಲಿಟನ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಶಮಿ ಬೌಲ್ ಮಾಡಿದ ಮೊದಲ ಓವರ್ನಲ್ಲಿ ಬೌಂಡರಿ ಸೇರಿದಂತೆ 5 ರನ್ ಬಂತು.
ಶಕೀಬ್ ಅಲ್ ಹಸನ್ (ನಾಯಕ), ತಂಝೀದ್ ಹಸನ್, ತಮೀಮ್ ಇಕ್ಬಾಲ್, ಅನಾಮುಲ್ ಹಕ್, ತೌಹಿತ್ ಹೃದಯ್, ಶಮೀಮ್ ಹೊಸೈನ್, ಮೆಹದಿ ಹಸನ್ ಮಿರಾಜ್, ಮಹೇದಿ ಹಸನ್, ನಸುಮ್ ಅಹ್ಮದ್, ತಂಝೀಮ್ ಹಸನ್ ಶಕೀಬ್, ಮುಸ್ತಫಿಜುರ್ ರಹಮಾನ್.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಮೈದಾನಕ್ಕಿಳಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿದೆ.
Published On - 2:32 pm, Fri, 15 September 23