India vs England 2nd Test: ಭಾರತ ತಂಡ ಇಷ್ಟು ರನ್ ಗಳಿಸಿದರೆ ನಮಗೆ ಗೆಲುವು ತುಂಬಾನೆ ಕಷ್ಟ ಎಂದ ಮೊಯೀನ್ ಅಲಿ

| Updated By: Vinay Bhat

Updated on: Aug 16, 2021 | 11:34 AM

4ನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದೆ. 154 ರನ್​ಗಳ ಮುನ್ನಡೆಯಲ್ಲಿದೆ. ರಿಷಭ್ ಪಂತ್ 14 ರನ್ ಹಾಗೂ ಇಶಾಂತ್ ಶರ್ಮಾ 4 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

India vs England 2nd Test: ಭಾರತ ತಂಡ ಇಷ್ಟು ರನ್ ಗಳಿಸಿದರೆ ನಮಗೆ ಗೆಲುವು ತುಂಬಾನೆ ಕಷ್ಟ ಎಂದ ಮೊಯೀನ್ ಅಲಿ
India vs England
Follow us on

ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ (India) ಆರಂಭಿಕರು ಕೈಕೊಟ್ಟರೂ ಅಜಿಂಕ್ಯಾ ರಹಾನೆ (Ajinkya Rahane) ಹಾಗೂ ಚೇತೇಶ್ವರ್ ಪೂಜಾರ ಅವರ ಶತಕದ ಜೊತೆಯಾಟದ ನೆರವು ತುಂಬಾನೆ ಸಹಕಾರಿ ಆಗಿದೆ. ಪರಿಣಾಮ ಅಂತಿಮ ದಿನಕ್ಕೆ ಪಂದ್ಯ ರೋಚಕತೆ ಸೃಷ್ಟಿಸಿದ್ದು, ಭಾರತದ ಗೆಲುವಿನ ಆಸೆ ಇನ್ನೂ ಜೀವಂತವಾಗಿದೆ. ರಿಷಭ್ ಪಂತ್ (Rishabh Pant) ಆಟದ ಮೇಲೆ ಭಾರತ ಅವಲಂಬಿತವಾಗಿದೆ. ಹೀಗಿರುವಾಗ ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೊಯೀನ್ ಅಲಿ (Moeen Ali) ಗೆಲುವಿನ ಲೆಕ್ಕಚಾರದ ಬಗ್ಗೆ ಕೆಲವು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಲಾರ್ಡ್ಸ್ ಮೈದಾನದಲ್ಲಿ ಚೇಸಿಂಗ್ ಯಾವತ್ತಿದ್ದರೂ ಕಷ್ಟ. ಸ್ಲೋ ಪಿಚ್ ಅನ್ನು ಪರಿಗಣಿಸಿ ಹೇಳುವುದಾದರೆ ಭಾರತ ನಮಗೆ 220-230 ರನ್​ಗಳ ಟಾರ್ಗೆಟ್ ನೀಡಿದರೆ ಚೇಸ್ ಮಾಡುವುದು ತುಂಬಾನೆ ಕಷ್ಟ, ಆದರೆ, ಇದು ಅಸಾಧ್ಯವಲ್ಲ ಎಂದು ಹೇಳಿದ್ದಾರೆ. ಅಂತೆಯೆ ರಿಷಭ್ ಪಂತ್ ಸಾಮರ್ಥ್ಯ ಮತ್ತು ಆತ ಎಷ್ಟು ಅಪಾಯಕಾರಿ ಎಂಬುವುದು ತಿಳಿದಿದೆ. ಭಾರತವನ್ನು ಆದಷ್ಟು ಬೇಗ ಕಟ್ಟಿ ಹಾಕಬೇಕು ಎಂದು ಅಲಿ ಹೇಳಿದ್ದಾರೆ.

 

4ನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದೆ. 154 ರನ್​ಗಳ ಮುನ್ನಡೆಯಲ್ಲಿದೆ. ರಿಷಭ್ ಪಂತ್ 14 ರನ್ ಹಾಗೂ ಇಶಾಂತ್ ಶರ್ಮಾ 4 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸದ್ಯ ರಿಷಭ್ ಪಂತ್ ಮೇಲೆ ಭಾರತ ಅವಲಂಬಿತವಾಗಿದೆ. ಅಂತಿಮ ಐದನೇ ದಿನ ಪಂತ್ ತಮ್ಮ ಆಕ್ರಮಣಕಾರಿ ಆಟ ತೋರಿಸಬೇಕಿದೆ. ಡ್ರಾ ಮಾಡುವ ಯೋಜನೆಯಲ್ಲಿದ್ದರೆ ಮಧ್ಯಾಹ್ನದ ವರೆಗೂ ಕ್ರೀಸ್​ನಲ್ಲಿ ನಿಲ್ಲಬೇಕಿದೆ.

ಇದರ ನಡುವೆ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾ ಇಂಗ್ಲೆಂಡ್​ಗೆ 225 ರನ್​ಗಳ ಟಾರ್ಗೆಟ್ ನೀಡಿದರೆ ಗೆಲುವು ಸಾಧಿಸುವ ಚಾನ್ಸ್ ಇದೆ ಎಂದು ಖಚಿತವಾಗಿ ಹೇಳಿದ್ದಾರೆ. ಅಂದರೆ ಭಾರತ ಇನ್ನೂ 70 ರನ್​ಗಳ ಮುನ್ನಡೆಯನ್ನಾದರೂ ಸಾಧಿಸಬೇಕಿದೆ. ಹೀಗಾಗಿ ಪಂತ್ ಆಟದ ಮೇಲೆ ಭಾರತದ ಗೆಲುವಿನ ನಿರ್ಧಾರ ನಿಂತಿದೆ.

ಇನ್ನೂ ಅಂತಿಮ ದಿನದ ಹವಾಮಾನ ನೋಡುವುದಾದರೆ, ತಂಪಾದ 18 ಡಿಗ್ರಿ ತಾಪಮಾನ ಇರಲಿದೆ. 4ನೇ ದಿನಕ್ಕಿಂತ ಕೊಂಚ ಗಾಳಿ ಅಧಿಕವಾಗಿರಲಿದೆ. ತೇವಾಂಶವು ಸುಮಾರು 50-60% ನಷ್ಟು ಇರುತ್ತದೆ. ಹೀಗಾಗಿ ವರುಣನ ಕಾಟ ಅನುಮಾನ ಎಂದು ಹೇಳಲಾಗಿದೆ.

India vs England 2nd Test: 5ನೇ ದಿನ ಭಾರತವನ್ನು ಕಾಪಾಡುತ್ತಾನ ವರುಣದೇವ?: ಹವಾಮಾನ ವರದಿ ಏನು ಹೇಳುತ್ತೇ?

Virat Kohli: ಔಟ್ ಆದ ಕೋಪದಲ್ಲಿ ಡ್ರೆಸ್ಸಿಂಗ್ ರೂಮ್ ತೆರಳಿ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ

(India vs England 2nd Test India Runs 220-230 will be tough to chase at Lords told Moeen Ali)

Published On - 11:32 am, Mon, 16 August 21