India vs England 2nd Test: ದಾಖಲೆಯ ಜೊತೆಯಾಟ ಆಡಿ ಡ್ರೆಸ್ಸಿಂಗ್ ರೂಮ್​ಗೆ ಬಂದ ಶಮಿ-ಬುಮ್ರಾಗೆ ಬಿಗ್ ಸರ್​ಪ್ರೈಸ್

| Updated By: Vinay Bhat

Updated on: Aug 17, 2021 | 12:04 PM

Mohammed Shami: ಟೀಮ್ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಗೆಲುವಿನ ದಡದತ್ತ ಕೊಂಡೊಯ್ದ ಶಮಿ-ಬುಮ್ರಾ ಜೋಡಿಗೆ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಪ್ರೇಕ್ಷಕರೆಲ್ಲಾ ಎದ್ದು ನಿಂತು ಗೌರವ ಸಲ್ಲಿಸಿದರು.

India vs England 2nd Test: ದಾಖಲೆಯ ಜೊತೆಯಾಟ ಆಡಿ ಡ್ರೆಸ್ಸಿಂಗ್ ರೂಮ್​ಗೆ ಬಂದ ಶಮಿ-ಬುಮ್ರಾಗೆ ಬಿಗ್ ಸರ್​ಪ್ರೈಸ್
Mohammed Shami and Jasprit Bumrah
Follow us on

ಕ್ರಿಕೆಟ್ ಕಾಶಿ ಲಾರ್ಡ್ಸ್ (Lords) ಮೈದಾನದಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ (India) ಐತಿಹಾಸಿಕ ಗೆಲುವು ಸಾಧಿಸಿತು. ಐದನೇ ದಿನದ ರೋಚಕ ಕದನದಲ್ಲಿ ಭಾರತೀಯ ಬೌಲರ್​ಗಳು ಬ್ಯಾಟ್ಸ್​ಮನ್ ಆಗಿ ಅಬ್ಬರಿಸಿದರು. ಮೊಹಮ್ಮದ್ ಶಮಿ (Mohammed Shami) ಮತ್ತು ಜಸ್​ಪ್ರೀತ್ ಬುಮ್ರಾ (Jasprit Bumrah) 9ನೇ ವಿಕೆಟ್​​ಗೆ ದಾಖಲೆಯ ಜೊತೆಯಾಟ ಆಡಿ ಇತಿಹಾಸದ ಪುಟ ಸೇರಿದರು. ಇಂಗ್ಲೆಂಡ್‌ ವೇಗಿಗಳ ಬೌನ್ಸರ್‌ಗಳಿಂದ ಸಾಕಷ್ಟು ಪೆಟ್ಟು ತಿಂದರೂ ಕದಲದ ಈ ಜೋಡಿ ಕ್ರೀಸ್ ಕಚ್ಚು ನಿಂತು ಎದುರಾಳಿಗೆ ಸವಾಲಿನ ಗುರಿ ನೀಡಿದರು.

ಇಂಗ್ಲೆಂಡ್ ಬೌಲರ್​ಗಳ ಮಾರಕ ದಾಳಿಯನ್ನ ಥೇಟ್ ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳಂತೆ ಎದುರಿಸಿದ ಶಮಿ-ಬುಮ್ರಾ ಟೀಮ್ ಇಂಡಿಯಾ ಸ್ಕೋರ್‌ ಅನ್ನು 250ರ ಗಡಿ ದಾಟಿಸಿದರು. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಎರಡನೇ ಅರ್ಧತಕ ಸಿಡಿಸಿ ಮಿಂಚಿದರು. ಇವರಿಬ್ಬರು ಒಂಬತ್ತನೇ ವಿಕೆಟ್​ಗೆ 89 ರನ್​ಗಳ ಜೊತೆಯಾಟವನ್ನು ಹಂಚಿಕೊಂಡರು, ಇದು ಇಂಗ್ಲೆಂಡ್​ನಲ್ಲಿ ಭಾರತಕ್ಕೆ ಒಂಬತ್ತನೇ ವಿಕೆಟ್​ಗೆ ಇದುವರೆಗಿನ ಗರಿಷ್ಠ ಜೊತೆಯಾಟವಾಗಿದೆ.

ಟೀಮ್ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಗೆಲುವಿನ ದಡದತ್ತ ಕೊಂಡೊಯ್ದ ಶಮಿ-ಬುಮ್ರಾ ಜೋಡಿಗೆ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಪ್ರೇಕ್ಷಕರೆಲ್ಲಾ ಎದ್ದು ನಿಂತು ಗೌರವ ಸಲ್ಲಿಸಿದರು. ಅದರಲ್ಲೂ ಶಮಿ ಹಾಗೂ ಬುಮ್ರಾ ಭಾರತದ ಡ್ರೆಸ್ಸಿಂಗ್ ರೂಮ್​ಗೆ ಬಂದ ವೇಳೆ ಅಲ್ಲಿದ್ದ ಎಲ್ಲ ಆಟಗಾರರು ಎದ್ದುನಿಂತು ದೊಡ್ಡದಾಗಿ ಕ್ಲಾಪ್ ಹೊಡೆದರು. ಇದನ್ನ ಕಂಡ ಇವರಿಬ್ಬರು ಒಮ್ಮೆ ದಂಗಾದರು. ಬಿಸಿಸಿಐ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

 

ಎರಡನೇ ಇನಿಂಗ್ಸ್‌ನಲ್ಲಿ 194 ರನ್‌ಗಳಿಗೆ 7ನೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆಸರೆಯಾಗಿ ನಿಂತ ಮೊಹಮ್ಮದ್‌ ಶಮಿ (58*) ಮತ್ತು ಜಸ್‌ಪ್ರೀತ್‌ ಬುಮ್ರಾ (34*) 9ನೇ ವಿಕೆಟ್‌ಗೆ ಮುರಿಯದ 89 ರನ್‌ಗಳ ಜೊತೆಯಾಟವನ್ನಾಡಿದ್ದರು. ಒಂದು ಹಂತದಲ್ಲಿ 200 ರನ್‌ಗಳ ಮುನ್ನಡೆಯೂ ಕಷ್ಟ ಎಂಬ ಪರಿಸ್ಥಿತಿಯಲ್ಲಿದ್ದ ಭಾರತ ತಂಡ ಟೇಲೆಂಡರ್‌ಗಳ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 271 ರನ್‌ಗಳ ಮುನ್ನಡೆ ಪಡೆದು ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

272 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್​ ಭಾರತೀಯ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಕನಿಷ್ಠ ಡ್ರಾ ಮಾಡುವಲ್ಲೂ ಯಶಸ್ವಿಯಾಗದ ರೂಟ್ ಪಡೆ 120 ರನ್​ಗೆ ಸರ್ವಪತನ ಕಂಡಿತು. ಭಾರತ 151 ರನ್​ಗಳ ಅಮೋಘ ಜಯದೊಂದಿಗೆ 1-0 ಮುನ್ನಡೆ ಸಾಧಿಸಿ ಲಾರ್ಡ್ಸ್​ನಲ್ಲಿ ಐತಿಹಾಸಿಕ ಜಯ ಸಾಧಿಸಿತು.

KL Rahul: ಇಲ್ಲಿ ನಮ್ಮ ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ತಿರುಗಿ ಬೀಳುತ್ತೇವೆ: ಕೆ.ಎಲ್ ರಾಹುಲ್

ICC T20 World Cup Schedule: ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಪಂದ್ಯ ಯಾವಾಗ?

(India vs England 2nd Test: Mohammed Shami and Jasprit Bumrah receive grand welcome from Indian dressing room)